spot_img
spot_img

RUPEE PRICE AGAINST US DOLLAR : ದಾಖಲೆಯ ಕುಸಿತದ ಬಳಿಕ ಡಾಲರ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mumbai (Maharashtra) News :

ವಿಶ್ವದ ಎಲ್ಲ ಕರೆನ್ಸಿಗಳ ಎದುರು DOLLAR​ ಮೌಲ್ಯ ಅಬ್ಬರಿಸುತ್ತಿದೆ. ಅತಿ ಕನಿಷ್ಟಕ್ಕಿಳಿದಿದ್ದ ಭಾರತದ ರೂಪಾಯಿ ಇಂದಿನ ವಹಿವಾಟಿನಲ್ಲಿ ತುಸು ಏರಿಕೆ ದಾಖಲಿಸಿದೆ.ಈ ಹಿಂದಿಗಿಂತಲೂ ಅತಿ ಕನಿಷ್ಟ ಮೌಲ್ಯಕ್ಕೆ ಇಳಿದಿದ್ದ ರೂಪಾಯಿ ಇಂದು DOLLAR​ ಎದುರು 8 ಪೈಸೆ ಏರಿಕೆಯಾಗಿ 86.62ಕ್ಕೆ ಸ್ಥಿರವಾಯಿತು.ಅಮೆರಿಕನ್ DOLLAR​ ಎದುರು ದಾಖಲೆಯ ಗರಿಷ್ಠ ಮಟ್ಟಕ್ಕೆ ಕುಸಿದಿರುವ ಭಾರತದ ರೂಪಾಯಿ ಮೌಲ್ಯ ಮಂಗಳವಾರದ ವಹಿವಾಟಿನಲ್ಲಿ ತುಸು ಚೇತರಿಕೆ ಕಂಡಿದೆ.

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಬಂಡವಾಳ ಹಿಂತೆಗೆತದ ಹಿನ್ನಡೆಯ ಹೊರತಾಗಿಯೂ, ದೇಶೀಯ ಷೇರು ಮಾರುಕಟ್ಟೆಗಳ ಏರಿಕೆ, DOLLARನಿಯಮ ಸಡಿಲವಾಗಿದ್ದು, ಭಾರತದ ರೂಪಾಯಿಗೆ ಬಲ ತುಂಬಿತು. ಇದರಿಂದ ಮೌಲ್ಯದಲ್ಲಿ ಏರಿಕೆ ದಾಖಲಿಸಿತು.ಇದು ಹಿಂದಿನ ದಿನವಾದ ಮಂಗಳವಾರದ 86.70 ಕ್ಕಿಂತಲೂ 8 ಪೈಸೆ ಲಾಭವಾಯಿತು.ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಮಂಗಳವಾರ ರೂಪಾಯಿ 86.57 ರಿಂದ ಆರಂಭಗೊಂಡಿತು. ಬಳಿಕ ಮಧ್ಯಂತರದಲ್ಲಿ 86.45 ಕ್ಕೆ ತಲುಪಿತ್ತು. ದಿನದ ಕೊನೆಯಲ್ಲಿ 86.62 ಕ್ಕೆ ಮುಕ್ತಾಯವಾಯಿತು.

Single Day Max Drop: ಡಿಸೆಂಬರ್​ ಅಂತ್ಯದಿಂದ ರೂಪಾಯಿ ಮೌಲ್ಯವು ಕುಸಿಯುತ್ತಾ ಸಾಗಿದೆ. 2024ರ ಡಿಸೆಂಬರ್ 19 ರಂದು ಮೊದಲ ಬಾರಿಗೆ DOLLAR ಎದುರು 85 ರೂಪಾಯಿ ಗಡಿ ದಾಟಿತ್ತು. ಬಳಿಕ ಸತತ ಇಳಿಕೆ ಕಂಡು ದಿನದಲ್ಲಿ ಒಂದು ರೂಪಾಯಿ ಮೌಲ್ಯ ಕಳೆದುಕೊಂಡಿತ್ತು.

