ಬೆಂಗಳೂರು: ಮುಂದಿನ ವರ್ಷದ ಜೂನ್ ವೇಳೆಗೆ BEML ಕಂಪನಿ 53 ಸೆಟ್ ರೈಲುಗಳನ್ನು ನೀಡಬೇಕಿದೆ. ಜುಲೈ ವೇಳೆಗೆ ಮತ್ತೊಂದು ಸೆಟ್ ಹಸ್ತಾಂತರವಾಗುವ ನಿರೀಕ್ಷೆ ಇದೆ.
ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ನಾಗವಾರದವರೆಗಿನ 21.26 ಕಿಮೀ ಉದ್ದದ ಎತ್ತರಿಸಿದ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಡಿಸೆಂಬರ್ 2025 ರ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಬಿಇಎಂಎಲ್ ಲಿಮಿಟೆಡ್‌ನಿಂದ ಮೊದಲ ರೈಲನ್ನು ಹಸ್ತಾಂತರಿಸಲಾಗುತ್ತಿದ್ದು, ನಿಗದಿತ ಗಡುವಿನಲ್ಲಿ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ತಾವರೆಕೆರೆ-ಕಾಳೇನ ಅಗ್ರಹಾರ ನಡುವಿನ 7.5 ಕಿ. ಮೀ. ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಮಾತನಾಡಿದ ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು, ಮುಂದಿನ ವರ್ಷದ ಜೂನ್ ವೇಳೆಗೆ BEML ಕಂಪನಿ 53 ಸೆಟ್ ರೈಲುಗಳನ್ನು ನೀಡಬೇಕಿದೆ. ಜುಲೈ ವೇಳೆಗೆ ಮತ್ತೊಂದು ಸೆಟ್ ಹಸ್ತಾಂತರವಾಗುವ ನಿರೀಕ್ಷೆ ಇದೆ. ಡಿಸೆಂಬರ್ ವೇಳೆಗೆ ಎರಡು ಸೆಟ್ ಸಂಪೂರ್ಣವಾಗಿ ಕೈ ಸೇರಲಿದ್ದು, ಡಿಸೆಂಬರ್‌ನಲ್ಲಿ ಮಾರ್ಗದ ಉದ್ಘಾಟನೆ ವೇಳೆಗೆ 9-10 ಸೆಟ್ ರೈಲುಗಳು ಸಿದ್ಧವಾಗಿರಲಿದೆ ಎಂದು ತಿಳಿಸಿದರು.
ತಾವರಕೆರೆ, ಜಯದೇವ ಇಂಟರ್‌ಚೇಂಜ್ ನಿಲ್ದಾಣ, ಜೆಪಿ ನಗರ IVನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ ನಿಲ್ದಾಣಗಳು ಈ ಮಾರ್ಗದಲ್ಲಿದ್ದು, ರೈಲು ನಿಲ್ಲುವ ವಯಾಡಕ್ಟ್ ಬ್ರಿಡ್ಜ್ ಸಂಪೂರ್ಣ ಸಿದ್ಧವಾಗಿದೆ. ರೈಲು ಹಳಿ ಹಾಕುವ ಕಾರ್ಯ ಶೇ.70 ರಷ್ಟು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
4 ನಿಲ್ದಾಣಗಳಿಗೆ ಆರ್ಕಿಟೆಕ್ಚರ್ ಅಂತಿಮ ರೂಪ ನೀಡಲಾಗುತ್ತಿದೆ. ಜೆ. ಪಿ. ನಗರ ನಿಲ್ದಾಣ ಮೆಟ್ರೋ ಹಂತ-3ರ ವ್ಯಾಪ್ತಿಗೂ ಒಳಪಡಲಿದ್ದು, ಆ ಭಾಗ ಮುಗಿದಿದೆ. ಮಾರ್ಚ್ 2025ಕ್ಕೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಕಾಳೇನ ಅಗ್ರಹಾರದಲ್ಲಿ ಪ್ಲಾಟ್‌ಫಾರ್ಮ್‌ನ 50ರಷ್ಟು ಕಾಮಗಾರಿ ಮುಗಿದಿದ್ದು, ಬಲಭಾಗದಲ್ಲಿ ಇನ್ನೂ ಕಾಮಗಾರಿ ನಡೆಯಬೇಕಿದೆ. ಗುಲಾಬಿ ಮಾರ್ಗದ ರೈಲುಗಳು ಕೊತ್ತನೂರು ಡಿಪೋದಿಂದ ಸಂಚಾರ ನಡೆಸಲಿವೆ. ಈ ಡಿಪೋದ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಕಾಳೇನ ಅಗ್ರಹಾರದಲ್ಲಿ ಪ್ಲಾಟ್‌ಫಾರ್ಮ್‌ನ 50ರಷ್ಟು ಕಾಮಗಾರಿ ಮುಗಿದಿದ್ದು, ಬಲಭಾಗದಲ್ಲಿ ಇನ್ನೂ ಕಾಮಗಾರಿ ನಡೆಯಬೇಕಿದೆ. ಕೊತ್ತನೂರು ಡಿಪೋದ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿಂದಲೇ ಗುಲಾಬಿ ಮಾರ್ಗದಲ್ಲಿ ರೈಲುಗಳು ಹೊರಡಲಿವೆ. BMRCL ಮಾರ್ಚ್ 2025 ರೊಳಗೆ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಸಿಗ್ನಲಿಂಗ್, ಟೆಲಿ ಕಮ್ಯನಿಕೇಶನ್ ಮುಂತಾದ ಕಾಮಗಾರಿಗಳನ್ನು ಬಳಿಕ ಕೈಗೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.
ಈ ವರ್ಷದ ಅಕ್ಟೋಬರ್ 30 ರಂದು ಒಂಬತ್ತನೇ ಮತ್ತು ಅಂತಿಮ ಸುರಂಗ ಕೊರೆಯುವ ಯಂತ್ರ ಗುಲಾಬಿ ಮಾರ್ಗದಲ್ಲಿ 13.86-ಕಿಮೀ ಸುರಂಗ ಕೊರೆಯುವ ಕಾರ್ಯವನ್ನು ಪೂರ್ಣಗೊಳಿಸಿದ್ದು,
ಹಳಿ ಹಾಕುವ ಕಾಮಗಾರಿ ಆರಂಭವಾಗಿದೆ. 4 ಕಿ. ಮೀ. ಕಾಮಗಾರಿ ಪೂರ್ಣಗೊಂಡಿದೆ.
ಟೆಕ್ಸ್‌ಮಾಕೋ ರೈಲು ಇಂಜಿನಿಯರಿಂಗ್ ಲಿಮಿಟೆಡ್ ಕೆಲಸ ನಿಧಾನಗತಿಯಲ್ಲಿ ಸಾಗಿದ್ದು, ಈಗ ಎಲ್ ಅಂಡ್ ಟಿ ಲಿಮಿಟೆಡ್ ಸಹ ಕಾಮಗಾರಿಗೆ ಕೈ ಜೋಡಿಸಿದೆ. ಈ ಮಾರ್ಗದ ಸುರಂಗ ಮಾರ್ಗ 2026ರಕ್ಕೆ ಸಂಪೂರ್ಣವಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.