New Delhi News:
ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ ಆಗಲಿರುವ REKHA GUPTA, ಬಿಜೆಪಿಯ ಸಾಮಾನ್ಯ ಕಾರ್ಯಕರ್ತೆಯಾಗಿದ್ದು, ವಿಧಾನಸಭೆಯ ಮೊದಲ ಪ್ರವೇಶದಲ್ಲೇ ಸಿಎಂ ಅವಕಾಶ ಒಲಿದಿದು ಬಂದಿದೆ. ರೇREKHA GUPTA ಅವರ ಜೊತೆಗೆ ಪ್ರವೇಶ್ ಸಾಹಿಬ್ ಸಿಂಗ್, ಅಶೀಶ್ ಸೂದ್, ಮಂಜಿದರ್ ಸಿಂಗ್ ಸಿರ್ಸಾ, ರವಿಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರರಾಜಧಾನಿಯ ಮುಖ್ಯಮಂತ್ರಿ ಗದ್ದುಗೆ ಏರುವವರು ಯಾರು ಎಂಬ 11 ದಿನಗಳ ಕುತೂಹಲಕ್ಕೆ ಬುಧವಾರವೇ ತೆರೆಬಿದ್ದಿದೆ. ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶದ ಜೊತೆಗೆ ಮುಖ್ಯಮಂತ್ರಿಯಾಗಿಯೂ REKHA GUPTA ಆಯ್ಕೆಯಾಗಿದ್ದಾರೆ. 26 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಎರಡನೇ ಮಹಿಳಾ ಮುಖ್ಯಮಂತ್ರಿ ಕೂಡ ಇವರಾಗಿದ್ದಾರೆ.
ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿರುವ ಅವರು ಇಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ. ಶಾಲಿಮಾರ್ ಬಾಗ್ನ ಎಎಪಿ ಅಭ್ಯರ್ಥಿ ಬಂದನ ಕುಮಾರಿ ಅವರನ್ನು 29 ಸಾವಿರ ಮತಗಳ ಅಂತರದಿಂದ ಸೋಲಿಸಿ REKHA GUPTA ವಿಧಾನಸಭೆ ಪ್ರವೇಶಿಸಿದ್ದಾರೆ.
ಇಂದು 11ಗಂಟೆಗೆ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, 50 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ. ಇದೇ ವೇಳೆ ನೂತನವಾಗಿ ಆಯ್ಕೆಗೊಂಡ ದೆಹಲಿ ಮುಖ್ಯಮಂತ್ರಿಗೆ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಎನ್ಡಿಎ ಮೈತ್ರಿ ಹೊಂದಿರುವ ರಾಜಕೀಯ ನಾಯಕರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಶುಭ ಕೋರಲಿದ್ದಾರೆ.
Gratitude to PM-BJP leaders:
ಪ್ರಸಾದ್ ಮತ್ತು ಧನಕರ್ ಅವರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ 48 ಬಿಜೆಪಿ ಶಾಸಕರು ಭಾಗವಹಿಸಿದ್ದರು. ಗುಪ್ತಾ ಅವರ ಹೆಸರನ್ನು ಪಕ್ಷದ ಹಿರಿಯ ನಾಯಕರಾದ ಪರ್ವೇಶ್ ವರ್ಮಾ, ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಪ್ರಸ್ತಾಪಿಸಿದರು.
ಅಂತಿಮವಾಗಿ 50 ವರ್ಷದ REKHA GUPTA ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದಿಂದ ದೆಹಲಿ ಮಹಿಳಾ ಮುಖ್ಯಮಂತ್ರಿಗಳನ್ನು ಪಡೆದಿದೆ. ಅತಿಶಿ ಬಳಿಕ ಗುಪ್ತಾ ಅವರು ಮಹಿಳಾ ಮುಖ್ಯಮಂತ್ರಿಯಾಗಿ ದೆಹಲಿ ರಾಜ್ಯವನ್ನು ಆಳಲಿದ್ದಾರೆ.
ಅವಕಾಶ ನೀಡಿದ್ದಕ್ಕಾಗಿ ರೇಖಾ ಗುಪ್ತಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಇತರ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಇರುತ್ತಾರೆಯೇ ಎಂಬ ಬಗ್ಗೆ ಪಕ್ಷದಿಂದ ಯಾವುದೇ ಅಧಿಕೃತ ಮಾತು ಬಂದಿಲ್ಲ. ಆದರೆ, ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಸಿಎಂ ಸೇರಿದಂತೆ ಗರಿಷ್ಠ ಏಳು ಸಚಿವರು ಇರಬಹುದು. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ವರ್ಮಾ ಅವರು ಉನ್ನತ ಹುದ್ದೆಗೆ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಅಂತಿಮವಾಗಿ ಹೈಕಮಾಂಡ್ ರೇಖಾ ಗುಪ್ತಾ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ
Who is this Rekha Gupta:
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೇಖಾ, ಮಹಿಳಾ ಸಂಬಂಧಿತ ವಿಚಾರದಲ್ಲಿ ಸಕ್ರಿಯವಾಗಿದ್ದು, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಹಾಗೇ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.
ಮನೀಶ್ ಗುಪ್ತಾ ಎಂಬ ಉದ್ಯಮಿ ಜೊತೆ ಮದುವೆಯಾಗಿರುವ ರೇಖಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದಿಂದ ಕಾನೂನು ಪದವೀಧರರಾಗಿರುವ ಗುಪ್ತಾ ಅವರು ಆರ್‌ಎಸ್‌ಎಸ್ ನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದಾರೆ.
ಬನಿಯಾ ಸಮುದಾಯಕ್ಕೆ ಸೇರಿರುವ ಗುಪ್ತಾ ಅವರು 1992 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರಾಗಿ ರಾಜಕೀಯ ಪ್ರವೇಶಿಸಿದವರು. ಹರಿಯಾಣದ ಜುಲಾನಾದಲ್ಲಿ ಜನಿಸಿದ ಅವರು ಆರ್‌ಎಸ್‌ಎಸ್‌ನೊಂದಿಗೆ 32 ವರ್ಷಗಳ ಒಡನಾಟ ಹೊಂದಿದ್ದಾರೆ ಮತ್ತು ದೆಹಲಿಯ ಮಾಜಿ ನಾಗರಿಕ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಗುಪ್ತಾ ಅವರು ದೆಹಲಿ ಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿ ಮಾಜಿ ಸಿಎಂ ಅತಿಶಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರು ಶುಭ ಹಾರೈಸಿದ್ದಾರೆ.
Tight Security:
ಪ್ರಮಾಣವ ವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದಲ್ಲಿ ಬಿಗಿ ಭದ್ರತೆ ನಡೆಸಲಾಗಿದೆ. ನಗರದ ಮಧ್ಯ, ಉತ್ತರ ಮತ್ತು ನವದೆಹಲಿ ಪ್ರದೇಶಗಳಲ್ಲಿ 25,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನು ಓದಿರಿ : Himachal CM Directs Officials To Explore Solar Power Potential In Shimla’s Kupvi Area