New Delhi News:
ಗಣರಾಜ್ಯೋತ್ಸವ ಅಂಗವಾಗಿ ಪ್ರತಿವರ್ಷ ನೀಡುವ ರಾಷ್ಟ್ರಪತಿ ಪದಕ ಘೋಷಣೆಯಂತೆ ಈ ಬಾರಿ ಕೂಡ ನಡೆಸಲಾಗಿದೆ. ಹೋಮ್ ಗಾರ್ಡ್, ನಾಗರಿಕ ರಕ್ಷಣೆ, ಪೊಲೀಸ್ ಸಿಬ್ಬಂದಿ ಸೇರಿದಂತೆ ವಿವಿಧ ಸೇವೆಗಳಲ್ಲಿ ಕರ್ತವ್ಯ ನಿರ್ವಹಣೆ ನಡೆಸಿದ ಸಿಬ್ಬಂದಿಗಳು ಈ ಗೌರವ ಪದಕಕ್ಕೆ ಪಾತ್ರರಾಗಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಅಗ್ನಿ ಮತ್ತು ನಾಗರಿಕದಳದ ಸಿಬ್ಬಂದಿ ಸೇರಿದಂತೆ ಒಟ್ಟು 942 ಮಂದಿ ಪೊಲೀಸರಿಗೆ ವಿವಿಧ ರೀತಿಯ ಶೌರ್ಯ ಮತ್ತು ಸೇವಾ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಘೋಷಣೆ ಮಾಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಇದರಲ್ಲಿ 95 ಶೌರ್ಯ ಪ್ರಶಸ್ತಿಗಳು ಸೇರಿದೆ.
GALLANTRY AND SERVICE MEDALS ಶೌರ್ಯ ಪ್ರಶಸ್ತಿ ವಿಜೇತರಲ್ಲಿ, ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ 28, ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ 28, ಈಶಾನ್ಯದಲ್ಲಿ ಮೂರು ಮತ್ತು ಇತರ ಪ್ರದೇಶಗಳಲ್ಲಿ ನಿಯೋಜಿಸಲಾದ 36 ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗಿದೆ.ಮೆರಿಟೋರಿಯಸ್ GALLANTRY AND SERVICE MEDALS ಸೇವೆಗಾಗಿ 746 ಪದಕಗಳಲ್ಲಿ, 634 ಪೊಲೀಸ್ ಸೇವೆಗೆ, 37 ಅಗ್ನಿಶಾಮಕ ಸೇವೆಗೆ, 39 ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ಸೇವೆಗೆ ಮತ್ತು 36 ಸುಧಾರಣಾ ಸೇವೆಗೆ ನೀಡಲಾಗಿದೆ.
ವಿಶೇಷ ಸೇವೆಗಾಗಿ ನೀಡುವ 101 ರಾಷ್ಟ್ರಪತಿಗಳ ಪದಕಗಳಲ್ಲಿ, 85 ಪೊಲೀಸ್ ಸಿಬ್ಬಂದಿಗೆ, 5 ಅಗ್ನಿಶಾಮಕ ಸೇವಾ ಸಿಬ್ಬಂದಿಗೆ, 7 ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ಸೇವೆಗೆ ಮತ್ತು 4 ಸುಧಾರಣಾ ಸೇವೆ ಗುರುತಿಸಿ ನೀಡಲಾಗಿದೆ.
ವಿಶೇಷ ಸೇವೆಗಾಗಿ ನೀಡುವ ಪದಕವನ್ನು ಸೇವೆಯಲ್ಲಿನ ವಿಶೇಷ ದಾಖಲೆಗೆ ನೀಡಿದರೆ, ಮೆರಿಟೋರಿಯಸ್ ಸೇವಾ ಪದಕವನ್ನು ಕರ್ತವ್ಯವನ್ನು ಶ್ರದ್ಧಾ ಭಕ್ತಿಯಿಂದ ಮೌಲ್ಯಯುತವಾಗಿ ನಿರ್ವಹಿಸಿದಾಗ ನೀಡಲಾಗುವುದು. ಶೌರ್ಯ ಪ್ರಶಸಕ್ತಿಯಲ್ಲಿ ಜೀವ ಮತ್ತು ಆಸ್ತಿಯನ್ನು ಉಳಿಸುವಲ್ಲಿ ಅಥವಾ ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ತೋರಿದ ಶೌರ್ಯಕ್ಕೆ ಮೆಚ್ಚಿ ನೀಡಲಾಗುತ್ತದೆ.