spot_img
spot_img

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

‘ನ್ಯಾಷನಲ್ ಕ್ರಶ್’ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ನಟಿ, ಗೀತ ಗೋವಿಂದಂ, ಪುಷ್ಪ, ಅನಿಮಲ್​​, ಛಾವಾದಂತಹ ಯಶಸ್ವಿ ಸಿನಿಮಾಗಳ ಮೂಲಕ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದ್ದಾರೆ. ಅದಾಗ್ಯೂ, ಇತ್ತೀಚೆಗೆ ‘ತಾನು ಹೈದರಾಬಾದ್​ನವಳು’ ಎಂಬ ಹೇಳಿಕೆ ಕೊಟ್ಟಿದ್ದು, ವಿವಾದವನ್ನು ಹುಟ್ಟುಹಾಕಿದೆ. ರಾಜಕೀಯ ನಾಯಕರು, ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ತೀವ್ರ ಪ್ರತಿಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.

I am from Hyderabad:

RASHMIKA MANDANNA ಇತ್ತೀಚೆಗೆ ಈವೆಂಟ್​​​ ಒಂದರಲ್ಲಿ ಭಾಗವಹಿಸಿದ ಬಳಿಕ ವಿವಾದ, ಪರವಿರೋಧ ಚರ್ಚೆ ಶುರುವಾಯಿತು. ಕಾರ್ಯಕ್ರಮದಲ್ಲಿ ಅವರು ತಮ್ಮನ್ನು ಹೈದರಾಬಾದ್ ಮೂಲದವಳು ಎಂದು ಹೇಳಿಕೊಂಡರು. ಚಂದನವನದಿಂದ ವೃತ್ತಿಜೀವನ ಆರಂಭಿಸಿದ ಜನಪ್ರಿಯ ನಟಿಯ ಈ ಹೇಳಿಕೆ ಕನ್ನಡ ಪರ ಗುಂಪುಗಳು ಮತ್ತು ಕೆಲ ರಾಜಕೀಯ ಗಣ್ಯರ ಅಸಮಾಧಾನಕ್ಕೆ ಕಾರಣವಾಯಿತು. ತಮ್ನನ್ನು ಹೈದರಾಬಾದ್ ಮೂಲದವಳು ಎಂದು ಹೇಳಿಕೊಳ್ಳುವ ನಟಿಯ ಹೇಳಿಕೆ, ತಮ್ಮ ವೃತ್ತಿಜೀವನಕ್ಕೆ ದಾರಿ ಮಾಡಿಕೊಟ್ಟ ಕರ್ನಾಟಕ ನಿರ್ಲಕ್ಷಿಸಿದಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಸಿನಿಮಾ ವೃತ್ತಿಜೀವನ ಪ್ರಾರಂಭಿಸಲು ಸಹಾಯ ಮಾಡಿದ ರಾಜ್ಯವನ್ನು ಅಗೌರವಿಸುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.

‘Where is Karnataka? I am very busy’:

ಮೊದಲ ಪ್ರತಿಕ್ರಿಯೆ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರಿಂದ ಬಂದಿತ್ತು. ಮಾರ್ಚ್ 3ರಂದು ರಶ್ಮಿಕಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಟಿ ತಮ್ಮ ಮೂಲ ಕನ್ನಡ ನಿರ್ಲಕ್ಷಿಸಿದ್ದಾರೆ ಮತ್ತು ಕರ್ನಾಟಕ ಜನತೆಯನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದಿಂದ ಹಲವು ಬಾರಿ ಆಹ್ವಾನಗಳಿದ್ದರೂ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಾಜರಾಗಲು ನಟಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶಗೊಂಡರು. ಕರ್ನಾಟಕ ಎಲ್ಲಿದೆ ಎಂಬುದು ತನಗೆ ತಿಳಿದಿಲ್ಲ, ತಾನು ತುಂಬಾನೇ ಬ್ಯುಸಿಯಾಗಿದ್ದೇನೆ ಎಂದು ನಟಿ ಹೇಳಿದ್ದರೆಂದು ಶಾಸಕರು ಆರೋಪಿಸಿದ್ದರು.

MLA Ravikumar Ganiga’s statement sounds like a threat:

‘RASHMIKA MANDANNAಗೆ ಪಾಠ ಕಲಿಸಬೇಕು’ ಎಂದು ಹೇಳಿದಾಗ ವಿವಾದ ಉಲ್ಭಣಗೊಂಡಿತು. ಈ ಹೇಳಿಕೆ ವ್ಯಾಪಕ ಪ್ರತಿಕ್ರಿಯೆ ಸ್ವೀಕರಿಸಿತು. ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಯಿತು. “ಪಾಠ ಕಲಿಸಬೇಕು” ಅನ್ನೋದು ಪರೋಕ್ಷ ಬೆದರಿಕೆ ಎಂದು ಬಹುತೇಕರು ಅಭಿಪ್ರಾಯಪಟ್ಟು, ಹೇಳಿಕೆಯನ್ನು ವ್ಯಾಪಕವಾಗಿ ಖಂಡಿಸಲಾಯಿತು.

