spot_img
spot_img

ಅಡಕೆ ಕ್ಯಾನ್ಸರ್‌ಕಾರಕ ಎಂಬ ವರದಿ ಅವೈಜ್ಞಾನಿಕ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಶಿರಸಿ : ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಕೆ ಕ್ಯಾನ್ಸರ್‌ಕಾರಕ, ಬಳಕೆ ನಿಯಂತ್ರಿಸಿದರೆ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ವಿಶ್ವದಲ್ಲಿಯೇ ತಡೆಗಟ್ಟಬಹುದು ಎಂದು ವರದಿ ನೀಡಿದೆ.

ಈ ವರದಿ ಅಡಕೆ ಬೆಳಗಾರರಲ್ಲಿ ಆತಂಕ ಮೂಡಿಸಿದೆ.

ಈ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ. ಇದು ಅವೈಜ್ಞಾನಿಕ ವರದಿಯಾಗಿದ್ದು, ಅಡಿಕೆ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್‌ ನ್ಯಾಶನಲ್‌ ಏಜನ್ಸಿ ಫಾರ್‌ ರಿಸರ್ಚ್‌ ಆಂಡ್‌ ಕ್ಯಾನ್ಸರ್‌ʼ ನೀಡಿರುವ ಅಡಕೆ ಕ್ಯಾನ್ಸರ್ ಕಾರಕ ಎಂಬುದು ಯಾವುದೇ ಆಧಾರವಿಲ್ಲದೆ ನೀಡಿದ ಅವೈಜ್ಞಾನಿಕ ವರದಿಯಾಗಿದೆ.

ಈಗಾಗಲೇ ಕ್ಯಾಂಪ್ಕೋ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳು ಅಡಿಕೆ ಮೇಲೆ ಸಂಶೋಧನೆಗಳನ್ನು ಕೈಗೊಂಡು, ಅಡಿಕೆಯು ಕ್ಯಾನ್ಸರ್‌ ಕಾರಕವಲ್ಲ ಎಂಬ ವರದಿಯನ್ನು ನೀಡಿದ್ದಲ್ಲದೆ, ಔಷಧೀಯ ಗುಣಗಳು ಸಹ ಅಡಕೆಯಲ್ಲಿರುವ ಬಗ್ಗೆ ಉಲ್ಲೇಖಿಸಿರುತ್ತಾರೆ.

ಇಂತಹ ಯಾವುದೇ ವೈಜ್ಞಾನಿಕ ಸಂಶೋಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಂಗಸಂಸ್ಥೆಯು ವರದಿ ನೀಡಿರುವುದು ಸಮಂಜಸವೆನಿಸುವುದಿಲ್ಲ. ಈ ವಿಷಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಡಬ್ಲೂಎಚ್ಓ ಸಂಸ್ಥೆಗೆ ತಿಳಿಸುವ ಮತ್ತು ಅವರಿಗೆ ಮನವರಿಕೆಯನ್ನೂ ಸಹ ಮಾಡುವ ಪ್ರಯತ್ನ ನಡೆಯುತ್ತಿದೆ. ಸಾವಿರಾರು ವರ್ಷಗಳಿಂದ ಅಡಿಕೆ ಬಳಕೆಯಲ್ಲಿದ್ದು ಪೂಜನೀಯ ಸ್ಥಾನದಲ್ಲಿದೆ.

ಈ ವಿಷಯಗಳ ಬಗ್ಗೆ ಸರಕಾರಿ ಮಟ್ಟದಲ್ಲೂ ಸಹ ಗಂಭೀರವಾಗಿ ಪ್ರಯತ್ನಿಸುವಂತೆ ಸಂಬಂಧಪಟ್ಟ ಸಚಿವರುಗಳಿಗೆ ಹಾಗೂ ಇಲಾಖೆಯ ಮುಖ್ಯಸ್ಥರುಗಳಿಗೆ ಮನವರಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆಯು ಸಹ ಈ ಕುರಿತು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇನೆ.

