Belgaum News:
ಬೆಳಗಾವಿಯ RAVINDRA KOUSHIK E LIBRARY ರಾಜ್ಯಕ್ಕೆ ಮಾದರಿಯಾಗಿದೆ. ಹೇಗಿದೆ RAVINDRA KOUSHIK E LIBRARY? ಏನಿದರ ವಿಶೇಷತೆ?. ನಗರದ ಶಿವಾಜಿ ಮಹಾರಾಜ ಉದ್ಯಾನದ ಬಳಿ ಈ ಮೊದಲು ಇದು ನಗರ ಗ್ರಂಥಾಲಯದ ಒಂದು ಚಿಕ್ಕ ಶಾಖೆ ಹೊಂದಿತ್ತು.
ಅದು ಆಗಲೋ, ಈಗಲೋ ಬೀಳುವ ಹಳೆಯ ಕಟ್ಟಡದಲ್ಲಿತ್ತು. ಕೆಲವೇ ಕೆಲವು ಹಿರಿಯ ನಾಗರಿಕರು ದಿನಪತ್ರಿಕೆ, ಒಂದಿಷ್ಟು ಪುಸ್ತಕ ಓದಲು ಬರುತ್ತಿದ್ದರು. ಸ್ಥಳೀಯ ಶಾಸಕ ಅಭಯ್ ಪಾಟೀಲರ ದೂರದೃಷ್ಟಿಯ ಫಲವಾಗಿ 2021ರಲ್ಲಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯವುಳ್ಳ RAVINDRA KOUSHIK E LIBRARYಅದೇ ಸ್ಥಳದಲ್ಲಿ ತಲೆ ಎತ್ತಿದೆ. ಇಂದು ನೂರಾರು ಯುವಕರ ಬಾಳಿಗೆ ಬೆಳಕು ನೀಡಿದ್ದು, ಇಡೀ ರಾಜ್ಯಕ್ಕೆ ಮಾದರಿ ಗ್ರಂಥಾಲಯವಾಗಿದೆ.
ಬೆಳಗಾವಿಯಲ್ಲಿ ಕಳೆದ 4 ವರ್ಷಗಳ ಹಿಂದೆ ಉದ್ಘಾಟನೆಗೊಂಡಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯವು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ತಾಲೀಮು ಕೇಂದ್ರವಾಗಿದೆ. ಓದುವ ಮನಸ್ಸುಗಳಿಗೆ ನಿತ್ಯ ಜ್ಞಾನದಾಸೋಹ ಉಣಬಡಿಸುತ್ತಿದೆ. ಇಲ್ಲಿ ಅಭ್ಯಸಿಸಿದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ.
RAVINDRA KOUSHIK E LIBRARY ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ. ಇದಕ್ಕೆ ಅಪ್ರತಿಮ ವೀರನ ಹೆಸರಿಟ್ಟಿರುವುದು ಮತ್ತೊಂದು ವಿಶೇಷ.ಸ್ಮಾರ್ಟ್ ಸಿಟಿ ಯೋಜನೆಯಡಿ 2.5 ಕೋಟಿ ರೂ. ಅನುದಾನದಡಿ ಮೂರು ಅಂತಸ್ತಿನ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗಿದೆ.
2021ರ ಸೆ.26ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಮೊದಲ ಮಹಡಿಯಲ್ಲಿ ದಿನಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆ, ಕಥೆ, ಕಾದಂಬರಿ ಪುಸ್ತಕಗಳಿವೆ. ಎರಡನೇ ಮಹಡಿಯಲ್ಲಿ ಕಂಪ್ಯೂಟರ್ಗಳಿದ್ದು, ಇದು ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಹೊಂದಿದೆ.
ಮೂರನೇ ಮಹಡಿಯಲ್ಲಿ ಮಕ್ಕಳಿಗಾಗಿ ಕಿಡ್ ಜೋನ್ ಗಮನ ಸೆಳೆಯುತ್ತಿದೆ. ಓರ್ವ ಲೈಬ್ರರಿಯನ್ ಖಾಯಂ ಆಗಿದ್ದು, ಐವರು ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.
Totally Free:
ಪ್ರತಿ ತಿಂಗಳು ಎರಡನೇ ಮಂಗಳವಾರ ಮತ್ತು ನಾಲ್ಕನೇ ಶನಿವಾರ ಹಾಗೂ ಪ್ರತಿ ಸೋಮವಾರ ಗ್ರಂಥಾಲಯಕ್ಕೆ ರಜೆ ಇರುತ್ತದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಯಾರು ಬೇಕಾದರೂ ಇಲ್ಲಿಗೆ ಬಂದು ಓದಬಹುದು. ಕಂಪ್ಯೂಟರ್, ವೈಫೈ ಉಚಿತವಾಗಿ ಬಳಸಿಕೊಂಡು ಜ್ಞಾನಾರ್ಜನೆ ಪಡೆಯಬಹುದಾಗಿದೆ.
