Agartala News:
ಒಂದೇ ದಿನ ಶಾಸಕರಾಗಿದ್ದರೂ ಅವರಿಗೆ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಒದಗಿಸಲು ತ್ರಿಪುರಾ ಸರ್ಕಾರ ನಿರ್ಧರಿಸಿದೆ. ತ್ರಿಪುರಾ ವಿಧಾನಸಭೆಯ ಮೂರು ದಿನಗಳ ಚಳಿಗಾಲದ ಅಧಿವೇಶನ ಜನವರಿ 10 ರಿಂದ ಪ್ರಾರಂಭವಾಗಲಿದೆ. ಒಂದೇ ಒಂದು ದಿನ ಶಾಸಕರಾಗಿದ್ದರೂ ಅವರಿಗೆ ನಿವೃತ್ತಿ ವೇತನದ ಸೌಲಭ್ಯ ಒದಗಿಸಲು ತ್ರಿಪುರಾ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ತ್ರಿಪುರಾ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ವಿಧಾನಸಭೆಯ ಸದಸ್ಯರೊಬ್ಬರು ಪ್ರಮಾಣವಚನ ಸ್ವೀಕರಿಸಿ ಶಾಸಕರಾಗಿ ಒಂದು ದಿನ ಸೇವೆ ಸಲ್ಲಿಸಿದ್ದರೂ ಸಾಕು ಅವರು ಪಿಂಚಣಿ ಮತ್ತು ಗೃಹ ಸಾಲ ಸೇರಿದಂತೆ ಎಲ್ಲ ನಿವೃತ್ತಿ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ವಿಧಾನಸಭೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4.5 years service is mandatory for retirement facility:
ಈಗ ಹೊಸ ಪ್ರಸ್ತಾವಿತ ಮಸೂದೆ ಅಡಿ ಸಚಿವರು, ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ವೇತನ, ಭತ್ಯೆಗಳು, ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳನ್ನು ಹೆಚ್ಚಿಸಲಾಗುವುದು ಎಂದು ಅಧಿಕಾರಿ ಐಎಎನ್ಎಸ್ಗೆ ತಿಳಿಸಿದ್ದಾರೆ. ಸಚಿವರು, ಸ್ಪೀಕರ್, ಉಪ ಸ್ಪೀಕರ್, ವಿರೋಧ ಪಕ್ಷದ ನಾಯಕ, ಮುಖ್ಯ ಸಚೇತಕ ಮತ್ತು ಶಾಸಕರ ವೇತನ, ಭತ್ಯೆ, ಪಿಂಚಣಿ ಮತ್ತು ಇತರ ಪ್ರಯೋಜನಗಳ 2022 ರ ಈ ಹಿಂದಿನ ತಿದ್ದುಪಡಿ ಪ್ರಕಾರ, ಪಿಂಚಣಿ ಸೇರಿದಂತೆ ನಿವೃತ್ತಿ ಪ್ರಯೋಜನಗಳನ್ನು ಪಡೆಯಬೇಕಾದರೆ ಶಾಸಕರು ಕನಿಷ್ಠ ನಾಲ್ಕೂವರೆ ವರ್ಷಗಳ ಕಾಲ ಸದನದ ಸದಸ್ಯರಾಗಿ ಸೇವೆ ಸಲ್ಲಿಸಿರಬೇಕಿದೆ.
An amendment bill to modify the existing law:
ಬುಧವಾರ ನಡೆದ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಜನವರಿ 10 ರಿಂದ ಮೂರು ದಿನಗಳ ಚಳಿಗಾಲದ ಅಧಿವೇಶನವನ್ನು ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಶಾಸಕರಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸಲು ಅಸ್ತಿತ್ವದಲ್ಲಿರುವ ಕಾನೂನನ್ನು ಮಾರ್ಪಡಿಸುವ ತಿದ್ದುಪಡಿ ಮಸೂದೆ ಸೇರಿದಂತೆ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ರತನ್ ಲಾಲ್ ನಾಥ್ ಹೇಳಿದ್ದಾರೆ.
ಅಧಿವೇಶನದ ಮೊದಲ ದಿನವಾದ ಜನವರಿ 10 ರಂದು ರಾಜ್ಯಪಾಲ ಇಂದ್ರಸೇನಾ ರೆಡ್ಡಿ ನಲ್ಲು ಅವರು ಸದನವನ್ನುದ್ದೇಶಿಸಿ ತಮ್ಮ ಸಾಂಪ್ರದಾಯಿಕ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ಷಮತೆ ಮತ್ತು ದೃಷ್ಟಿಕೋನವನ್ನು ಉಲ್ಲೇಖಿಸಲಿದ್ದಾರೆ ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದರು.