Mumbai (Maharashtra) News:
2025ರ ವಿಶ್ವದ ಅತ್ಯಂತ ರೋಮ್ಯಾಂಟಿಕ್ ನಗರಗಳಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, ಮಹಾರಾಷ್ಟ್ರದ ರಾಜಧಾನಿ ROMANTIC CITY MUMBAI ದೇಶದ ಅತ್ಯಂತ ರೋಮ್ಯಾಂಟಿಕ್ ನಗರವಾಗಿ ಹೊರಹೊಮ್ಮಿದೆ. ಇಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಆಹಾರ, ಸಂಸ್ಕೃತಿ, ನೈಟ್ ಲೈಫ್, ಜೀವನ ನಿರ್ವಹಣೆಗೆ ಆಗುವ ಖರ್ಚು ಮತ್ತು ಜೀವನದ ಗುಣಮಟ್ಟದ ಆಧಾರದ ಮೇಲೆ ವಿಶ್ವದಾದ್ಯಂತ ಜಾಗತಿಕ ಸಮೀಕ್ಷೆ ನಡೆಸಿ ಅತ್ಯಂತ ರೋಮ್ಯಾಂಟಿಕ್ ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಸಮೀಕ್ಷೆಯ ಪ್ರಕಾರ, ದಕ್ಷಿಣ ಆಫ್ರಿಕಾದ ಕೇಪ್ ಟೌನ್, ಬ್ಯಾಂಕಾಕ್, ನ್ಯೂಯಾರ್ಕ್ ಸಿಟಿ, ಮೆಲ್ಬೋರ್ನ್ ಮತ್ತು ಲಂಡನ್ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿವೆ. ಮುಂಬೈ 49ನೇ ಸ್ಥಾನದಲ್ಲಿದೆ. ಈ ಪ್ರತಿಯೊಂದು ನಗರ ತನ್ನದೇ ವಿಶಿಷ್ಟ ಸಂಸ್ಕೃತಿ, ವಿಭಿನ್ನ ಆಹಾರ ಶೈಲಿ ಮತ್ತು ಕ್ರಿಯಾತ್ಮಕ ಜೀವನಶೈಲಿಯಿಂದ ಖ್ಯಾತಿ ಪಡೆದಿವೆ. 2025ರ ವಿಶ್ವದ ಅತ್ಯಂತ ರೋಮ್ಯಾಂಟಿಕ್ ನಗರಗಳಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, ಮಹಾರಾಷ್ಟ್ರದ ರಾಜಧಾನಿ ಮತ್ತು ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ 49ನೇ ಸ್ಥಾನ ಪಡೆದಿದೆ.
ಈ ಮೂಲದ ದೇಶದ ಅತ್ಯಂತ ರೋಮ್ಯಾಂಟಿಕ್ ನಗರವಾಗಿ ಹೊರಹೊಮ್ಮಿದೆ.ಇನ್ನು ಮುಂಬೈ ನಗರ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ನೀವು ಸಹ ದೇಶದ ಅತ್ಯಂತ ರೋಮ್ಯಾಂಟಿಕ್ ನಗರಕ್ಕೆ ಭೇಟಿ ನೀಡಲು ಪ್ಲ್ಯಾನ್ ಮಾಡಿದ್ದೀರಾ?. ಹಾಗಾದರೆ ಇಲ್ಲಿದೆ ಮುಂಬೈನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ.
Marine Drive:
ಇದು ಮುಂಬೈನ ಅದ್ಭುತ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇದನ್ನು ರಾಣಿಯ ನೆಕ್‌ಲೆಸ್ ಎಂದೂ ಕರೆಯಲಾಗುತ್ತದೆ. ಇಲ್ಲಿ ಸೂರ್ಯಾಸ್ತದ ನೋಟವನ್ನು ಕಣ್ಣುಂಬಿಕೊಳ್ಳುವುದೇ ಅದ್ಭುತ ಅನುಭವ. ಇದೂ ಮುಂಬೈನ ಹೆಗ್ಗುರುತು.