“ನಮ್ಮಲ್ಲಿ 21 ಕಂಪ್ಯೂಟರ್ಗಳಿದ್ದು, ಅವುಗಳಲ್ಲಿ ಕ್ಯಾಲಿಬರ್ ಸಾಫ್ಟ್‌ವೇರ್, ಕಾಗ್ನಿಟಿವ್ ಲಾಂಗ್ವೇಜ್ ಲರ್ನಿಂಗ್ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಕನ್ನಡ, ಇಂಗ್ಲೀಷ್, ಮರಾಠಿ, ಉರ್ದು, ಹಿಂದಿ ಹೀಗೆ ಐದು ಭಾಷೆಗಳಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಡಿಜಿಟಲೈಸ್ ಮಾಡಲಾಗಿದೆ. ಇದರಲ್ಲಿ ಓವರ್ ಲೀ ಮೂಲಕ ಹೈಲೈಟ್ ಮಾಡಿ ಓದಬಹುದು.
ಅದೇ ರೀತಿ ಕೂನಿ ಬುಕ್ಸ್ನಲ್ಲಿ ನಾವು ಓದುತ್ತಾ ಹೋದಂತೆ ಇಂದಿನ ಅಕ್ಷರಗಳು ಕಾಣಿಸುವುದಿಲ್ಲ. ಮಕ್ಕಳಿಗೆ ಮಾಹಿತಿ, ಆಸಕ್ತಿ ಮತ್ತು ಅಭಿರುಚಿ ಮೂಡಿಸುವ ಎಐ ಅನಿಮೇಟೆಡ್ ಬುಕ್ಸ್ನಲ್ಲಿ ಕಥೆ, ಕಾದಂಬರಿ ಪುಸ್ತಕಗಳಿವೆ. ಅಲ್ಲದೇ ಇಲ್ಲಿಯ ಉಚಿತ ವೈಫೈ ಬಳಸಿಕೊಂಡು ಯೂಟ್ಯೂಬ್ನಲ್ಲಿ ನೀಟ್, ಜೆಇಇ, ಬ್ಯಾಂಕಿಂಗ್, ಐಎಎಸ್, ಕೆಎಎಸ್, ಪಿಎಸ್ಐ ಸೇರಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಧ್ಯಯನ ಕೈಗೊಳ್ಳುತ್ತಾರೆ. ಇಲ್ಲಿ ಅಭ್ಯಸಿಸಿದ ಶೇ.60ರಷ್ಟು ಯುವಕರು ವಿವಿಧ ಪರೀಕ್ಷೆ ತೇರ್ಗಡೆಗೊಂಡು ತಮ್ಮ ಭವಿಷ್ಯ ಕಟ್ಟಿಕೊಂಡಿದ್ದಾರೆ.
ಪ್ರತಿನಿತ್ಯ 50-80 ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದು, ಈವರೆಗೆ 23 ಸಾವಿರಕ್ಕೂ ಹೆಚ್ಚು ಜನರು ಇ-ಗ್ರಂಥಾಲಯ ಸದುಪಯೋಗ ಪಡೆದಿದ್ದಾರೆ” ಎಂದು ಗ್ರಂಥಪಾಲಕ ಎಂ.ಎಚ್.ಪಟ್ವೇಗಾರ್ ವಿವರಿಸಿದರು.
A hero who sacrificed his life for the country:
ಇನಾಯಿತ್ ಮಸಿ ಎಂಬ ಭಾರತೀಯ ಬೇಹುಗಾರನ ತಪ್ಪಿನಿಂದಾಗಿ ಕೌಶಿಕ್ರನ್ನು ಪಾಕ್ ಸೇನೆ 1983ರಲ್ಲಿ ಬಂಧಿಸಿತ್ತು. ಬೇಹುಗಾರಿಕೆಯ ಕಾರಣಕ್ಕೆ 1985ರಲ್ಲಿ ಪಾಕ್ ನ್ಯಾಯಾಲಯವು ಅವರಿಗೆ ಗಲ್ಲುಶಿಕ್ಷೆ ನೀಡಿತು. ನಂತರ 1990ರಲ್ಲಿ ಈ ಅದೇಶವನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಲಾಯಿತು.
