Sai Pallavi News:
ಸಾಯಿ ಪಲ್ಲವಿ, ಸೌಂದರ್ದದಷ್ಟೇ ಮನೋಜ್ಞ ಅಭಿನಯದೊಂದಿಗೆ ಸಿನಿಮಾ ಅಭಿಮಾನಿಗಳನ್ನು ಸೆಳೆದ ನಟಿ. ನಟನೆಯ ಆಚೆ SAI PALLAVIಗೆ ಅನೇಕ ಪ್ರತಿಭೆಗಳನ್ನು ಹೊಂದಿದ್ದಾರೆ. ಇತ್ತೀಚೆಗೆ SAI PALLAVI ಹೊಸ ಹವ್ಯಾಸವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ ಅದು ಜೇನು ಸಾಕಾಣಿಕೆ.
ಇತ್ತೀಚೆಗೆ SAI PALLAVIಯವರ ಅಪ್ ಕಮಿಂಗ್ ಫಿಲ್ಮ್ ಥಂಡಲ್ ಸಿನಿಮಾ ಮೇಕರ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸುವವರಿಗೆ ಯಾವುದಾದರೂ ಪ್ರಶ್ನೆಯನ್ನು ಕೇಳಿ ಎಂದು ಹೇಳಿದ್ದರು. ಇದರಲ್ಲಿ ಅಭಿಮಾನಿಯೊಬ್ಬ ನಟನೆಯ ಹೊರತಾಗಿ ನೀವು ಮತ್ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೀರಿ ಎಂದು ಕೇಳಿದ್ದಾರೆ.
ಇನ್ನೊಬ್ಬ ಅಭಿಮಾನಿ ನೀವು ಖಾಲಿ ಸಮಯದಲ್ಲಿ ಏನೆಲ್ಲಾ ಮಾಡುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸಾಯಿ ಪಲ್ಲವಿ, ಫ್ರೀ ಟೈಮ್ನ್ಲಿ ನಾನು ನಾನಾಗಿ ಇರಲು ಇಷ್ಟಪಡುತ್ತೇನೆ. ಒಬ್ಬಳೇ ಇರುತ್ತೇನೆ. ನಾನು ಸಿನಿಮಾಗಳನ್ನು ನೋಡುತ್ತೇನೆ.
ನಾನು ಅಡುಗೆ ಮಾಡುತ್ತೇನೆ ಎಂದು ಹೇಳುವುದಿಲ್ಲ, ನಾನು ಸಾಮಾನ್ಯವಾಗಿ ಊಟವನ್ನು ಆಚೆಯಿಂದ ಆರ್ಡರ್ ಮಾಡಿ ತರಿಸುತ್ತೇನೆ. ನನ್ನ ತೋಟಕ್ಕೆ ಹೋಗುತ್ತೇನೆ ಅಲ್ಲು ಸಾಕಷ್ಟು ಕೃಷಿ ಕೆಲಸಗಳು ನಡೆಯುತ್ತಿರುತ್ತವೆ. ನಾನು ಅಲ್ಲಿಂದ ಕ್ಯಾರೆಟ್, ಆಲೂಗಡ್ಡೆ ಹಾಗೂ ಹಣ್ಣುಗಳನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಸಾಯಿ ಪಲ್ಲವಿ ನಾನು ಇತ್ತೀಚೆಗೆ ಜೇನು ಸಾಕಾಣಿಕೆ ಶುರು ಮಾಡಿದ್ದೀನಿ ಎಂದು ಹೇಳಿದ್ದಾರೆ.
ಅದರಲ್ಲಿ ನಾನು ಈಗ ಅದರಲ್ಲಿ ತುಂಬಾ ಉತ್ತಮಗೊಂಡಿದ್ದೀನಿ ಎಂದು ಹೇಳಿದ್ದಾರೆ. ಇನ್ನು ಹವ್ಯಾಸಗಳ ಬಗ್ಗೆ ಮತ್ತಷ್ಟು ಮಾಹಿತಿ ಕೊಟ್ಟಿರುವ ಸಾಯಿ ಪಲ್ಲವಿ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ಒತ್ತಡರಹಿತವಾಗಿ ಇರಲು, ಸಾಧ್ಯವಾದಷ್ಟು ಕ್ರೀಯಾಶೀಲತೆಯಿಂದ ಇರಿ. ಇದು ನಿಮ್ಮ ಮೂಡ್ನ್ನು ಸುಧಾರಿಸುತ್ತದೆ.
ಸಾರ್ವಜನಿಕ ಸಂಪರ್ಕ ಗಟ್ಟಿಯಾಗಿರಲಿ, ಇಡೀ ಜೀವನದ ಬಗ್ಗೆ ಸಂಪೂರ್ಣವಾಗಿ ಸಂತೃಪ್ತಿಯಿಂದ ಕಳೆಯಬೇಕು. ನಿಮಗೆ ಖುಷಿ ನೀಡುವ ವಿಚಾರದಲ್ಲಿ ಮುಳುಗಿ ಹೋಗಿ. ಎಂಜಾಯ್ ಮಾಡಿ. ನಿಮ್ಮ ಮೇಲೆ ಪಾಸಿಟಿವ್ ಪರಿಣಾಮ ಬೀರುವ ಕಾರ್ಯಗಳಲ್ಲಿ ತೊಡಗಿ ಎಂದು ಹೇಳಿದ್ದಾರೆ.
ಇದನ್ನು ಓದಿರಿ : Search Underway In Western Alaska For Plane Carrying 10 People