ಬೆಂಗಳೂರು: ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ವಾರ್ಷಿಕ ಕೇಕ್ ಪ್ರದರ್ಶನಕ್ಕೆ 50 ವರ್ಷ ಆಗಿರುವ ಹಿನ್ನೆಲೆ ಈ ಭಾರಿ ಅರಮನೆ ಮೈದಾನದಲ್ಲಿ ಅದ್ಧೂರಿ ಕೇಕ್ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಬಾರಿಯ ಕ್ರಿಸ್‌ಮಸ್ ಆಚರಣೆಗೆ ದಿನಗಣನೆ ಶುರುವಾಗಿದ್ದು, ಹಬ್ಬ ಬರಮಾಡಿಕೊಳ್ಳಲು ಸಮುದಾಯದವರು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಪ್ರತಿ ವರ್ಷ ಸೆಂಟ್ ಜೋಸೆಪ್ ಶಾಲೆ ಮೈದಾನದಲ್ಲಿ ನಡೆಯುತ್ತಿದ್ದ ಬೃಹತ್ ಕೇಕ್ ಪ್ರದರ್ಶನವನ್ನು ಈ ಸಲ ಅರಮನೆ ಆವರಣದ ತ್ರಿಪುರಾ ವಾಸಿನಿಯಲ್ಲಿ ಸುಮಾರು 20,000 ಚದರ ಕಿ ಲೋ ಮೀಟರ್ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ಮತ್ತು ಮೈಬೇಕರ್ಸ್ ಮಾರ್ಟ್ ಈ ಪ್ರದರ್ಶನ ಆಯೋಜಿಸಿದೆ.
ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ವಾರ್ಷಿಕ ಕೇಕ್ ಪ್ರದರ್ಶನಕ್ಕೆ 50 ವರ್ಷ ಆಗಿರುವ ಹಿನ್ನೆಲೆ ಈ ಭಾರಿ ಅರಮನೆ ಮೈದಾನದಲ್ಲಿ ಅದ್ಧೂರಿ ಕೇಕ್ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
20 ಅಡಿ ಎತ್ತರದ ಕ್ರಿಸ್ ಮಸ್ ಟ್ರೀ, ಒಟ್ಟು 850 ಕೆ.ಜಿ. ತೂಕದ ರಾಮ ಮಂದಿರ ಸೇರಿದಂತೆ 20 ಮಾದರಿಯ ಕೇಕ್ ಪ್ರದರ್ಶನ ಇರಲಿದೆ. ಕಲಾವಿದರು ತುಂಬಾ ಶ್ರಮಪಟ್ಟು ಈ ಕೇಕ್ ಗಳನ್ನು ತಯಾರಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.