ಇದು ಪ್ರೇಮಿಗಳ ಮತ್ತು ಕಪಲ್ಸ್ಗಳ ನೆಚ್ಚಿನ ತಾಣವಾಗಿದೆ. ನೀವು ಇಲ್ಲಿಗೆ ಭೇಟಿ ನೀಡಲು ಬಯಸಿದರೆ, ಮುಂಬೈನ ಚರ್ಚ್‌ಗೇಟ್ ನಿಲ್ದಾಣದಿಂದ ಕೇವಲ ಎರಡು ನಿಮಿಷ ನಡೆದರೆ ಈ ಸ್ಥಳ ಸಿಗುತ್ತದೆ. ಪ್ರತಿ ನೂರಾರು ಜನ ತಮ್ಮ ಪ್ರೀತಿಪಾತ್ರರೊಂದಿಗೆ ಸೂರ್ಯಾಸ್ತವನ್ನು ಆನಂದಿಸಲು ಅಲ್ಲಿಗೆ ಬರುತ್ತಾರೆ.
ಶುಕ್ರವಾರ, ಶನಿವಾರ, ಭಾನುವಾರದಂದು ಅಂದರೆ ವಾರಾಂತ್ಯದ ದಿನಗಳಲ್ಲಿ ರಾತ್ರಿ ವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಪಲ್ಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
Girgaon Chowpatty:
ಈ ಸ್ಥಳ ಕಪಲ್ಗಳಿಗೆ ಉತ್ತಮ ಆಯ್ಕೆಯಾಗಿದೆ. ಗಿರ್ಗಾಂವ್ ಚೌಪಾಟಿಯ ಆಡಳಿತಾತ್ಮಕ ಹೆಸರು ಕೆಲವೇ ಜನರಿಗೆ ತಿಳಿದಿದೆ. ಗಿರ್ಗಾಂವ್ ಚೌಪಾಟಿಯನ್ನು ಸ್ವರಾಜ್ಯ ಭೂಮಿ ಎಂದೂ ಕರೆಯುತ್ತಾರೆ. ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.
ಸ್ಟ್ರೀಟ್ ಫೋಡ್ಗಳು, ಮಕ್ಕಳು ಆಟವಾಡಲು ಉದ್ಯಾನಗಳು, ಹಿರಿಯ ನಾಗರಿಕರಿಗೆ ನಾನಾ – ನಾನಿ ಪಾರ್ಕ್, ಕುದುರೆ ಸವಾರಿ, ಒಂಟೆ ಸವಾರಿ ಇಲ್ಲಿ ಲಭ್ಯವಿದೆ. ಆದ್ದರಿಂದ ನೀವು ನಿಮ್ಮ ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ಇಲ್ಲಿಗೆ ಭೇಟಿ ನೀಡಬಹುದು.
Gateway of India:
ಇಲ್ಲಿ ನೀವು ಹೋಟೆಲ್ ತಾಜ್, ಅರಬ್ಬಿ ಸಮುದ್ರದ ಅದ್ಭುತ ನೋಟ, ಸುಂದರವಾದ ಸೂರ್ಯಾಸ್ತವನ್ನು ಆನಂದಿಸಬಹುದು. ಅಲ್ಲದೆ, ನಿಮ್ಮ ಪ್ರೀತಿಪಾತ್ರರ ಜೊತೆ ಬೋಟಿಂಗ್ ಹೋಗಲು ನೀವು ಬಯಸಿದರೆ, ಅದು ಇಲ್ಲಿ ಲಭ್ಯವಿದೆ. ಈ ಬೋಟಿಂಗ್ ತುಂಬಾ ಜನಪ್ರಿಯವಾಗಿದೆ.