18 ವರ್ಷ ಪಾಕ್ನ ವಿವಿಧ ಜೈಲುಗಳಲ್ಲಿ ಅವರಿಗೆ ಸಾಕಷ್ಟು ಚಿತ್ರಹಿಂಸೆ ನೀಡಲಾಯಿತು. ಆದರೂ, ಭಾರತಕ್ಕೆ ನೀಡಿದ ಮಾಹಿತಿ ಬಗ್ಗೆ ಕೌಶಿಕ್ ಬಾಯಿ ಬಿಡಲಿಲ್ಲ. ಕೊನೆಗೆ, 2001ರ ನವೆಂಬರ್ 21ರಂದು ಪಾಕಿಸ್ತಾನದ ಮಿಯಾನ್ವಾಲಿ ಜೈಲಿನಲ್ಲಿ ತಮ್ಮ 49ನೇ ವಯಸ್ಸಿನಲ್ಲಿ ರವೀಂದ್ರ ಕೊನೆಯುಸಿರೆಳೆದರು.
ತಮ್ಮ ಜೀವವನ್ನು ಭಾರತಕ್ಕೆ ಬಲಿಕೊಟ್ಟ ಅವರ ಹೆಸರನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಬೆಳಗಾವಿಯ ಇ-ಗ್ರಂಥಾಲಯಕ್ಕೆ ರವೀಂದ್ರ ಕೌಶಿಕ್ ಅವರ ಹೆಸರಿಡಲಾಗಿದೆ.
What is the Kid Zone Library like?:
“ಕಿಡ್ ಜೋನ್ ಲೈಬ್ರರಿಗೆ 3-13 ವರ್ಷದವರೆಗಿನ ಮಕ್ಕಳಿಗೆ ಪ್ರವೇಶವಿದೆ. ನೆಸ್ಟರ್ ಅನಾಲಿಟಿಕ್ಸ್ ಸಾಫ್ಟ್‌ವೇರ್ (Nestor analytics software) ಮೂಲಕ ಮಕ್ಕಳಿಗೆ ಪಠ್ಯಕ್ರಮ ಅಳವಡಿಸಲಾಗಿದೆ. ಬೇಸಿಕ್ ಅಭ್ಯಾಸ, ವ್ಯಾಕರಣ, ರೈಮ್ಸ್, ಪ್ರಾಣಿ-ಪಕ್ಷಿಗಳು, ಹಣ್ಣು, ಭಾರತ ಮತ್ತು ಜಗತ್ತಿನ ಭೂಪಟಗಳು, ಮಹಾಪುರುಷರು ಸೇರಿ ಮತ್ತಿತರ ವಿಷಯಗಳನ್ನು ಸ್ಮಾರ್ಟ್ ಟಿವಿ ಮೂಲಕ ಕಲಿಸುತ್ತೇವೆ.
ಐದು ಟ್ಯಾಬ್ಗಳಿದ್ದು, ಮಕ್ಕಳಿಗೆ ಪರೀಕ್ಷೆ ಅದರಲ್ಲೆ ನಡೆಸುತ್ತೇವೆ. ಅದೇ ರೀತಿ ಒಗಟು ಬಿಡಿಸುವುದು, ನೆನಪಿನ ಶಕ್ತಿ ಹೆಚ್ಚಿಸುವ ಆಟಗಳು, ಇ-ಫ್ಲಾಶ್ ಕಾರ್ಡ್ಸ್, ಪ್ರಿಂಟೆಡ್ ಫ್ಲಾಶ್ ಕಾರ್ಡ್ಸ್ ಮೂಲಕ ಮಕ್ಕಳು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. ಮೂರು ವರ್ಷದ ಮಕ್ಕಳಿಗೆ ಆಡಲು ಆಟಿಕೆ ಸಾಮಾನುಗಳಿವೆ. ನಾವು ನಗರದ ಶಾಲೆಗಳಿಗೆ ತೆರಳಿ ಡೆಮೋ ಕೊಡುತ್ತೇವೆ. ಪ್ರತಿ ವಾರ ಒಂದೊಂದು ಶಾಲೆ ಮಕ್ಕಳು ಇಲ್ಲಿಗೆ ಬರುತ್ತಾರೆ. ನಿತ್ಯ 30ಕ್ಕೂ ಅಧಿಕ ಮಕ್ಕಳು ಆಗಮಿಸುತ್ತಾರೆ” ಎಂದು ಗ್ರಂಥಪಾಲಕಿ ಮನಿಷಾ ಹುಲ್ಲೋಳಿ ತಿಳಿಸಿದರು.
