spot_img
spot_img

RASHMIKA MANDANNA : ಪ್ರೀತಿ ಖಚಿತಪಡಿಸಿದ ರಶ್ಮಿಕಾ ಮಂದಣ್ಣ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Rashmika Mandanna News :

ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್​​ನಲ್ಲಿದ್ದಾರೆ ಎಂಬ ವದಂತಿ ಬಹುಭಾಷಾ ನಟಿ RASHMIKA MANDANNA ಅವರ ಸುತ್ತ ಸುತ್ತುವರೆದಿದೆ. ಇದೀಗ ತಾವು ರಿಲೇಶನ್​ಶಿಪ್​ನಲ್ಲಿರುವುದಾಗಿ ದೃಢಪಡಿಸಿದ್ದಾರೆ. ಅದಾಗ್ಯೂ, ತಮ್ಮ ಪಾರ್ಟ್ನರ್ ಹೆಸರನ್ನು ಬಹಿರಂಗಪಡಿಸಿಲ್ಲ.

ತಮ್ಮ ”ಹ್ಯಾಪಿ ಪ್ಲೇಸ್​​” ಬಗ್ಗೆ ಮಾತನಾಡಿದ ರಶ್ಮಿಕಾ, “ಮನೆ ನನ್ನ ಸಂತೋಷದ ಸ್ಥಳ. ಯಶಸ್ಸು ಬರಬಹುದು, ಹಾಗೇ ಹೋಗಬಹುದು. ಆದ್ರೆ ಮನೆ ಶಾಶ್ವತ. ನಾನು ಆ ಸ್ಥಳದಿಂದ ಕೆಲಸ ಮಾಡುತ್ತೇನೆ. ನನಗೆ ಸಿಗುವ ಖ್ಯಾತಿಯ ಹೊರತಾಗಿಯೂ, ನಾನಿನ್ನೂ ಓರ್ವ ಮಗಳು, ಸಹೋದರಿ ಮತ್ತು ಸಂಗಾತಿ. ನನ್ನ ಆ ವೈಯಕ್ತಿಕ ಜೀವನವನ್ನು ನಿಜವಾಗಿಯೂ ಗೌರವಿಸುತ್ತೇನೆ. ನಾನೀಗ ಎರಡೂ ಪ್ರಪಂಚಗಳಲ್ಲಿ (ವೈಯಕ್ತಿಕ ಮತ್ತು ವೃತ್ತಿಜೀವನ) ಅತ್ಯುತ್ತಮವಾಗಿ ಜೀವಿಸುತ್ತಿದ್ದೇನೆ. ನಾನು ನನ್ನ ಸ್ವಂತ ಜೀವನದೊಂದಿಗೆ ಈ ವೈಯಕ್ತಿಕ ಜೀವನವನ್ನೂ ಕಾಪಾಡಿಕೊಳ್ಳುವ ವ್ಯಕ್ತಿ ಎಂದು ಹೇಳಲಿಚ್ಛಿಸುತ್ತೇನೆ” ಎಂದರು.

ಇತ್ತೀಚೆಗೆ ಮಾಧ್ಯಮವೊಂದರೊಂದಿಗೆ ಮಾತನಾಡುವ ವೇಳೆ, RASHMIKA MANDANNA ತಮ್ಮ ಜೀವನದ ಬಗ್ಗೆ ಹಂಚಿಕೊಂಡರು. ಸಂಗಾತಿಯಲ್ಲಿ ತಾವು ಇಷ್ಟಪಡುವ ಗುಣಗಳು ಮತ್ತು ವೈಯಕ್ತಿಕ ಸಂಬಂಧಗಳೊಂದಿಗೆ ವೃತ್ತಿಜೀವನದ ಖ್ಯಾತಿಯನ್ನು ಬ್ಯಾಲೆನ್ಸ್​ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ. RASHMIKA MANDANNA ಹಾಗೂ ವಿಜಯ್ ದೇವರಕೊಂಡ ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ಊಹಾಪೋಹಗಳಿಗೆ ಕಾರಣರಾಗಿದ್ದಾರೆ.