ಬೋಟ್ನಲ್ಲಿ ಹೋಗುವಾಗ ಶಾಂತ ಸಮುದ್ರ ಮತ್ತು ಮುಂಬೈ ನಗರದ ಸುಂದರ ದೃಶ್ಯಗಳನ್ನು ನೀವು ನೋಡಬಹುದು. ಇನ್ನು ವಿದೇಶಿ ಪಕ್ಷಿಗಳು ಬೋಟ್ ಮೇಲೆ ಸುಳಿದಾಡುತ್ತವೆ. ಅನೇಕರು ಈ ವಿದೇಶಿ ಪಕ್ಷಿಗಳಿಗೆ ಪ್ರೀತಿಯಿಂದ ಆಹಾರವನ್ನು ನೀಡುತ್ತಾರೆ. ಆದರೆ, ಇದಕ್ಕೆ ನಿಷೇಧ ಇದೆ ಎಂಬುದು ಗೊತ್ತಿರಲಿ. ನೀವು ಗೇಟ್‌ವೇ ಆಫ್ ಇಂಡಿಯಾಕ್ಕೆ ಭೇಟಿ ನೀಡಲು ಬಯಸಿದರೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಚರ್ಚ್‌ಗೇಟ್ ನಿಲ್ದಾಣದಿಂದ ಎಸಿ ಬಸ್‌ಗಳು ಲಭ್ಯವಿದ್ದು, ಅಲ್ಲಿಂದ ಹೋಗಬಹುದು.
Bandstand, Bandra:
ಬ್ಯಾಂಡ್‌ಸ್ಟ್ಯಾಂಡ್ ಬಾಂದ್ರಾದ ಕಡಲತೀರದ ಕಲ್ಲಿನ ಮಾರ್ಗವಾಗಿದೆ. ಇದನ್ನು ಹ್ಯಾಂಗ್‌ಔಟ್ ಸ್ಪಾಟ್ ಮತ್ತು ಜೋಗರ್ಸ್ ಪಾರ್ಕ್ ಎಂದೂ ಕರೆಯುತ್ತಾರೆ. ಬ್ಯಾಂಡ್‌ಸ್ಟ್ಯಾಂಡ್ ಕಪಲ್ಗಳಿಗೆ ನೆಚ್ಚಿನ ತಾಣವಾಗಿದೆ. ನೀವು ಮುಂಬೈಗೆ ಬಂದರೆ ಬ್ಯಾಂಡ್‌ಸ್ಟ್ಯಾಂಡ್‌ನ ಕಲ್ಲಿನ ಮೇಲೆ ಕುಳಿತು ಸ್ವಲ್ಪ ಸಮಯ ಕಳೆಯಬಹುದು. ಇನ್ನು ಪ್ರಸಿದ್ಧ ನಟ ಶಾರುಖ್ ಖಾನ್ ಅವರ ಬಂಗಲೆ ಕೂಡ ಇಲ್ಲಿ ನೀವು ಕಣ್ತುಂಬಿಕೊಳ್ಳಬಹುದು.
ನೀವು ಅದೃಷ್ಟವಂತರಾಗಿದ್ದರೆ, ಸಂಜೆಯ ವೇಳೆ ಶಾರುಖ್ ಖಾನ್ ಅವರನ್ನು ನೋಡಬಹುದು. ಇದು ಮುಂಬೈಕರ್‌ಗಳಿಗೆ ವಿಶೇಷ ಸ್ಥಳವಾಗಿದೆ. ಸಂಜೆ ನೀವು ಸಮುದ್ರತೀರದಲ್ಲಿ ಕುಳಿತು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಬಹುದು. ನೀವು ಇಲ್ಲಿ ಸೂರ್ಯಾಸ್ತವನ್ನು ಆನಂದಿಸಬಹುದು. ನೀವು ಆಹಾರಪ್ರಿಯರಾಗಿದ್ದರೆ, ಇಲ್ಲಿಗೆ ಭೇಟಿ ನೀಡಲೇಬೇಕು. ಇವು ಮುಂಬೈನ ಕೆಲವು ಫೋಟೋಜೆನಿಕ್ ಮತ್ತು ರೋಮ್ಯಾಂಟಿಕ್ ಸ್ಥಳಗಳಾಗಿವೆ.
ಇದನ್ನು ಓದಿರಿ : IHOLE BUILDING : ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಐಹೊಳೆ ಬ್ಲಾಕ್