WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Mumbai News:
SAIF ಅಲಿ ಖಾನ್ ಅವರ ಬೆನ್ನೆಲುಬಿನಿಂದ 2.5 ಇಂಚು ಉದ್ದದ ಚಾಕು ಹೊರ ತೆಗೆಯಲಾಗಿದೆ. ಈಗ ನಟ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೋರಿಕೆಯಾಗುತ್ತಿದ್ದ ಬೆನ್ನುಮೂಳೆಯ ದ್ರವ ಸರಿಪಡಿಸಲಾಗಿದೆ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಬಾಲಿವುಡ್ ನಟ SAIF ಅಲಿ ಖಾನ್ಗೆ ದುಷ್ಕರ್ಮಿ 6 ಬಾರಿ ಚಾಕು ಇರಿದಿದ್ದು, ನಟನಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಅವರ ಬೆನ್ನುಮೂಳೆಯಲ್ಲಿ ಚಾಕು ಸಿಲುಕಿಕೊಂಡಿದ್ದರಿಂದ ತೀವ್ರ ಗಾಯಗಳಾಗಿವೆ. 2.5 ಇಂಚು ಉದ್ದದ ಬ್ಲೇಡ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿದೆ.
Saif Ali Khan health fully stable, out of danger: ಸದ್ಯ SAIF ಅಲಿ ಖಾನ್ ಡೇಂಜರ್ ಕಂಡೀಶನ್ನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ನಟ ಸದ್ಯ ಸಂಪೂರ್ಣ ಸ್ಥಿರವಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.ಲೀಲಾವತಿ ಆಸ್ಪತ್ರೆಯ ವೈದ್ಯ ನಿತಿನ್ ಡಾಂಗೆ ಅವರ ಪ್ರಕಾರ, ರಿಸ್ಕ್ ಫ್ಯಾಕ್ಟರ್ಸ್ ಕೊನೆಗೊಂಡಿದೆ.
ದಾಳಿಯ ನಂತರ ನಟನ ಮುಖ ಮತ್ತು ದೇಹದ ಭಾಗಗಳಲ್ಲಿ ಅನೇಕ ಗಾಯಗಳು ಕಂಡು ಬಂದಿವೆ ಎಂದು ಲೀಲಾವತಿ ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ. ಇಂದು ಮುಂಜಾನೆ ಅಥವಾ ಕಳೆದ ಮಧ್ಯರಾತ್ರಿ ಬಾಂದ್ರಾದಲ್ಲಿರುವ ನಿವಾಸದಲ್ಲಿ SAIF ಅಲಿ ಖಾನ್ ಮೇಲೆ ದುಷ್ಕರ್ಮಿ ದಾಳಿ ನಡೆಸಿದ್ದಾರೆ.
ನಟನ ಕೈ ಮತ್ತು ಕುತ್ತಿಗೆಯ ಗಂಭೀರ ಗಾಯ ಸೇರಿದಂತೆ ದೇಹದಲ್ಲಿ ಕನಿಷ್ಠ ಆರು ಗಾಯಗಳಾಗಿವೆ. ಅವರ ಎಡಗೈಯಲ್ಲಾದ ಎರಡು ಗಂಭೀರ ಗಾಯಗಳು ಮತ್ತು ಕುತ್ತಿಗೆಯಲ್ಲಾದ ಗಾಯವನ್ನು ಪ್ಲಾಸ್ಟಿಕ್ ಸರ್ಜರಿ ತಂಡ ಸರಿಪಡಿಸಿದೆ. ಅವರೀಗ ಸಂಪೂರ್ಣವಾಗಿ ಸ್ಥಿರವಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ” ಎಂದು ಡಾ.ಡಾಂಗೆ ಸುದ್ದಿಗಾರರಿಗೆ ತಿಳಿಸಿದರು.
“ನಟ SAIF ಅಲಿ ಖಾನ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ಬೆಳಗಿನ ಜಾವ 2 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಬೆನ್ನುಮೂಳೆಯಲ್ಲಿ ಚಾಕು ಸಿಲುಕಿದ್ದರಿಂದ ಗಾಯಗಳಾಗಿತ್ತು (thoracic spinal cord). ದೇಹದಿಂದ ಚಾಕು ತೆಗೆದುಹಾಕಲು ಮತ್ತು ಬೆನ್ನುಮೂಳೆಯಿಂದ ಸೋರಿಕೆಯಾಗುತ್ತಿದ್ದ ದ್ರವವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಇದನ್ನು ಓದಿರಿ : SHAHRUKH KHAN FAN BOY : ತಂದೆ ವಿರುದ್ಧ ನಟ ಶಾರೂಖ್ಗೆ ದೂರು ನೀಡಲು ಮನೆಬಿಟ್ಟು ಬಂದ ಬಾಲಕ