ಕಳೆದ ವರ್ಷ ವಿಜಯ್ ಅವರ ಕುಟುಂಬದೊಂದಿಗೆ ರಶ್ಮಿಕಾ ದೀಪಾವಳಿ ಆಚರಿಸಿದರು. ಹಾಗೇ ಅವರೊಂದಿಗೆ ಪುಷ್ಪ 2: ದಿ ರೂಲ್ ವೀಕ್ಷಿಸಿದ್ದು ಕಂಡುಬಂದಿದೆ. ಪುರುಷನಲ್ಲಿ ಯಾವ ಗುಣಗಳು ಆಕರ್ಷಕ ಎಂದೆನಿಸುತ್ತವೆ ಎಂಬ ಪ್ರಶ್ನೆ ರಶ್ಮಿಕಾರಿಗೆ ಎದುರಾದಾಗ, “ಕಣ್ಣುಗಳು ಆತ್ಮಕ್ಕೆ ಕಿಟಕಿ. ನಾನದರಲ್ಲಿ ನಂಬಿಕೆ ಇಡುತ್ತೇನೆ. ನಗುಮುಖ ಹೊಂದಿರುವ ಜನರು ನನಗೆ ಹಿಡಿಸುತ್ತಾರೆ. ಸಹಜವಾಗಿ, ಯಾರೇ ಇರಲಿ ತಮ್ಮ ಸುತ್ತಲಿನ ಜನರನ್ನು ಗೌರವಿಸುವ ವ್ಯಕ್ತಿ ನನಗೆ ಇಷ್ಟ ಆಗುತ್ತಾರೆ” ಎಂದು ತಿಳಿಸಿದರು.

ಸಿನಿಮಾ ಬಗ್ಗೆ ಗಮನಿಸೋದಾದರೆ, RASHMIKA MANDANNA ಲಕ್ಷ್ಮಣ್ ಉಟೇಕರ್ ನಿರ್ದೇಶನದ ಐತಿಹಾಸಿಕ ಆ್ಯಕ್ಷನ್ ಸಿನಿಮಾ ‘ಛಾವಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿ ಮತ್ತು ಅಕ್ಷಯ್ ಖನ್ನಾ ಚಕ್ರವರ್ತಿ ಔರಂಗಜೇಬ್ ಪಾತ್ರದಲ್ಲಿ ನಟಿಸಿದ್ದಾರೆ. ಛಾವಾ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹಿಂದಿನ ಸಂದರ್ಶನವೊಂದರಲ್ಲಿ, “ನನಗೆ 35 ವರ್ಷ. ನಾನಿನ್ನು ಸಿಂಗಲ್​ ಆಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ?” ಎಂದು ವಿಜಯ್ ತಿಳಿಸಿದ್ದರು. ಸೂಕ್ತ ಸಮಯ ಬರುವವರೆಗೂ ತಮ್ಮ ಲವ್​ ಲೈಫ್​​ ಬಗ್ಗೆ ಮಾತನಾಡಲು ಇಚ್ಛಿಸೋದಿಲ್ಲ ಎಂದು ತಿಳಿಸಿದ್ದರು.

ಇದ್ದನು ಓದಿರಿ : WAQF JPC : ವಕ್ಫ್ ಕರಡು ವರದಿ 14-11 ಮತಗಳ ಅಂತರದಿಂದ ಪಾಸ್

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ISRO 100TH MISSION:ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲು ಸಿದ್ಧವಾಗಿದೆ ರಾಕೆಟ್.

ISROS 100th Mission News: ಇಸ್ರೋದ 100ನೇ MISSION ಸಿದ್ಧವಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ನಭಕ್ಕೆ ಹಾರಲು ರಾಕೆಟ್​ ತಯಾರಿಗೊಂಡಿದೆ. ಇದರ ಲೈವ್​ ಸ್ಟ್ರೀಮಿಂಗ್​, ಸಮಯ ಸೇರಿದಂತೆ...

HOW MUCH SALT INTAKE DAILY:ಪ್ರತಿನಿತ್ಯ ಯಾವ ವಯಸ್ಸಿನವರು ಎಷ್ಟು ಉಪ್ಪು ಸೇವಿಸಬೇಕು ನಿಮಗೆ ಗೊತ್ತೇ? ತಜ್ಞರ ಸಲಹೆ ಹೀಗಿದೆ.

How Much Salt You Should Consume in That Day's News : ನಿಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ SALTನ್ನು ಸೇವಿಸಿದರೆ ಆರೋಗ್ಯದ ಅಪಾಯಗಳನ್ನು...

HEALTH BENEFITS OF APPLE:ಅನಿಮಿಯಾ ಸಮಸ್ಯೆ ಹೋಗಲಾಡಿಸಲು ಇದೊಂದು ಹಣ್ಣು ಸೇವಿಸಲು ತಜ್ಞರ ಸಲಹೆ .

Health Benefits That Apple News: ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ, ರಕ್ತಹೀನತೆಯ (ಅನಿಮಿಯಾ) ಅಪಾಯ ಹೆಚ್ಚಾಗುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ಅನಿಮಿಯಾ ಸಮಸ್ಯೆ...

38TH NATIONAL GAMES:ಎಲ್ಲಾ ರಾಜ್ಯಗಳ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕರ್ನಾಟಕ!

38th National Games News: ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಹೆಚ್ಚಿನ ಪದಕ ಗೆದ್ದು ನಂಬರ್​ ಒನ್​ ಸ್ಥಾನಕ್ಕೇರಿದೆ.ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ಸಂಜೆ...