ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯಿದೆ -1991ಯ (Places of worship act) ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿಕೊಳ್ಳಲಿದೆ. ಸಿಜೆಐ ಸಂಜೀವ್ ಖನ್ನಾ, ಜಸ್ಟೀಸ್ ಸಂಜಯ್ ಕುಮಾರ್, ಜಸ್ಟೀಸ್ ಕೆ.ವಿ.ವಿಶ್ವನಾಥನ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಇದರಿಂದ ಹಿಂದೂ ದೇವಾಲಯಗಳ ಜಾಗದಲ್ಲಿ ನಿರ್ಮಿಸಿರುವ ಬೇರೆ ಧರ್ಮದ ಪೂಜಾ ಸ್ಥಳಗಳನ್ನು ಅದೇ ಸ್ವರೂಪದಲ್ಲಿ ಮುಂದುವರಿಸಲಾಗಿದೆ. ಇದು ಧಾರ್ಮಿಕ ಹಕ್ಕಿನ ಉಲಂಘನೆಯಾಗಿದೆ. ಮೂಲಭೂತ ಹಕ್ಕು ನೀಡಲಾಗಿರುವ ಸಂವಿಧಾನದ 14 ಮತ್ತು 25ನೇ ವಿಧಿಗಳ ಉಲಂಘನೆಯಾಗಿದೆ. ಈ ಕಾಯಿದೆಯು ಏಕಪಕ್ಷೀಯವಾಗಿದೆ ಎಂದು ಅಶ್ವಿನಿ ಉಪಾಧ್ಯಾಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ, ಸುಬ್ರಮಣ್ಯಸ್ವಾಮಿ ಸೇರಿದಂತೆ ಅನೇಕರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆ- 1991ರ ಸೆಕ್ಷನ್ 2, 3, 4 ಅನ್ನು ರದ್ದುಪಡಿಸಲು ಕೋರಲಾಗಿದೆ. ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆಯು..
1947 ಆಗಸ್ಟ್ 15ಕ್ಕಿಂತ ಮುಂಚೆ ಇದ್ದ ಧಾರ್ಮಿಕ ಸ್ಥಳ ಸ್ವರೂಪ ಬದಲಾಯಿಸುವಂತಿಲ್ಲ. ಧಾರ್ಮಿಕ ಸ್ಥಳಗಳನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಬೇಕು ಎಂದು ಕಾಯಿದೆ ಹೇಳುತ್ತದೆ.
ಅಶ್ವಿನಿ ಉಪಾಧ್ಯಾಯ ಅರ್ಜಿಯ ಮೇಲೆ 2021ರ ಮಾರ್ಚ್ನಲ್ಲೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಕೇಂದ್ರ ಸರ್ಕಾರಕ್ಕೆ ನೋಟಿಸ್ಗೆ ಇದುವರೆಗೂ ಪ್ರತಿಕ್ರಿಯೆ ಇಲ್ಲ. ಕಾಯಿದೆಯ ಬಗ್ಗೆ ನಿಲುವು ಏನೆಂದು ತಿಳಿಸದೇ ಕೇಂದ್ರ ಮೌನವಾಗಿದೆ. ಕಾಯಿದೆಯು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಅಶ್ವಿನಿ ಉಪಾಧ್ಯಾಯ ಮನವಿ ಮಾಡಿಕೊಂಡಿದ್ದಾರೆ.
ಇಂಥ ಅರ್ಜಿಗಳಿಂದ ದೇಶಾದ್ಯಂತ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ. ಇಂಥ ಕೋರಿಕೆಗಳಿಂದ ದೇಶಾದ್ಯಂತ ವಿವಾದಗಳು ಸೃಷ್ಟಿಯಾಗುತ್ತವೆ. ಅಂತಿಮವಾಗಿ ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದ ಜ್ಞಾನವಾಪಿ ಮಸೀದಿ ತನ್ನ ಪ್ರತಿ ಅರ್ಜಿಯಲ್ಲಿ ಹೇಳಿದೆ.
ಸುಪ್ರೀಂ ಕೋರ್ಟ್ ಧಾರ್ಮಿಕ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳ) ಕಾಯಿದೆ-1991 ಅನ್ನು ರದ್ದುಪಡಿಸುತ್ತಾ? ಇಲ್ಲವಾ? ಅನ್ನೋದು ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಮುಸ್ಲಿಂ ಸಮುದಾಯದಿಂದ ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆ-1991 ಅನ್ನು ಮುಂದುವರಿಸಲು ಕೋರಿಕೆ ಇದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಕಾಯಿದೆಯನ್ನು ರದ್ದುಪಡಿಸಿದರೆ ಅದರ ಪರಿಣಾಮ ತೀವ್ರವಾಗಿರುತ್ತೆ ಎಂದು ಸಂಭಾಲ್ ಹಿಂಸಾಚಾರ ಉಲ್ಲೇಖಿಸಿದೆ.