ಈಗಾಗಲೇ ಕ್ಯಾಂಪ್ಕೋ ಸೇರಿದಂತೆ ರಾಜ್ಯದ ಪ್ರಮುಖ ಸಹಕಾರಿ ಸಂಘಗಳು ಮತ್ತು ಸಂಶೋದನಾ ಸಂಸ್ಥೆಗಳು ಅಡಕೆ ಬೆಳೆಗಾರರ ಹಿತರಕ್ಷಣೆ ಕುರಿತಂತೆ ಸಕ್ರಿಯಗೊಂಡಿವೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಲ್ಲಿ ಪಾಲ್ಗೊಳ್ಳುವಿಕೆ ಅತೀ ಮುಖ್ಯವಾಗಿದೆ.

ಆಗಾಗ ಅಡಕೆ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಇಂತಹ ಷಡ್ಯಂತ್ರಗಳನ್ನು ತಡೆಯಲು ಕೇಂದ್ರ ಹಣಕಾಸು, ವಾಣಿಜ್ಯ ಹಾಗೂ ಆರೋಗ್ಯ ಇಲಾಖೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ.

ಕಾಲಕಾಲಕ್ಕೆ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಗತ್ಯವಾದ ಎಲ್ಲಾ ಕ್ರಮಗಳ ಬಗ್ಗೆ ಪ್ರಯತ್ನಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರೈತರು ಭಯಭೀತರಾಗುವ ಅಗತ್ಯವಿಲ್ಲ.

ತಂಬಾಕು ಬೇರ್ಪಟ್ಟ ಅಡಕೆ ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಹಾನಿಕರವಲ್ಲ ಎನ್ನುವುದು ಅನೇಕ ಸಂಶೋಧನೆಗಳಿಂದ ಹಾಗೂ ವೈಜ್ಞಾನಿಕವಾಗಿಯೂ ದೃಡಪಟ್ಟಿದೆ. ಈ ಅಂಶಗಳನ್ನು ಮತ್ತು ವೈಜ್ಞಾನಿಕ ಸಂಶೋದನೆಯ ಅಂಶಗಳನ್ನು ಮುಂದಿಟ್ಟು ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದು ಇರುತ್ತದೆ.

ದೇಶದಲ್ಲಿಯೇ ಕರ್ನಾಟಕವು ಅತಿ ಹೆಚ್ಚು ಅಡಕೆ ಬೆಳೆಯುವ ರಾಜ್ಯವಾಗಿದ್ದು, ಆದ ಕಾರಣ ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...

ಭರತನಾಟ್ಯದ 52 ಮುದ್ರೆ 3 ವರ್ಷದ ಮಗು ಪ್ರದರ್ಶನ : ಗಿನ್ನಿಸ್ ದಾಖಲೆ ನಿರ್ಮಾಣ

ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದೆ. "ನನ್ನ...

ಅಂಚೆ ಚೀಟಿ ಸಂಗ್ರಹ : ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್ ನಿಮಿಸಿದ ನಿವೃತ್ತ ನೌಕರ

ಉಡುಪಿ: ಕೆಲವೊಮ್ಮೆ ವ್ಯಕ್ತಿಗಳ ಹವ್ಯಾಸವೇ ಅವರನ್ನು ದೊಡ್ಡ ಸಾಧನೆಯತ್ತ ಕೊಂಡೊಯ್ಯುತ್ತದೆ. ಅದರಂತೆ ಕಾಲೇಜೊಂದರ ನಿವೃತ್ತ ಕಚೇರಿ ಸಹಾಯಕ ಡೇನಿಯಲ್​ ಮೊಂತೇರೊ ಅವರು ಅಂಚೆ ಚೀಟಿ...

ಎಸ್ ಸಿ ಎಸ್ ಟಿ ಗಳ ದೌರ್ಜನ್ಯ : ಸರ್ಕಾರದ ಬ್ರಹ್ಮಾಸ್ತ್ರ

ಬೆಂಗಳೂರು: SC/ ST ಸಮುದಾಯದ ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತಡೆಗೆ ಸರ್ಕಾರ ಬ್ರಹ್ಮಾಸ್ತ್ರ ರೆಡಿ ಮಾಡಿದೆ. SC/ST ಸಮುದಾಯದ ಜನರ ಮೇಲೆ...