Who is Rabindra Kaushik?:
ಬೆಳಗಾವಿಯ ಇ-ಗ್ರಂಥಾಲಯಕ್ಕೆ ಹೆಸರಿಟ್ಟಿರುವ ರವೀಂದ್ರ ಕೌಶಿಕ್ ಯಾರು ಎಂಬ ಕುತೂಹಲ ನಿಮಗೆಲ್ಲಾ ಇರಬಹುದು. ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರಿಯಾಗಿ ಬ್ಲಾಕ್ ಟೈಗರ್ ಎಂದೇ ರವೀಂದ್ರ ಪ್ರಸಿದ್ಧಿ ಪಡೆದವರು. 1952ರ ಎಪ್ರಿಲ್ 11ರಂದು ರಾಜಸ್ಥಾನದ ಗಂಗಾನಗರದಲ್ಲಿ ಜನಿಸಿದ್ದರು. ಇವರ ತಂದೆ ಜೆ.ಎನ್.ಕೌಶಿಕ್, ತಾಯಿ ಅಮಲಾದೇವಿ.
ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ರವೀಂದ್ರ ಅವರಲ್ಲಿನ ದೇಶಾಭಿಮಾನ ಗುರುತಿಸಿದ ಭಾರತೀಯ ಸೇನೆಯ ಗುಪ್ತಚರ ಸಂಸ್ಥೆ(ರಾ) ದೇಶಸೇವೆಗೆ ಆಹ್ವಾನಿಸಿತ್ತು. ಎರಡು ವರ್ಷ ಕಠಿಣ ತರಬೇತಿ ಜೊತೆಗೆ ಉರ್ದು, ಪಾಕ್ ಸ್ಥಳೀಯ ಭಾಷೆಯನ್ನು ಕಲಿಸಿ ಕೊಡಲಾಯಿತು. ನಂತರ ಅವರಿಗೆ ನಬಿ ಅಹ್ಮದ್ ಶಕೀರ್ ಎಂದು ಮರು ನಾಮಕರಣ ಮಾಡಲಾಯಿತು.
ಪಾಕಿಸ್ತಾನ ಪ್ರವೇಶಿಸಿ ಕರಾಚಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪಡೆದು ಅಲ್ಲಿನ ಸೇನೆಯಲ್ಲಿ ಮಿಲಿಟರಿ ಆಡಿಟರ್ ಆಗಿ ಕೌಶಿಕ್ ಭರ್ತಿ ಪಡೆದರು. ಅಲ್ಲದೆ ಕಡಿಮೆ ಅವಧಿಯಲ್ಲಿಯೇ ಮೇಜರ್ ಹುದ್ದೆಗೆ ಪದೋನ್ನತಿ ಹೊಂದಿದರು. 1979ರಿಂದ 1983ರ ಅವಧಿಯಲ್ಲಿ ಪಾಕ್ ಸೇನೆಯ ಅನೇಕ ಗೌಪ್ಯ ಮಾಹಿತಿಯನ್ನು ಭಾರತೀಯ ರಕ್ಷಣಾ ಇಲಾಖೆಗೆ ನೀಡಿದ್ದರು. ಇದು ಭಾರತಕ್ಕೆ ತುಂಬಾ ಉಪಯುಕ್ತವಾಗಿತ್ತು.
Many awards include:
ವಿದ್ಯಾರ್ಥಿನಿ ರವೀನಾ ಬಾನಿ ಮಾತನಾಡಿ, “ಕಳೆದ 3 ತಿಂಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಬೇರೆ ಗ್ರಂಥಾಲಯಗಳಿಗೆ ಹೋಲಿಸಿದರೆ ಇದು ತುಂಬಾ ಚೆನ್ನಾಗಿದೆ. ಬೇರೆ ಕಡೆ ನೆಟ್ ವ್ಯವಸ್ಥೆ ಇರಲ್ಲ. ಇಲ್ಲಿ ಉಚಿತವಾಗಿ ನೀಡುತ್ತಿದ್ದಾರೆ. ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದು, ಬೆಳಿಗ್ಗೆ 10 ಗಂಟೆಗೆ ಬಂದು ಸಾಯಂಕಾಲ 6ಕ್ಕೆ ಮನೆಗೆ ಹೋಗುತ್ತೇನೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
“ನಾನು ಐಐಟಿ ಮತ್ತು ಜೆಇಇ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಹಾಗಾಗಿ ಇ-ಗ್ರಂಥಾಲಯದಲ್ಲಿ ಆರೇಳು ತಿಂಗಳಿನಿಂದ ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ಆನ್‌ಲೈನ್ ಅಭ್ಯಾಸ ಮಾಡುತ್ತಿದ್ದೇನೆ. ಇನ್ನೇನು ಪರೀಕ್ಷೆ ಕೂಡ ಸಮೀಪಿಸುತ್ತಿದೆ. ಇಲ್ಲಿನ ಸಿಬ್ಬಂದಿ ಸಾಕಷ್ಟು ಸಹಕಾರ ನೀಡುತ್ತಾರೆ. ಉಚಿತವಾಗಿ ಕಂಪ್ಯೂಟರ್, ಅನೇಕ ಪುಸ್ತಕಗಳು, ನೆಟ್ ಸೌಲಭ್ಯವಿದೆ. ಕುಡಿಯುವ ನೀರು, ಶೌಚಾಲಯ ಸೇರಿ ಎಲ್ಲಾ ವ್ಯವಸ್ಥೆಯಿದ್ದು, ಓದಲು ತುಂಬಾ ಅನುಕೂಲಕರ ವಾತಾವರಣವಿದೆ” ಎನ್ನುತ್ತಾರೆ ವಿದ್ಯಾರ್ಥಿ ತರುಣ ಪಾಟೀಲ.
