spot_img
spot_img

ಗುರುವನ್ನೇ ಮೀರಿಸಿದ ಶಿಷ್ಯ ರಿಷಬ್​ ಪಂತ್ ; ಗಿಲ್​​ ಕ್ರಿಸ್ಟ್​  ಶಾಕ್, ಪಂತ್ ಆಟಕ್ಕೆ.!!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ದಿನ ಕಳೆದಂತೆ ರಿಷಬ್​ ಪಂತ್​​​ ಜನಪ್ರಿಯತೆ ಹೆಚ್ಚಾಗ್ತಿದೆ. ಬ್ಯಾಟಿಂಗ್​​​​ ಜೊತೆ ವಿಕೆಟ್ ​ಕೀಪಿಂಗ್​ನಲ್ಲಿ ಪ್ರಬುದ್ಧತೆ ಕಾಣ್ತಿದೆ. ಈ ಡೇರ್​​ಡೆವಿಲ್​ ಕೀಪರ್​​​​​​​​ ಇದೀಗ ದೊಡ್ಡ ಕನಸು ಕಂಡಿದ್ದಾರೆ. ಅವರ ಡ್ರೀಮ್ ನೋಡಿದ್ರೆ ನೀವು ಖಂಡಿತ ಹ್ಯಾಪಿ ಆಗದಿರಲ್ಲ.

 

ಇದನ್ನೂ ಓದಿ : ತುಂಗಭದ್ರಾ ಜಲಾಶಯದ ಬಗ್ಗೆ ಡಿಕೆ.ಶಿವಕುಮಾರ್ ಹೇಳಿದ್ದೆನು.!

ಸೈಡ್​​​​ ಪ್ಲೀಸ್​​​​​, ಫೈರಿ​​ ರಿಷಬ್​ ಪಂತ್ ಇಸ್​​ ಬ್ಯಾಕ್​​​​

ಟೀಮ್ ಇಂಡಿಯಾದಲ್ಲಿ ಮತ್ತೆ ರಿಷಬ್​ ಪಂತ್​ ಬಿರುಗಾಳಿ ಬೀಸಿದೆ. ಎರಡು ವರ್ಷಗಳಿಂದ ಸೈಲೆಂಟಾಗಿದ್ದ ಪಂತ್ ಹೆಸರು ಮತ್ತೆ ಕ್ರಿಕೆಟ್​​​​ ಲೋಕದಲ್ಲಿ ಗುನುಗುತ್ತಿದೆ. ಬಾಂಗ್ಲಾದೇಶ ವಿರುದ್ಧ ಭರ್ಜರಿ ಸಿಡಿಸಿದ ಫೈರಿ ಬ್ಯಾಟರ್​ ಗ್ರೇಟೆಸ್ಟ್​ ಕಮ್​ಬ್ಯಾಕ್ ಮಾಡಿದ್ದಾರೆ. ಆ ಮೂಲಕ ಹಳೇ ಖದರ್​ ತೋರಿಸಿದ್ದಲ್ಲದೇ, ಟೆಸ್ಟ್​ ಕ್ರಿಕೆಟ್​ನಲ್ಲಿ ವಿಶ್ವದ ಬೆಸ್ಟ್​ ವಿಕೆಟ್ ಕೀಪರ್​​ ಆಗುವತ್ತ ಹೆಜ್ಜೆ ಹಾಕಿದ್ದಾರೆ.