BJP leader calls it ‘hooligan-like behavior’:

ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್​ ಖಾತೆಯಲ್ಲಿ ಕಾಂಗ್ರೆಸ್ ಶಾಸಕರ ಹೇಳಿಕೆಗಳನ್ನು ‘ಗೂಂಡಾಗಿರಿಯಂತಹ ವರ್ತನೆ’ ಎಂದು ಅಸಮಾಧಾನ ಹೊರ ಹಾಕಿದರು. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಪ್ರತಿಯೊಬ್ಬ ನಾಗರಿಕರಿಗೂ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ ಎಂಬುದನ್ನು ಒತ್ತಿ ಹೇಳಿದರು.

That was the statement made about life’s lessons – MLA Clarification:

ರವಿಕುಮಾರ್ ಗಣಿಗ ಅವರು ಮಾರ್ಚ್ 4ರಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಹಿಂಸೆ ಅಥವಾ ರೌಡಿಸಂ ಅನ್ನು ಪ್ರಚೋದಿಸುವ ಉದ್ದೇಶ ಹೊಂದಿಲ್ಲ ಎಂದರು. ರಶ್ಮಿಕಾಗೆ ಪಾಠ ಕಲಿಸುವ ಬಗ್ಗೆ ತಾವು ನೀಡಿದ ಹೇಳಿಕೆಯು ಹಿಂಸೆಗೆ ಬದಲಾಗಿ ಜೀವನದ ಪಾಠಗಳ ಬಗ್ಗೆ ಕೊಟ್ಟ ಹೇಳಿಕೆ ಅದಾಗಿತ್ತು ಎಂದು ಹೇಳಿದರು. ತಮ್ಮ ಹೇಳಿಕೆಗಳು ನಟಿಗೆ ಅವರ ಮಾತೃಭೂಮಿಯ ಮಹತ್ವ ಮತ್ತು ಕನ್ನಡ ಪರಂಪರೆ ಗೌರವಿಸುವ ಕರ್ತವ್ಯ ನೆನಪಿಸುವ ಉದ್ದೇಶ ಹೊಂದಿದ್ದವು ಎಂದು ಸ್ಪಷ್ಟಪಡಿಸಿದರು.

Kodava community came to support:

ಶಾಸಕರ ಸ್ಪಷ್ಟೀಕರಣದ ಹೊರತಾಗಿಯೂ, ವಿವಾದ ಉಲ್ಭಣಗೊಂಡಿದೆ. ಮಾರ್ಚ್ 9ರಂದು, RASHMIKA MANDANNA ಸೇರಿರುವ ಕೊಡವ ಸಮುದಾಯದ ಸದಸ್ಯರು ಅವರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ರಾಜಕೀಯ ಬೆದರಿಕೆಗಳು ಮಾತ್ರವಲ್ಲದೇ ಕೆಲ ಗುಂಪುಗಳಿಂದ ಕಿರುಕುಳಕ್ಕೂ ಗುರಿಯಾಗಿದ್ದ ನಟಿಗೆ ರಕ್ಷಣೆ ನೀಡಬೇಕು ಎಂದು ಕೊಡವ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಎನ್.ಯು.ನಾಚಪ್ಪ ಕರೆ ನೀಡಿದರು. RASHMIKA MANDANNA ಅವರ ಯಶಸ್ಸಿನ ಬಗ್ಗೆ ಹೆಮ್ಮೆಪಡುವ ಕೊಡವ ಸಮುದಾಯವು, ಭಾರತೀಯ ಚಿತ್ರರಂಗದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಶ್ರಮಿಸಿದ ನಟಿಗೀಗ ಇಂತಹ ಟೀಕೆಗಳೆಂದು ಅಸಮಾಧಾನ ವ್ಯಕ್ತಪಡಿಸಿತು. ಶಾಸಕ ರವಿಕುಮಾರ್ ಗಣಿಗ ಅವರ ಹೇಳಿಕೆಗಳನ್ನು ನಾಚಪ್ಪ ಖಂಡಿಸಿದರು. ರಶ್ಮಿಕಾ ಅವರ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

Using an actress’s name for political gain?

