ಕೆಲವೇ ದಿನಗಳಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಕೆ.ಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಸೇರಿದಂತೆ ಸ್ಟಾರ್ ಆಟಗಾರರೇ ಭಾಗವಹಿಸಲಿದ್ದಾರೆ. ಅದರಲ್ಲೂ ಯುವ ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಳೆದ ಸೀಸನ್ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರೋ ಯುವ ಆಟಗಾರರ ಮೇಲೆ ಐಪಿಎಲ್ ತಂಡಗಳ ಮಾಲೀಕರು ಕಣ್ಣು ನೆಟ್ಟಿದೆ. ಈ ಹರಾಜಿನಲ್ಲಿ ಯುವ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ಮಾಲೀಕರು ಕೂಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತೂ ತಂಡದ ದೂರದೃಷ್ಟಿಯಿಂದ ಈ ಯುವ ಆಟಗಾರರಿಗೆ ಮಣೆ ಹಾಕಲಿದೆ.
ಆರ್ಸಿಬಿ ಟಾರ್ಗೆಟ್ ಮಾಡೋ ಯುವ ಆಟಗಾರರು ಇವ್ರೇ!
ಪಂಜಾಬ್ ಪರ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ ನೆಹಾಲ್ ವಧೇರಾ.
ಇವರು ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಡಿಮೆ ಪಂದ್ಯಗಳನ್ನಾಡಿದ್ರೂ ಸೈ ಎನಿಸಿಕೊಂಡಿದ್ದರು.
ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಆರ್ಸಿಬಿ ಗಮನ ಸೆಳೆದಿದ್ದಾರೆ.
2024ರ ಐಪಿಎಲ್ ಸೀಸನ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರ ಅಶುತೋಷ್ ಶರ್ಮಾ. ಇವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರು ಮಾಡಿದವ್ರು. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಬಲ್ಲರು.
17ನೇ ಸೀಸನ್ನಲ್ಲಿ ತಾನು ಆಡಿದ 10 ಪಂದ್ಯದಲ್ಲಿ 189 ರನ್ ಚಚ್ಚಿದ್ರು. ಅಶುತೋಷ್ ಬ್ಯಾಟಿಂಗ್ ಸ್ಟ್ರೈಕ್ ರೇಟ್ 167.26 ಇದೆ. ಇವರ ಮೇಲೂ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿದೆ.
ಕೆಕೆಆರ್ ತಂಡದ 20 ವರ್ಷದ ಯುವ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ. ಇವರು ಕೆಕೆಆರ್ ತಂಡದ ಪರ ತಮಗೆ ಸಿಕ್ಕ ಅವಕಾಶದಲ್ಲಿ 10 ಪಂದ್ಯಗಳನ್ನು ಆಡಿ 163 ರನ್ ಗಳಿಸಿದ್ರು.
ಇವರ ಮೂಲ ಬೆಲೆ 20 ಲಕ್ಷ ರೂ. ಆಗಿದ್ದು, ಅಗ್ರೆಸ್ಸಿವ್ ಆಗಿ ಬ್ಯಾಟ್ ಮಾಡಬಲ್ಲರು. ಹಾಗಾಗಿ ಆರ್ಸಿಬಿ ಈತನ ಮೇಲೆ ಹಣದ ಹೊಳೆಯನ್ನೇ ಹರಿಸಬಹುದು.