 

ಅತಿ ಕಡಿಮೆ ಅವಧಿಯಲ್ಲೇ ಗುರು ಧೋನಿಗೆ ಚಮಕ್

ಟೀಮ್ ಇಂಡಿಯಾದಲ್ಲಿ ಧೋನಿಯ ಯುಗ ಅಂತ್ಯಗೊಂಡು ಹಲವು ವರ್ಷಗಳೇ ಉರುಳಿವೆ. ದಶಕಗಳ ಕಾಲ ಕ್ಯಾಪ್ಟನ್ ಕಮ್​ ವಿಕೆಟ್ ಕೀಪರ್ ಆಗಿ ಮಿಂಚಿದ್ದ ಮಾಹಿ ಜೊತೆ ಇದೀಗ ರೆಬೆಲ್ ಪಂತ್​ ಪೈಪೋಟಿಗಿಳಿದಿದ್ದಾರೆ. ಭಾರತಕ್ಕೆ ಎಂಟ್ರಿಕೊಟ್ಟ ಕಡಿಮೆ ಅವಧಿಯಲ್ಲೆ ಗುರುವಿಗೆ, ಶಿಷ್ಯ ಪಂತ್ ಚಮಕ್ ಕೊಟ್ಟಿದ್ದಾರೆ.

ಇದನ್ನೂ ಓದಿ : ತಿರುಪತಿ ತಿರುಮಲ ದೇವಸ್ಥಾನ ಶುದ್ದೀಕರಣ, ಶಾಂತಿ ಹೋಮ!

ಟೆಸ್ಟ್​ ಕ್ರಿಕೆಟ್​ನಲ್ಲಿ ಧೋನಿ-ಪಂತ್

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ 144 ಟೆಸ್ಟ್​​​ ಇನ್ನಿಂಗ್ಸ್​​​​​​​​​​​ಗಳನ್ನ ಆಡಿದ್ದಾರೆ. 38.09ರ ಎವರೇಜ್​​ನಲ್ಲಿ 4876 ರನ್​ ಹೊಡೆದಿದ್ದು, 6 ಶತಕ ಮೂಡಿ ಬಂದಿವೆ. ಆದ್ರೆ ಪಂತ್​​ ಜಸ್ಟ್​​ 58 ಇನ್ನಿಂಗ್ಸ್​ಗಳಲ್ಲೇ 2419 ರನ್​​ ಗಳಿಸಿದ್ದಾರೆ. ಧೋನಿಗಿಂತ ಹೆಚ್ಚು ಎವರೇಜ್​​​​ ಅಂದ್ರೆ 44.79 ಹೊಂದಿದ್ದು, ಅವರಷ್ಟೇ ಶತಕಗಳನ್ನ ಸಿಡಿಸಿದ್ದಾರೆ.

34 ಟೆಸ್ಟ್​​ಗಳಲ್ಲೆ ದಿಗ್ಗಜ ಗಿಲ್​ಕ್ರಿಸ್ಟ್​ಗೆ ಭಯ

ಗಿಲ್​​​ಕ್ರಿಸ್ಟ್​​​..! ವಿಶ್ವಕ್ರಿಕೆಟ್​ನ ಬೆಸ್ಟ್​ ವಿಕೆಟ್​ ಕೀಪರ್​​​ ಆಗಿ ಮೆರೆದಾಡಿದ್ರು. ಬ್ಯಾಟಿಂಗ್​​​ನಲ್ಲಿ ಸಿಡಿಗುಂಡಿನಂತೆ ಗುಡುಗ್ತಾ, ವಿಕೆಟ್​ ಹಿಂದೆಯೂ ಮ್ಯಾಜಿಕ್ ಸೃಷ್ಟಿಸಿದ್ರು. ಇಂತಹ ಆಸಿಸ್ ದಿಗ್ಗಜನಿಗೆ ಪಂತ್​​​ ಭೀತಿ ಹುಟ್ಟಿಸಿದ್ದಾರೆ. ಅದು ಜಸ್ಟ್​​ 34 ಟೆಸ್ಟ್​ ಪಂದ್ಯಗಳಲ್ಲೇ. ರಿಷಬ್ ಆರ್ಭಟದ ವೈಖರಿ ನೋಡ್ತಿದ್ರೆ ಗ್ರಿಲ್​ಕ್ರಿಸ್ಟ್​ರನ್ನೆ ಮೀರಿ ನಿಲ್ಲುವ ಲಕ್ಷಣ ಗೋಚರಿಸಿದೆ.

