ಈಗಾಗಲೇ ರಾಜ್ಯದಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಅಂತಹವರಿಗೆ ಎಪಿಎಲ್‌ಗೆ ಸೇರಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಲ್ಲದೆ, ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ ಎಂದು ಆಹಾರ ಇಲಾಖೆ ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಪಡಿತರ ಚೀಟಿ ಹೊಂದಿರುವವರಾಗಿದ್ದರೆ, ಡಿಸೆಂಬರ್ 1ರ ಮೊದಲು ನಿಮ್ಮ ಇ-ಕೆವೈಸಿ ಪೂರ್ಣಗೊಳಿಸುವುದು ಬಹಳ ಮುಖ್ಯವಾಗಿದೆ. ಒಂದು ವೇಳೆ ಇದನ್ನು ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡುವಂತೆ ಸೂಚನೆಗಳನ್ನು ನೀಡಿದ್ದು, ಸೆಪ್ಟೆಂಬರ್ 1 ಕೊನೆಯ ದಿನಾಂಕವಾಗಿತ್ತು. ಆದರೆ ಇದೀಗ ಈ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿದೆ. ಈಗ ನವೆಂಬರ್ 30ರ ವರೆಗೆ ವಿಸ್ತರಣೆ ಮಾಡಿದೆ.
ಈ ದಿನಾಂಕದೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ. ಪಡಿತರ ಚೀಟಿದಾರರು ತಮ್ಮ ಗುರುತು ನೋಂದಣಿ ಅಥವಾ ಮರುನೋಂದಣಿ ಮಾಡಿಸದೇ ಇರುವ ಎಲ್ಲಾ ಸದಸ್ಯರು ನವೆಂಬರ್ 30ರ ಒಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಇ-ಕೆವೈಸಿ ಮಾಡಿಸಲು ಬೇಕಾಗುವ ದಾಖಲೆಗಳ ವಿವರ
* ಪಡಿತರ ಚೀಟಿಯ ಒರಿಜಿನಲ್ ಪ್ರತಿ
* ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋಕಾಪಿ
* ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ
* ಬ್ಯಾಂಕ್ ಪಾಸ್‌ಬುಕ್‌ನ ಫೋಟೋಕಾಪಿ
* ಕುಟುಂಬದ ಯಜಮಾನನ ಎರಡು ಪಾಸ್‌ಪೋರ್ಟ್ ಅಳತೆಯ ಪೋಟೋ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ವಿಧಾನ
* ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್‌ಗೆ ಭೇಟಿ ನೀಡಿ.
* ಸಕ್ರಿಯ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಆಯ್ಕೆ ಮಾಡಿ.
* ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಮುಂದುವರಿಯಿರಿ ಅಥವಾ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ.
* ಬಳಿಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಒಟಿಪಿ ಸ್ವೀಕರಿಸುತ್ತೀರಿ.
* ಆಧಾರ್ ಪಡಿತರ ಲಿಂಕ್ ಪುಟದಲ್ಲಿ ಒಟಿಪಿಯನ್ನು ನಮೂದಿಸಿ ಮತ್ತು ಅದಕ್ಕಾಗಿ ನಿಮ್ಮ ವಿನಂತಿಯನ್ನು ಸಲ್ಲಿಸಲಾಗುತ್ತದೆ.
ಇನ್ನು ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ. ಆಧಾರ್ ದೃಢೀಕರಣ ಮಾಡಿಸದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್‌ನಲ್ಲಿ ಪಡಿತರ ಹಂಚಿಕೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಆದ್ದರಿಂದ ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಕೂಡ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.