ಯೂನೈಟೆಡ್ ನೇಶನ್ಸ್ ಇನ್‌ಕ್ಲುಸಿವಿಟಿ ಅವಾರ್ಡ್, ದ ಐಎಸ್ಎಸಿ ಸ್ಮಾರ್ಟ್ ಸಿಟಿ ಅವಾರ್ಡ್ (ಸೌತ್ ಜೋನ್), ಥ್ರೀ ಸ್ಮಾರ್ಟ್ ಅರ್ಬನೇಶನ್ ಅವಾರ್ಡ್ಸ್, ದ ಸಿಟಿ ಎಂಪವರಿಂಗ್ ಇಂಡಿಯಾ ಅವಾರ್ಡ್ಸ್ 2020, ಟೂ ಸ್ಮಾರ್ಟ್ ಸಿಟೀಸ್ ಇಂಡಿಯಾ ಎಕ್ಸಪೋ ಅವಾರ್ಡ್ಸ್, ದ ಇಂಡಿಯನ್ ಎಕ್ಸಪ್ರೇಸ್ ಅವಾರ್ಡ್, ದ ಟಾಪ್ ಪರ್ಪಾರ್ಮಿಂಗ್ ಸಿಟೀಸ್ ಆಫ್ ಐಎಂಎಎಫ್ 2.0: ಸೈಕಲ್ 1″ 2024 ಅವಾರ್ಡ್, ಐಟಿ ಇನ್ನೋವೇಶನ್ ಅವಾರ್ಡ್, ಥ್ರೀ ಗವರ್ನನ್ಸ್ ನವ್ ಅವಾರ್ಡ್ಸ್ ಪ್ರಶಸ್ತಿಗಳನ್ನು ರವೀಂದ್ರ ಕೌಶಿಕ್ ಇ-ಗ್ರಂಥಾಲಯವು ಮುಡಿಗೇರಿಸಿಕೊಂಡಿದೆ.
ಇ-ಗ್ರಂಥಾಲಯ ನಿರ್ಮಾಣದ ರೂವಾರಿ ಶಾಸಕ ಅಭಯ್ ಪಾಟೀಲ ಮಾತನಾಡಿ, “ಇದು ಭಾರತದಲ್ಲೇ ಒಂದು ಮಾದರಿ ಗ್ರಂಥಾಲಯ. ಎಐ ಟೆಕ್ನಾಲಜಿ ಬಳಸಿ ಐದು ಭಾಷೆಯ ಪುಸ್ತಕಗಳನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸಿದ್ದೇವೆ. ದೇಶಭಕ್ತ ರವೀಂದ್ರ ಕೌಶಿಕ್ ಅವರ ಹೆಸರಿಟ್ಟಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಅದೇ ರೀತಿ ಚಿಕ್ಕ ಮಕ್ಕಳಿಗೆ ಕಿಡ್ ಜೋನ್ ಇದೆ. ನಮ್ಮ ನಿರೀಕ್ಷೆಗೂ ಮೀರಿ ಇದು ಉಪಯುಕ್ತವಾಗಿದೆ. ಈ ರೀತಿ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲೂ ಗ್ರಂಥಾಲಯ ನಿರ್ಮಿಸಿದರೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ತುಂಬಾ ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿರಿ : New Delhi Station last day between 6 pm to 8 pm.