34 ಟೆಸ್ಟ್​​​ಗಳ ಬಳಿಕ ಸಾಧನೆ

ಟೀಮ್ ಇಂಡಿಯಾದ ರಿಷಬ್​ ಪಂತ್ ಇಲ್ಲಿ ತನಕ 58 ಟೆಸ್ಟ್​​ ಇನ್ನಿಂಗ್ಸ್ ಆಡಿದ್ದಾರೆ. 44.8 ಎವರೇಜ್ ಕಾಯ್ದುಕೊಂಡು, 2419 ರನ್​ ಬಾರಿಸಿದ್ದಾರೆ. 74.1 ಬ್ಯಾಟಿಂಗ್​ ಸ್ಟ್ರೈಕ್​ರೇಟ್​ ಆಗಿದ್ದು, 6 ಶತಕ ಹಾಗೂ 11 ಶತಕ ಹೊಡೆದಿದ್ದಾರೆ. 324 ಬೌಂಡರಿಗಳನ್ನ ಸಿಡಿಸಿದ್ದಾರೆ. ಗಿಲ್​ಕ್ರಿಸ್ಟ್ ಮೊದಲ​ 34 ಟೆಸ್ಟ್​​ಗಳಿಂದ 48 ಇನ್ನಿಂಗ್ಸ್ ಆಡಿ 2289 ರನ್​​ ಹೊಡೆದಿದ್ರು. ಅಂದ್ರೆ ಪಂತ್​ ಇವರಿಗಿಂತ 37 ರನ್​ ಮುಂದಿದ್ದಾರೆ. ಸರಾಸರಿ 58.81 ಆಗಿದ್ರೆ ಸ್ಟ್ರೈಕ್​ರೇಟ್​​​ 80.4 ಆಗಿದೆ. ಆಸಿಸ್​ ಬ್ಯಾಟರ್​ ಪಂತ್​​ರಷ್ಟೇ ಅಂದ್ರೆ 6 ಶತಕ ಗಳನ್ನ ಹೊಡೆದಿದ್ದು, 12 ಅರ್ಧಶತಕ ಬಾರಿಸಿದ್ದಾರೆ. ಇವರು ಬಾರಿಸಿದ ಬೌಂಡರಿಗಳ ಸಂಖ್ಯೆ 326.

ಇದನ್ನೂ ಓದಿ :ಮಿಸ್​​​ ಯೂನಿವರ್ಸ್​​ ಇಂಡಿಯಾ : 19 ವರ್ಷದ ಯುವತಿ ಈ ಚೆಂದುಳ್ಳಿ ಚೆಲುವೆ ಯಾರು?

ಪಂತ್​​ ನನಗಿಂತ ಹೆಚ್ಚು ಆಕ್ರಮಣಕಾರಿ

ಒಬ್ಬ ಕ್ರಿಕೆಟರ್​​​ಗೆ ಇದಕ್ಕಿಂತ ದೊಡ್ಡ ಕಾಂಪ್ಲಿಮೆಂಟ್​​ ಬೇಕಾ ಹೇಳಿ. ಅಷ್ಟಕ್ಕೂ ಹೀಗೆ ಹೇಳಿದ್ದು ಸಾಮಾನ್ಯ ಕ್ರಿಕೆಟರ್ ಅಲ್ಲ. ವಿಶ್ವಕ್ರಿಕೆಟ್​ನ ಮೋಸ್ಟ್​ ಡೇಂಜರಸ್​ ಹಾಗೂ ಅಟ್ಯಾಕಿಂಗ್ ಬ್ಯಾಟ್ಸ್​​​ಮನ್ ಗಿಲ್​​​ಕ್ರಿಸ್ಟ್​​​. ಪಂತ್​ ಬ್ಯಾಟಿಂಗ್​​​​ ಶೈಲಿಗೆ ಆಸಿಸ್​​​ ಬ್ಯಾಟರ್ ಫಿದಾ ಆಗಿದ್ದು, ರಿಷಬ್​​​​​​ ನನಗಿಂತ ಹೆಚ್ಚು ಆಕ್ರಮಣಕಾರಿ. ನಾನು ಆ ಸಮಯದಲ್ಲಿ ಅಗ್ರೆಸ್ಸಿವ್​ಗೆ ಬ್ರ್ಯಾಂಡ್​ ಆಗಿದ್ದೆ, ಆದರೆ ಪಂತ್​​​ ನನಗಿಂತ ಹೆಚ್ಚು ನಿರ್ಭೀತವಾಟ ಆಡ್ತಿದ್ದಾನೆ ಎಂದು ಗಿಲ್​​​​ಕ್ರಿಸ್ಟ್​​​​​ ಹೇಳಿದ್ದಾರೆ.