ಬಿಜೆಪಿ ಶಾಸಕ ಭರತ್ ಶೆಟ್ಟಿ ಈ ವಿಷಯದ ಬಗ್ಗೆ ಮಾತನಾಡಿದ ಬಳಿಕ ವಿವಾದ ಮತ್ತೊಂದು ತಿರುವು ಪಡೆದುಕೊಂಡಿತು. ಕಾಂಗ್ರೆಸ್ ಶಾಸಕರ ಹೇಳಿಕೆಗಳನ್ನು ಶೆಟ್ಟಿ ಟೀಕಿಸಿದರು. ಯಾರಿಂದಲೂ ಕಿರುಕುಳಕ್ಕೊಳಗಾಗದೇ, ತಮ್ಮದೇ ಆದ ಆಯ್ಕೆಗಳನ್ನು, ನಿರ್ಧಾರಗಳನ್ನು ಮಾಡುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎಂದು ಅವರು ತಿಳಿಸಿದರು. ರಾಜಕೀಯ ಲಾಭಕ್ಕಾಗಿ ನಟಿಯ ಹೆಸರನ್ನು ಬಳಸಿಕೊಂಡಿದ್ದಕ್ಕಾಗಿ ಮತ್ತು ಪ್ರಾದೇಶಿಕ ಹೆಮ್ಮೆಯ ಹೆಸರಿನಲ್ಲಿ ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.

ಈ ವಿವಾದಗಳ ನಡುವೆ, ಗಣಿಗ ತಮ್ಮ ಉದ್ದೇಶಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಲು ಪ್ರಯತ್ನಿಸಿದರು. ತಮ್ಮ ಹೇಳಿಕೆಗಳು RASHMIKA MANDANNAಗೆ ಯಾವುದೇ ರೀತಿಯ ಬೆದರಿಕೆ ಹಾಕುವುದಾಗಿಲ್ಲ, ಬದಲಾಗಿ ಅವರ ಮೂಲವನ್ನು ಗೌರವಿಸುವಂತೆ ಹೇಳಿದ್ದಾಗಿತ್ತು ಎಂದು ಸ್ಷಷ್ಟಪಡಿಸಿದರು. ಅವರ ವೃತ್ತಿಜೀವನದ ಆರಂಭದಲ್ಲಿ ಅವರನ್ನು ಬೆಂಬಲಿಸಿದ್ದ ಅವರ ತವರು ರಾಜ್ಯ (ಕರ್ನಾಟಕ) ಮತ್ತು ಭಾಷೆಯ (ಕನ್ನಡ) ಪರವಾಗಿ ನಿಲ್ಲುವಂತೆ ಶಾಸಕರು ಒತ್ತಾಯಿಸಿದರು. ನಟಿ ಸದ್ಯ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

Rashmika Upcoming Films:

2016ರಲ್ಲಿ ಕಿರಿಕ್ ಪಾರ್ಟಿ ಎಂಬ ಕನ್ನಡದ ಹಿಟ್​ ಸಿನಿಮಾ ಮೂಲಕ RASHMIKA MANDANNA ಅವರ ಯಶಸ್ವಿ ವೃತ್ತಿಜೀವನ ಆರಂಭವಾಯಿತು. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ, ಸದ್ಯ ಪ್ಯಾನ್ – ಇಂಡಿಯನ್ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಪುಷ್ಪ: ದಿ ರೈಸ್ ಮತ್ತು ಪುಷ್ಪ 2: ದಿ ರೂಲ್‌ನಲ್ಲಿ ನಟಿಸೋ ಮೂಲಕ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ವಿವಾದದ ಹೊರತಾಗಿಯೂ, RASHMIKA MANDANNA ಮೌನ ಮುಂದುವರಿಸಿದ್ದಾರೆ. ಆಯುಷ್ಮಾನ್ ಖುರಾನಾ ಅವರೊಂದಿಗೆ ಥಾಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ಸಿಕಂದರ್ ಬಿಡುಗಡೆ ಹೊಸ್ತಿಲಿನಲ್ಲಿದೆ. ಬಹುನಿರೀಕ್ಷಿತ ಚಿತ್ರ ಈದ್​ಗೆ ಬಿಡುಗಡೆಯಾಗಲಿದೆ. ಸೌತ್​ ಸೂಪರ್​ ಸ್ಟಾರ್ ಧನುಷ್ ಅವರೊಂದಿಗೆ ಕುಬೇರ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿದೆ. ಇತ್ತೀಚಿನ ಛಾವಾ ಸೂಪರ್​ ಹಿಟ್​ ಆಗಿದೆ.

ಇದನ್ನು ಓದಿ : Teams With Triumphs In Most ICC Trophies; Know India’s Position In The List

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...

GOLD SMUGGLING CASE – ಏರ್ಪೋರ್ಟ್ನಲ್ಲಿ ಶಿಷ್ಟಾಚಾರ ಸೌಲಭ್ಯ ದುರ್ಬಳಕೆ; ರನ್ಯಾ ರಾವ್ ಪ್ರಕರಣದ ತನಿಖೆಗೆ ಹಿರಿಯ IAS ಅಧಿಕಾರಿ ನೇಮಕ

Bangalore NEWS: GOLD SMUGGLING CASE ಪ್ರಕರಣದ ಆರೋಪಿ ನಟಿ ರನ್ಯಾ ರಾವ್​​ ಅವರಿಗೆ ಶಿಷ್ಟಾಚಾರ ಸೌಲಭ್ಯ ನೀಡಿರುವ ಸಂಬಂಧ ತನಿಖೆ ನಡೆಸಲು ಹಿರಿಯ IAS...