RCB GIRLS :
ಗಾರ್ಡನ್ ಸಿಟಿ ಬೆಂಗಳೂರಲ್ಲಿ ಕ್ರಿಕೆಟ್ ಕಲರವ ಜೋರಾಗಿದೆ. ಚಿನ್ನಸ್ವಾಮಿ ಮೈದಾನದ ಸುತ್ತ ಕ್ರಿಕೆಟ್ ಫೀವರ್ ಕಾವೇರಿದೆ. ಹೋಮ್ಗ್ರೌಂಡ್ನಲ್ಲಿ 3ನೇ ಆವೃತ್ತಿಯ ಮೊದಲ ಪಂದ್ಯವನ್ನಾಡಲು RCB GIRLS ಮಣಿಗಳು ಸಜ್ಜಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೀವರ್ನ ನಡುವೆ ಮಹಿಳಾ ಪ್ರೀಮಿಯರ್ ಲೀಗ್ನ ಕಾವು ಕೂಡ ಕ್ರಿಕೆಟ್ ಲೋಕವನ್ನ ಆವರಿಸಿದೆ.
ಇಂದಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಬ್ಯಾಟಲ್ ಫೀಲ್ಡ್ನಲ್ಲಿ ಪಂದ್ಯಗಳು ನಡೆಯಲಿವೆ. RCB GIRLS ಹೋಮ್ ಟೀಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು -ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗಲಿವೆ. ಹೈ ಪ್ರೊಫೈಲ್ ತಂಡಗಳ ಹೈವೋಲ್ಟೆಜ್ ಕದನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
High voltage clash at Chinnaswamy Maidan.
RCB GIRLS ಪ್ರೀಮಿಯರ್ ಲೀಗ್ನ ಹೈಪ್ರೋಫೈಲ್ ತಂಡಗಳ ನಡುವಿನ ಹೈವೋಲ್ಟೆಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಬಿಗ್ ಟೀಮ್ಗಳ ಹಣಾಹಣಿ ಅಭಿಮಾನಿಗಳ ವಲಯದಲ್ಲಿ ತೀವ್ರ ಕುತೂಹಲ ಹುಟ್ಟಿ ಹಾಕಿದೆ.
Mandana sets eyes on hat-trick win!
ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಟೂರ್ನಿ ಅರಂಭಕ್ಕೂ ಮುನ್ನ ಪ್ರಮುಖ ಆಟಗಾರ್ತಿಯರ ಅಲಭ್ಯತೆ ಆರ್ಸಿಬಿಗೆ ಹಿನ್ನಡೆಯಾಗುತ್ತೆ ಅನ್ನೋ ಪ್ರಿಡಿಕ್ಷನ್ ನಡೆದಿತ್ತು. ಆದ್ರೆ, ಆ ಪ್ರಿಡಿಕ್ಷನ್ ಸುಳ್ಳಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರೋ ಮಂದಾನ ಪಡೆ ಇದೀಗ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ.
Fans expect on Mandana, Ellis Perry.!
ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಅಭಿಮಾನಿಗಳಿಂದ ಕಿಕ್ಕಿರಿದು ತುಂಬೋದು ಪಕ್ಕಾ. ಮನೆ ಹುಡುಗಿಯರಿಗೆ ಸಪೋರ್ಟ್ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಬಂದೆ ಬರ್ತಾರೆ. ಕನ್ನಡತಿ ಶ್ರೇಯಾಂಕ ಪಾಟೀಲ್ ಇಂಜುರಿಗೊಂಡು ಸೀಸನ್ನಿಂದ ಔಟ್ ಆಗಿದ್ದಾರೆ. ಇದೀಗ ಸಾಲಿಡ್ ಫಾರ್ಮ್ನಲ್ಲಿರೋ ನಾಯಕಿ ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ.
Will Richa Ghosh do magic in Chinnaswamy?
ಆರ್ಸಿಬಿಯ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಕೂಡ ಅದ್ಭುತ ಬ್ಯಾಟಿಂಗ್ ನಡೆಸ್ತಿದ್ದಾರೆ. ಮೊದಲ ಪಂದ್ಯದಲ್ಲಿ ಆರ್ಭಟಿಸಿ ಗುಜರಾತ್ಗೆ ಶಾಕ್ ಕೊಟ್ಟ ರಿಚಾ ಘೋಷ್, ಡೆಲ್ಲಿ ಎದುರಿನ ಪಂದ್ಯದಲ್ಲೂ ಮಿಂಚಿದ್ರು. ಎರಡೂ ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸಿ ಗೆಲುವಿನ ದಡ ಸೇರಿಸಿರೋ ರಿಚಾ ಕೂಡ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಇನ್ನುಳಿದಂತೆ ಡೇನಿಯಲ್ ವ್ಯಾಟ್, ಕನ್ನಿಕಾ ಅಹುಜಾ, ರೇಣುಕಾ ಸಿಂಗ್, ಜಾರ್ಜಿಯಾ ವೆರ್ಹಾಮ್ ಉತ್ತಮ ಪರ್ಫಾಮೆನ್ಸ್ ನೀಡ್ತಿದ್ದಾರೆ.
ಹೋಮ್ಗ್ರೌಂಡ್ನಲ್ಲೂ ಇದೇ ಪರ್ಫಾಮೆನ್ಸ್ ಮುಂದುವರೆಸಿದ್ರೆ, ಆರ್ಸಿಬಿಯ ಪ್ಲೇ ಆಫ್ ಟಿಕೆಟ್ ಬಹುತೇಕ ಕನ್ಫರ್ಮ್ ಆದಂತೆ. ಬೆಂಗಳೂರಿನಲ್ಲಿ ನಡೆಯುವ ಇವತ್ತಿನ ವುಮೆನ್ಸ್ ಪ್ರೀಮಿಯರ್ ಲೀಗ್ನ ಹೈವೋಲ್ಟೆಜ್ ಕದನಕ್ಕೆ ಕ್ರಿಕೆಟ್ ಲೋಕದ ಕುತೂಹಲದಿಂದ ಕಾಯ್ತಿದೆ. ಮುಂಬೈ VS ಬೆಂಗಳೂರು ನಡುವಿನ ಹೈಪ್ರೊಫೈಲ್ ತಂಡಗಳ ನಡುವಿನ ಕಾದಾಟದಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಕಾದು ನೋಡಬೇಕಿದೆ.
ಸೋಲಿನೊಂದಿಗೆ ಈ ಸೀಸನ್ ಆರಂಭಿಸಿದ ಮುಂಬೈ ಇಂಡಿಯನ್ಸ್ 2ನೇ ಪಂದ್ಯದಲ್ಲಿ ಗೆದ್ದು ಬೀಗಿದೆ. ಡೆಲ್ಲಿ ವಿರುದ್ಧ ಸೋತು, ಗುಜರಾತ್ ವಿರುದ್ಧ ಗೆದ್ದ ಮುಂಬೈ ಆತ್ಮವಿಶ್ವಾಸದ ಅಲೆಯಲ್ಲಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿರುವ ಹರ್ಮನ್ಪ್ರೀತ್ ಕೌರ್ ಪಡೆ ಆರ್ಸಿಬಿ ಟಕ್ಕರ್ ಕೊಡೋ ಲೆಕ್ಕಾಚಾರದಲ್ಲಿದೆ.
ಇದನ್ನು ಓದಿರಿ : ICC Champions Trophy: 11 Tosses Lost In A Row; India Owns Unwanted Record In Fixture Against Bangladesh