Bollywood News:
ಬಹುನಿರೀಕ್ಷಿತ ಚಿತ್ರ ‘ಛಾವಾ’ ಟ್ರೇಲರ್ ರಿಲೀಸ್ ಈವೆಂಟ್ನಲ್ಲಿ ಬಹುಭಾಷಾ ತಾರೆ RASHMIKA MANDANNA ‘ಚಿತ್ರರಂಗದಿಂದ ನಿವೃತ್ತಿ’ ಬಗ್ಗೆ ಮಾತನಾಡಿದ್ದಾರೆ.ಆದರೆ ಕಾರ್ಯಕ್ರಮದಲ್ಲಿ ನಾಯಕ ನಟಿ RASHMIKA MANDANNA ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ನಟಿಯ ಆ ಹೇಳಿಕೆಗಳೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಬಾಲಿವುಡ್ ಸೂಪರ್ ಸ್ಟಾರ್ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ತಾರೆ RASHMIKA MANDANNA ತೆರೆಹಂಚಿಕೊಂಡಿರುವ ಪೀರಿಯಾಡಿಕಲ್ ಡ್ರಾಮಾ ‘ಛಾವಾ’ ಬಿಡುಗಡೆ ಹೊಸ್ತಿಲಿನಲ್ಲಿದೆ. ಈ ಬಹುನಿರೀಕ್ಷಿತ ಚಿತ್ರ ಫೆಬ್ರವರಿ 14ರಂದು ತೆರೆಕಾಣಲಿದೆ. ಬಿಡುಗಡೆ ಹೊಸ್ತಿಲಿನಲ್ಲಿರುವ ಸಿನಿಮಾದ ಪ್ರಚಾರ ಪ್ರಾರಂಭವಾಗಿದ್ದು, ಚಿತ್ರ ತಯಾರಕರು ನಿನ್ನೆಯಷ್ಟೇ ಮುಂಬೈನಲ್ಲಿ ಅದ್ಧೂರಿ ಟ್ರೇಲರ್ ರಿಲೀಸ್ ಈವೆಂಟ್ ಹಮ್ಮಿಕೊಂಡಿದ್ದರು.
Is this a joke- for real?: ಲಕ್ಷ್ಮಣ್ ಉಟೇಕರ್ ನಿರ್ದೇಶನದ ಸಿನಿಮಾ ಬರುವ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾ ನೋಡುವ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಆದರೆ ಈವೆಂಟ್ನಲ್ಲಿ ರಶ್ಮಿಕಾ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಅವರು ತಮಾಷೆಯಾಗಿ ಮಾತನಾಡಿದ್ರೂ, ಒಂದೊಮ್ಮೆ ಇದು ನಿಜವಾದ್ರೆ ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರ ಕಥೆಯನ್ನಾಧರಿಸಿದ ಸಿನಿಮಾವಿದು. ವಿಕ್ಕಿ ಕೌಶಲ್ ಮುಖ್ಯಭೂಮಿಕೆ ವಹಿಸಿದ್ದರೆ,RASHMIKA MANDANNA ಸಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
I was surprised: ಟ್ರೇಲರ್ ನೋಡಿದ ನಂತರವೂ ಭಾವುಕಳಾದೆ. ಇಲ್ಲಿ ವಿಕ್ಕಿ ನನಗೆ ದೇವರಂತೆ ಕಾಣುತ್ತಾರೆ. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ಈ ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ ನನಗೆ ತುಂಬಾನೇ ಆಶ್ಚರ್ಯವಾಯಿತು. ನಾನೇನೂ ಯೋಚಿಸದೇ ತಕ್ಷಣ ಒಪ್ಪಿಕೊಂಡೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೆ. ಇಡೀ ಚಿತ್ರ ತಂಡ ತುಂಬಾನೇ ಬೆಂಬಲ ನೀಡಿತು.
ಇದರಲ್ಲಿನ ಪಾತ್ರಗಳು ಎಲ್ಲರ ಮೇಲೆ ಪರಿಣಾಮ ಬೀರುವ ಭರವಸೆ ಇದೆ” ಎಂದು ತಿಳಿಸಿದರು.ಈವೆಂಟ್ನಲ್ಲಿ ಮಾತನಾಡಿದ ನಟಿ, “ಈ ಚಿತ್ರದಲ್ಲಿ ಸಂಭಾಜಿ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ನನಗೆ ಗೌರವವೆನಿಸುತ್ತದೆ. ನಟಿಯಾಗಿ ಇನ್ನೇನು ಬಯಸಬಹುದು?, ಈ ಚಿತ್ರದ ನಂತರ ನಾನು ಸಂತೋಷದಿಂದ ನಿವೃತ್ತಿ ಹೊಂದಬಹುದು ಎಂದು ನಾನೊಮ್ಮೆ ನಿರ್ದೇಶಕರಿಗೆ ತಿಳಿಸಿದ್ದೆ. ಇದೊಂದು ಗ್ರೇಟ್ ರೋಲ್.
ಚಿತ್ರೀಕರಣದ ಸಮಯದಲ್ಲಿ ಹಲವು ಬಾರಿ ಭಾವುಕಳಾಗಿದ್ದೆ.ಛಾವಾ ಬಾಲಿವುಡ್ ನಿರ್ದೇಶಕ ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರವಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ರಶ್ಮಿಕಾ ಸಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬುಧವಾರ ಬಿಡುಗಡೆಯಾದ ಚಿತ್ರದ ಟ್ರೇಲರ್‌ಗೆ ಬಹುತೇಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇತ್ತೀಚೆಗೆ ಜಿಮ್‌ನಲ್ಲಿ ಗಾಯಗೊಂಡಿದ್ದ RASHMIKA MANDANNA, ಮುಂಬೈನಲ್ಲಿ ನಡೆದ ಪ್ರಮೋಶನಲ್ ಈವೆಂಟ್ಗೆ ಭಾಗವಹಿಸಿದ್ದರು. ಕುಂಟುತ್ತಲೇ ಹೆಜ್ಜೆ ಹಾಕಿದರು. ವೀಲ್ ಚೇರ್ ಸಹಾಯ ಪಡೆದರು. ವೇದಿಕೆ ಮೇಲೆ ಬರಲು ವಿಕ್ಕಿ ಕೌಶಲ್ ನಟಿಗೆ ಸಹಾಯ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ.
ಇದನ್ನು ಓದಿರಿ : SAIF ALI KHAN CASE : ಸೈಫ್ ಅಲಿ ಖಾನ್ಗೆ ಚಾಕು ಇರಿತ – ನಿಜವೇ ಅಥವಾ ನಟನೆಯೇ?