ಸೋಮವಾರವಷ್ಟೆ, ರೂಪಾಯಿ ಮೌಲ್ಯವು ಸುಮಾರು ಎರಡು ವರ್ಷಗಳಲ್ಲಿ ಒಂದೇ ದಿನದ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿತ್ತು. DOLLAR​ ಎದುರು 66 ಪೈಸೆ ಇಳಿಯುವ ಮೂಲಕ ಸಾರ್ವಕಾಲಿಕ 86.70ಕ್ಕೆ ತಲುಪಿತ್ತು. ಇದಕ್ಕೂ ಮೊದಲು ಅಂದರೆ, 2023ರ ಫೆಬ್ರವರಿ 6 ರಂದು ದಾಖಲೆಯ 68 ಪೈಸೆ ಕುಸಿತ ಕಂಡಿತ್ತು.

Impact of Markets: ದೇಶೀಯ ಮಾರುಕಟ್ಟೆಗಳಲ್ಲಿ ಸ್ವಲ್ಪ ಚೇತರಿಕೆ ಮತ್ತು ಅಮೆರಿಕ DOLLAR ದುರ್ಬಲವಾದ ಕಾರಣ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ.

ಚಿಲ್ಲರೆ ಹಣದುಬ್ಬರ ಇಳಿಕೆ ಮತ್ತು DOLLAR ಸಡಿಲಿಕೆಯು ರೂಪಾಯಿಗೆ ಬಲ ತುಂಬಿದೆ ಎಂದು ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.ಜಾಗತಿಕ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 0.10 ರಷ್ಟು ಏರಿಕೆಯಾಗಿ ಯುಎಸ್​ DOLLAR​ 81.09 ಕ್ಕೆ ತಲುಪಿದೆ.

Jump in stock market: ಇನ್ನೂ, ಕುಸಿತದ ಹಾದಿಯಲ್ಲಿದ್ದ ಮುಂಬೈ ಷೇರು ಮಾರುಕಟ್ಟೆಯೂ ಜಿಗಿತ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 169.62 ಅಂಕಗಳು ಏರಿಕೆಯಾಗಿ 76,499.63 ರಲ್ಲಿ ಸ್ಥಿರವಾದರೆ, ನಿಫ್ಟಿ 90.10 ಪಾಯಿಂಟ್‌ ಹೆಚ್ಚಿಸಿಕೊಂಡು 23,176.05ನಲ್ಲಿ ದಿನದ ವಹಿವಾಟು ಮುಗಿಸಿತು.

ಇದನ್ನು ಓದಿರಿ : KARAN NAIR : ದೇಶಿ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡಿಗ;

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

NARA LOKESH MEETS HDK : ಪುನಶ್ಚೇತನ ಪ್ಯಾಕೇಜ್ ಬಗ್ಗೆ ಚರ್ಚೆ

Bangalore/New Delhi News: NARA LOKESH MEETS HDK ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ಆಂಧ್ರ ಪ್ರದೇಶದ ಐಟಿ ಸಚಿವ ನಾ.ರಾ.ಲೋಕೇಶ್ ಅವರು ಪುನಶ್ಚೇತನ...

PM NARENDRA MODI TAKES HOLY DIP : ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ

Maha Kumbha Nagar (Prayagraj, UP) News: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರೊಂದಿಗೆ ಯುಮುನಾ ನದಿಯಲ್ಲಿ ಬೋಟ್​ ಮೂಲಕ ತೆರಳಿದ ಅವರು, ಸಂಗಮದಲ್ಲಿ...

CHAMPIONS TROPHY : 12 ಅಂಪೈರ್​ಗಳು, 3 ರೆಫರಿಗಳ ಪಟ್ಟಿ ಪ್ರಕಟ

New Delhi News: CHAMPIONS TROPHYಗಾಗಿ ಅಂಪೈರ್​ಗಳು ಹಾಗೂ ರೆಫರಿಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಹಾಗೂ ಯುಎಇಯ...

IND VS ENG FREE LIVE STREAMING : IND vs ENG ಮೊದಲ ಏಕದಿನ ಪಂದ್ಯದ ನೇರಪ್ರಸಾರವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

Read India vs England 1st: ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯ ಇಂದು ನಾಗ್ಪುರ ಮೈದಾನದಲ್ಲಿ ನಡೆಯಲಿದೆ. IND VS ENG...