Arthur River (Australia) News:
157 ಡಾಲ್ಫಿನ್ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್ನಂತಹ ಸಮುದ್ರ ಜೀವಿ ಇವುಗಳ ಸಾವಿಗೆ ಕಾರಣವಾಗಿರುವಂತೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ನಡುವೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿರುವ ಕೆಲವು ಡಾಲ್ಫಿನ್ಗಳು ಸಹ ಪತ್ತೆಯಾಗಿದ್ದು, ಅವುಗಳನ್ನು ರಕ್ಷಿಸುವುದು ಕಷ್ಟವಾಗಿದೆ ಎಂದು ರಾಜ್ಯ ವನ್ಯಜೀವಿ ಅಧಿಕಾರಿ ಬ್ರೆಂಡೊನ್ ಕ್ಲಾರ್ಕ್ ಹೇಳಿದ್ದಾರೆ.
AUSTRALIAN ದ ದಕ್ಷಿಣ ದ್ವೀಪ ತಾಸ್ಮಾನಿಯಾದಲ್ಲಿ ಹೆಚ್ಚು ಜನಸಂಪರ್ಕಕ್ಕೆ ಒಳಗಾಗದ ಸಮುದ್ರ ಕಿನಾರೆಯಲ್ಲಿ 150ಕ್ಕೂ ಹೆಚ್ಚು ಡಾಲ್ಫಿನ್ಗಳು ಸಾವನ್ನಪ್ಪಿದ್ದು, ಕಡಲ ಕಿನಾರೆಯಲ್ಲಿ ಅದರ ಕಳೆಬರಗಳು ಕಂಡು ಬಂದಿವೆ.ಆಸ್ಪ್ರೇಲಿಯಾದ ಹೆಚ್ಚು ಜನ ಸಂಪರ್ಕ ಹೊಂದಿಲ್ಲದ ಬೀಚ್ನಲ್ಲಿ 157ಕ್ಕೂ ಹೆಚ್ಚು ಡಾಲ್ಫಿನ್ ಗಳು ಸಾವನ್ನಪ್ಪಿವೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ಡಾಲ್ಫಿನ್ಗಳ ಮೇಲಿನ ಹಾನಿ ಕಡಿಮೆ ಮಾಡಲು ತಜ್ಞ ವೈದ್ಯರನ್ನು ಸ್ಥಳದಲ್ಲಿ ಸಹಾಯಕ್ಕೆ ನಿಯೋಜಿಸಬೇಕಿದೆ.
ವೇಲ್ಸ್ಗಳುಇ ಡಾಲ್ಫಿನ್ ಗಳ ಮೇಲೆ ಆಗಾಗ ಈ ರೀತಿಯ ದಾಳಿ ಮಾಡಿ ಹಾನಿ ಮಾಡುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ವೆಟ್ ಡಾಕ್ಟರ್ ಉಪಸ್ಥಿತಿ ಅವಶ್ಯವಾಗಿದೆ ಎಂದಿದ್ದಾರೆ.ತಾಸ್ಮಾನಿಯಾದಲ್ಲಿ ಕಡು ಕಪ್ಪು ಮೈ ಬಣ್ಣದ ಡಾಲ್ಫಿನ್ಗಳು ಬುಧವಾರ ಬೆಳಗ್ಗೆ ಸಮುದ್ರ ಕಿನಾರೆಯ ಮರಳಿನಲ್ಲಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಈ ಕಿನಾರೆ ಪ್ರದೇಶ ಜನನಿಬಿಡವಲ್ಲದ ಕ್ಲಿಷ್ಟಕರ ಪ್ರದೇಶವಾಗಿದೆ.
ಇಲ್ಲಿನ ಸಮುದ್ರಕ್ಕೆ ವಿಶೇಷ ಸಾಧನಗಳನ್ನು ತರುವುದು ಕೂಡ ಸವಾಲುದಾಯಕವಾಗಿದ್ದು, ಇದು ದುರ್ಗಮ ಮಾರ್ಗವಾಗಿದೆ ಎಂದು ತಾಸ್ಮಾನಿಯಾದ ಪರಿಸರ ವಿಭಾಗ ತಿಳಿಸಿದೆ.ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್ಗಳ ಮೇಲಿನ ಈ ರೀತಿಯ ದಾಳಿ 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದಿದೆ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ. ಬಹುಕಾಲದ ಬಳಿಕ ಈ ರೀತಿಯ ನಡುವಳಿಕೆ ಕಂಡು ಬಂದಿದೆ. ಈ ಡಾಲ್ಫಿನ್ ಗಳು ವಲಸಿಗ ಪ್ರಾಣಿಗಳಾಗಿದ್ದು, ಇವು ಜಗತ್ತಿನ ಎಲ್ಲೆಡೆ ಸಂಚರಿಸುತ್ತವೆ. 50 ವರ್ಷದಲ್ಲಿ ಮೊದಲ ಬಾರಿಗೆ ಡಾಲ್ಫಿನ್ ಗಳು ಈ ರೀತಿಯಲ್ಲಿ ಕಂಡು ಬಂದಿರುವುದು ಏನಕ್ಕೆ ಎಂಬುದು ಕಾರಣ ತಿಳಿದಿಲ್ಲ. ಈ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಈ ಕುರಿತು ಸುಳಿವು ಲಭ್ಯವಾಗುವ ಭರವಸೆ ಇದೆ ಎಂದು ಬ್ರೆಂಡೊನ್ ಕ್ಲಾರ್ಕ್ ತಿಳಿಸಿದ್ದಾರೆ .
ಇದನ್ನು ಓದಿರಿ :new era of peace and unprecedented development