Rashmika Mandanna News
ಕನ್ನಡ ನಟಿ RASHMIKA MANDANNA ಹಾಗೂ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ‘ಛಾವಾ’. ಇತ್ತೀಚೆಗೆ ಚಿತ್ರದ ಟ್ರೇಲರ್ ಅನಾವರಣಗೊಳಿಸೋ ಮೂಲಕ ತಂಡ ಪ್ರಚಾರ ಪ್ರಾರಂಭಿಸಿದೆ.
ಇಂದು ಹಾಡೊಂದು ಅನಾವರಣಗೊಂಡಿದ್ದು, ಈವೆಂಟ್ನ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಗಾಯಗೊಂಡಿದ್ದ ನಟಿ RASHMIKA MANDANNA ಇನ್ನೂ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಬಹುನಿರೀಕ್ಷಿತ ಛಾವಾ ಸಿನಿಮಾ ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರ ಕಥೆಯನ್ನೊಳಗೊಂಡಿದೆ.
ಈ ಸಿನಿಮಾದಲ್ಲಿ, ವಿಕ್ಕಿ ಕೌಶಲ್ ಮುಖ್ಯಭೂಮಿಕೆ ವಹಿಸಿದ್ದರೆ, ಬಹುಭಾಷಾ ನಟಿ RASHMIKA MANDANNA ಮಹಾರಾಣಿ ಯೇಸುಬಾಯಿ ಪಾತ್ರ ನಿರ್ವಹಿಸಿದ್ದಾರೆ. ‘ಛಾವಾ’ ಒಂದು ಪೀರಿಯಾಡಿಕಲ್ ಡ್ರಾಮಾ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ತನ್ನ ಕಥೆಯಿಂದಾಗಿ ಆರಂಭದಲ್ಲೇ ಸದ್ದು ಮಾಡಿತ್ತು. ಈ ಪ್ರಾಜೆಕ್ಟ್ ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ಅವರ ಆಳ್ವಿಕೆಗೆ ಸಲ್ಲುತ್ತಿರುವ ಗೌರವವಾಗಿದ್ದು, ಭರ್ಜರಿ ಆ್ಯಕ್ಷನ್ ದೃಶ್ಯಗಳಿರಲಿದೆ ಅನ್ನೋ ಸುಳಿವನ್ನು ಟ್ರೇಲರ್ ಬಿಟ್ಟುಕೊಟ್ಟಿದೆ.
ಇದೇ ಮೊದಲ ಬಾರಿಗೆ ವಿಕ್ಕಿ ಕೌಶಲ್ ಮತ್ತು RASHMIKA MANDANNA ತೆರೆಹಂಚಿಕೊಂಡಿದ್ದಾರೆ. ಜಿಮ್ನಲ್ಲಿ ವರ್ಕ್ ಔಟ್ ಮಾಡುವ ವೇಳೆ ನಟಿಯ ಕಾಲಿಗೆ ಪೆಟ್ಟಾಗಿತ್ತು. ಛಾವಾ ಚಿತ್ರದ ಪ್ರಚಾರ ಹಿನ್ನೆಲೆ, ಹೈದರಾಬಾದ್ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ ಸಂದರ್ಭ, ಜನವರಿ 22ರಂದು ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಂದು ಕೂಡಾ ವೀಲ್ ಚೇರ್ ಸಹಾಯ ಪಡೆದಿದ್ದರು.
ಈಗಲೂ ನಟಿ ನಡೆಯಲಾಗದ ಸ್ಥಿತಿಯಲ್ಲಿದ್ದು, ಶೀಘ್ರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ನಟಿಯ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನವಿರುವ ಈ ಸಿನಿಮಾ ಮುಂದಿನ ತಿಂಗಳು ಅಂದರೆ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ಇಂದಿನ ಪ್ರಮೋಶನಲ್ ಈವೆಂಟ್ನಲ್ಲಿ RASHMIKA MANDANNA ವೀಲ್ ಚೇರ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ಸಹಾಯ ಮಾಡಿದ್ದು, ಈ ಜೋಡಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಚಿತ್ರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಇವರಲ್ಲದೇ ಅಶುತೋಷ್ ರಾಣಾ, ದಿವ್ಯಾ ದತ್ತಾ ಮತ್ತು ನೀಲ್ ಭೂಪಾಲಂ ಅವರಂತಹ ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಿನಿಮಾಗೆ ಎ.ಆರ್.ರೆಹಮಾನ್ ಸಂಗೀತವಿದೆ. ಕ್ಯಾಮರಾ ಮ್ಯಾನ್ ಸೌರಭ್ ಗೋಸ್ವಾಮಿ ಅವರ ಕ್ಯಾಮರಾ ಕೈಚಳಕ ಈ ಪ್ರಾಜೆಕ್ಟ್ನಲ್ಲಿದೆ. ಮನೀಶ್ ಪ್ರಧಾನ್ ಸಂಕಲದ ಜವಾಬ್ದಾರಿ ಹೊತ್ತಿದ್ದಾರೆ.
ಇದನ್ನು ಓದಿರಿ : LOKAYUKTA OFFICIALS RAID : ಏಳು ಸರ್ಕಾರಿ ನೌಕರರ ಮನೆಗಳಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ ಲೋಕಾ