spot_img
spot_img

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Arthur River (Australia) News:

157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ ಸಾವಿಗೆ ಕಾರಣವಾಗಿರುವಂತೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ನಡುವೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿರುವ ಕೆಲವು ಡಾಲ್ಫಿನ್​ಗಳು ಸಹ ಪತ್ತೆಯಾಗಿದ್ದು, ಅವುಗಳನ್ನು ರಕ್ಷಿಸುವುದು ಕಷ್ಟವಾಗಿದೆ ಎಂದು ರಾಜ್ಯ ವನ್ಯಜೀವಿ ಅಧಿಕಾರಿ ಬ್ರೆಂಡೊನ್​ ಕ್ಲಾರ್ಕ್​ ಹೇಳಿದ್ದಾರೆ.

AUSTRALIAN ದ ದಕ್ಷಿಣ ದ್ವೀಪ ತಾಸ್ಮಾನಿಯಾದಲ್ಲಿ ಹೆಚ್ಚು ಜನಸಂಪರ್ಕಕ್ಕೆ ಒಳಗಾಗದ ಸಮುದ್ರ ಕಿನಾರೆಯಲ್ಲಿ 150ಕ್ಕೂ ಹೆಚ್ಚು ಡಾಲ್ಫಿನ್​ಗಳು ಸಾವನ್ನಪ್ಪಿದ್ದು, ಕಡಲ ಕಿನಾರೆಯಲ್ಲಿ ಅದರ ಕಳೆಬರಗಳು ಕಂಡು ಬಂದಿವೆ.ಆಸ್ಪ್ರೇಲಿಯಾದ ಹೆಚ್ಚು ಜನ ಸಂಪರ್ಕ ಹೊಂದಿಲ್ಲದ ಬೀಚ್​ನಲ್ಲಿ 157ಕ್ಕೂ ಹೆಚ್ಚು ಡಾಲ್ಫಿನ್​ ಗಳು ಸಾವನ್ನಪ್ಪಿವೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ಡಾಲ್ಫಿನ್​ಗಳ ಮೇಲಿನ ಹಾನಿ ಕಡಿಮೆ ಮಾಡಲು ತಜ್ಞ ವೈದ್ಯರನ್ನು ಸ್ಥಳದಲ್ಲಿ ಸಹಾಯಕ್ಕೆ ನಿಯೋಜಿಸಬೇಕಿದೆ.

ವೇಲ್ಸ್​ಗಳುಇ ಡಾಲ್ಫಿನ್​ ಗಳ ಮೇಲೆ ಆಗಾಗ ಈ ರೀತಿಯ ದಾಳಿ ಮಾಡಿ ಹಾನಿ ಮಾಡುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ವೆಟ್​ ಡಾಕ್ಟರ್​ ಉಪಸ್ಥಿತಿ ಅವಶ್ಯವಾಗಿದೆ ಎಂದಿದ್ದಾರೆ.ತಾಸ್ಮಾನಿಯಾದಲ್ಲಿ ಕಡು ಕಪ್ಪು ಮೈ ಬಣ್ಣದ ಡಾಲ್ಫಿನ್​ಗಳು ಬುಧವಾರ ಬೆಳಗ್ಗೆ ಸಮುದ್ರ ಕಿನಾರೆಯ ಮರಳಿನಲ್ಲಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಈ ಕಿನಾರೆ ಪ್ರದೇಶ ಜನನಿಬಿಡವಲ್ಲದ ಕ್ಲಿಷ್ಟಕರ ಪ್ರದೇಶವಾಗಿದೆ.

ಇಲ್ಲಿನ ಸಮುದ್ರಕ್ಕೆ ವಿಶೇಷ ಸಾಧನಗಳನ್ನು ತರುವುದು ಕೂಡ ಸವಾಲುದಾಯಕವಾಗಿದ್ದು, ಇದು ದುರ್ಗಮ ಮಾರ್ಗವಾಗಿದೆ ಎಂದು ತಾಸ್ಮಾನಿಯಾದ ಪರಿಸರ ವಿಭಾಗ ತಿಳಿಸಿದೆ.ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್​ಗಳ ಮೇಲಿನ ಈ ರೀತಿಯ ದಾಳಿ 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದಿದೆ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ. ಬಹುಕಾಲದ ಬಳಿಕ ಈ ರೀತಿಯ ನಡುವಳಿಕೆ ಕಂಡು ಬಂದಿದೆ. ಈ ಡಾಲ್ಫಿನ್​ ​ಗಳು ವಲಸಿಗ ಪ್ರಾಣಿಗಳಾಗಿದ್ದು, ಇವು ಜಗತ್ತಿನ ಎಲ್ಲೆಡೆ ಸಂಚರಿಸುತ್ತವೆ. 50 ವರ್ಷದಲ್ಲಿ ಮೊದಲ ಬಾರಿಗೆ ಡಾಲ್ಫಿನ್​ ಗಳು ಈ ರೀತಿಯಲ್ಲಿ ಕಂಡು ಬಂದಿರುವುದು ಏನಕ್ಕೆ ಎಂಬುದು ಕಾರಣ ತಿಳಿದಿಲ್ಲ. ಈ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಈ ಕುರಿತು ಸುಳಿವು ಲಭ್ಯವಾಗುವ ಭರವಸೆ ಇದೆ ಎಂದು ಬ್ರೆಂಡೊನ್​ ಕ್ಲಾರ್ಕ್ ತಿಳಿಸಿದ್ದಾರೆ​ .

 

ಇದನ್ನು ಓದಿರಿ :new era of peace and unprecedented development

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...