ತಮಿಳುನಾಡು: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತವೂ ನವೆಂಬರ್ 29 ರ ಶನಿವಾರ ಮಧ್ಯಾಹ್ನ ಪುದುಚೇರಿ ಸಮೀಪದಲ್ಲಿ ಕರೈಕಲ್ ಮತ್ತು ಮಹಾಬಲಿಪುರಂ ನಡುವೆ ಅಪ್ಪಳಿಸಲಿದೆ ಎಂದು ಚೆನ್ನೈ ಹವಾಮಾನ ಕೇಂದ್ರದ ನಿರ್ದೇಶಕರಾದ ಡಾ ಬಾಲಚಂದ್ರನ್ ತಿಳಿಸಿದರು.
ಈ ಕುರಿತು ಮಾತನಾಡಿರುವ ಅವರು, ಸದ್ಯ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದ್ದು, ಅದು ವಾಯುವ್ಯ ದಿಕ್ಕಿನೆಡೆಗೆ ಸಾಗುವ ನಿರೀಕ್ಷೆ ಇದೆ. ಇದು ಶೀಘ್ರದಲ್ಲೇ ಚಂಡಮಾರುತವಾಗಿ ತೀವ್ರಗೊಳ್ಳಲಿದೆ. ಇದು ನಾಳೆ ಮಧ್ಯಾಹ್ನ ಪುದುಚೇರಿ ಸಮೀಪ ಕರೈಕಲ್ ಮತ್ತು ಮಹಾಬಲಿಪುರಂ ನಡುವೆ ಅಪ್ಪಳಿಸಲಿದೆ. ಇದರ ಫಲಿತಾಂಶವಾಗಿ ತಮಿಳುನಾಡು ಉತ್ತರ ಕರಾವಳಿಯ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಮತ್ತೆ ಕೆಲವು ಪ್ರದೇಶದಲ್ಲಿ ಭಾರಿಯಿಂದ ಕೂಡಿದ ಭಾರಿ ಮಳೆಯಾಗಲಿದೆ ಎಂದರು.
ಚಂಡಮಾರುತ ಅಪ್ಪಳಿಸುವ ಸಂದರ್ಭದಲ್ಲಿ ಗಾಳಿಯ ವೇಳೆ ಗಂಟೆಗೆ 70 ರಿಂದ 80 ಕಿ.ಮೀ ಇದ್ದು, ಕೆಲವು ಸಂದರ್ಭದಲ್ಲಿ ತೀವ್ರಗೊಂಡು ಗಂಟೆಗೆ 90 ಕಿ.ಮೀ ಆಗಬಹುದು. ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದ್ದು, ಅದು ವಾಯುವ್ಯ ದಿಕ್ಕಿನೆಡೆಗೆ ಸಾಗುವ ನಿರೀಕ್ಷೆ ಇದೆ.
ಈ ಮುನ್ಸೂಚನೆ ಹಿನ್ನೆಲೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿದ್ದೇವೆ. ಚಂಡಮಾರುತ ಮತ್ತು ಮಳೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ವ್ಯವಸ್ಥೆ ಮೂಲಕ ಅಪ್ಡೇಟ್ ಮಾಡಲಾಗುವುದು ಎಂದರು.
ಬಂಗಾಳ ಕೊಲ್ಲಿಯಲ್ಲಿನ ನಿನ್ನೆಯ ಹವಾಮಾನ ವ್ಯವಸ್ಥೆ ಅನುಸಾರ ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ ಎರಡು ದಿನದಲ್ಲಿ ಸೈಕ್ಲೋನ್ ತೀವ್ರಗೊಳ್ಳಲಿದ್ದು, ಭಾರಿ ಮಳೆಯಾಗಲಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಿನ್ನೆಲೆ ತಮಿಳುನಾಡಿನ ಚೆನ್ನೈ ಮತ್ತು ಚೆಂಗಲಪಟ್ಟು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿಯೂ ಕೂಡ ಮಂಗಳವಾರದವರೆಗೆ ಶಾಲೆ -ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.
ತಗ್ಗು ಮತ್ತು ದುರ್ಬಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೂ ಕೂಡ ಸೈಕ್ಲೋನ್ ಹಿನ್ನೆಲೆ ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ವೇಗದ ಗಾಳಿಯೊಂದಿಗೆ ಮಳೆಯಾಗುವ ಹಿನ್ನೆಲೆ ಕರಾವಳಿ ತೀರದ ಪ್ರದೇಶದ ಜನರು ಮನೆಯೊಳಗೆ ಇದ್ದು ಸುರಕ್ಷತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಚಂಡಮಾರುತ ಪರಿಣಾಮ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಚೆಂಗಲ್ಪಟ್ಟು, ಕಡಲೂರು, ಮೈಲಥುರೈ, ತಿರುವರೂರ್, ನಾಗಪತ್ತಿನಂ ಮತ್ತು ಪುದುಚೇರಿಯ ಕರೈಕಲ್ನಲ್ಲಿ ಅತ್ಯಂತ ಕೆಟ್ಟ ಹವಾಮಾನದಿಂದ ಭಾರಿ ಮಳೆಯಾಗಲಿದ್ದು, ರೆಡ್ ಆಲರ್ಟ್ ಘೋಷಿಸಲಾಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now