ಈಗಿನ್ನೂ ಪಂತ್​​ಗೆ ಜಸ್ಟ್​ 26 ವರ್ಷ. ಆಗಲೇ ದಿಗ್ಗಜ ಕ್ರಿಕೆಟರ್​ಗಳಿಗೆ ಚಮಕ್ ಕೊಟ್ಟಿದ್ದಾರೆ. ಆ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಶ್ವದ ಬೆಸ್ಟ್​​ ವಿಕೆಟ್ ಕೀಪರ್​ ಆಗುವ ಭರವಸೆ ಹುಟ್ಟುಹಾಕಿದ್ದಾರೆ. ಆ ದಿಸೆಯಲ್ಲಿ ಡೇರ್​ಡೆವಿಲ್​ ಪಂತ್ ಸಾಗಲಿ ಎಂಬುದೇ ಎಲ್ಲಾ ಫ್ಯಾನ್ಸ್​ ಆಶಯವಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

ಕಿರುತೆರೆ ಕಾರ್ಮಿಕರ ಪ್ರತಿಭಟನೆ : ಸೀರಿಯಲ್ ಗಳು ಸ್ಥಗಿತ

ಬೆಂಗಳೂರು: ಮೂರು ದಿನಗಳಿಂದ ಕನ್ನಡ ಕಿರುತೆರೆ ಧಾರಾವಾಹಿಗಳ (Kannada TV Serials) ಕಾರ್ಮಿಕರು ಸಂಬಳ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಲಸ (Serial shooting) ನಿಲ್ಲಿಸಿ...

ಹೊಸ ಜಿಲ್ಲೆಯಲ್ಲಿ ಮಹಾಕುಂಭ ಮೇಳ : ಸರ್ಕಾರದಿಂದ ಘೋಷಣೆ

ಲಖನೌ: ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ (Uttar Pradesh)ದ ಬಿಜೆಪಿ ಸರ್ಕಾರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುವ ಸ್ಥಳವನ್ನು ಹೊಸ ಜಿಲ್ಲೆಯಾಗಿ ಘೋಷಿಸಿ...

13 ಜನವರಿ ಮತ್ತು 26 ರ ನಡುವೆ ಮಹಾಕುಂಭ ಮೇಳ

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಮುಂಬರುವ 13 ಜನವರಿ ಮತ್ತು 26 ರ ನಡುವೆ ಮಹಾಕುಂಭ ಮೇಳವನ್ನು ಆಯೋಜಿಸಲಾಗಿದೆ. ದೇಶದಾದ್ಯಂತ ಹಿಂದೂ ಸಂಸೃತಿಯನ್ನು ಪಸರಿಸಲು...

ಭಾರತೀಯ ಭಾಷಾ ಉತ್ಸವ : ಇಲಾಖೆ ಆದೇಶ

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದಿನಿಂದ ‘ಭಾರತೀಯ ಭಾಷಾ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ದೇಶದ ವಿವಿಧ ಭಾಷೆಗಳ ಬಗ್ಗೆ...