ಮುಶೀರಾಬಾದ್: ಮುಶೀರಾಬಾದ್ ಪೊಲೀಸರೊಂದಿಗೆ ಕೇಂದ್ರ ವಲಯದ ಕಾರ್ಯ ಪಡೆಯ ತಂಡ ಈ ದಾಳಿ ನಡೆಸಿದ್ದು, 330 ಕೆಜಿ ಹಾಲಿನ ಪುಡಿಯ ಬ್ಯಾಗ್ ಗಳು ಮತ್ತು 450 ಕೆಜಿ ಹಾಲಿನ ಪುಡಿಯ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದಿನ ಮುಶೀರಾಬಾದ್ ನ ಒಂದು ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಕಲಬೆರಕೆ ಅಥವಾ ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ “ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ನಂದಿನಿ ಹಾಲಿನ ಪುಡಿ ಪೂರೈಸಲಾಗುತ್ತಿದೆ. ಇದನ್ನು ಮಾರಾಟ ಮಾಡುವಂತಿಲ್ಲ. ಆದರೆ ಯೋಗ್ಯವಲ್ಲದ ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ನ್ನು ಅಕ್ರಮವಾಗಿ ಸಾಗಿಸಿ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಮುಶೀರಾಬಾದ್ ಪೊಲೀಸರೊಂದಿಗೆ ಕೇಂದ್ರ ವಲಯದ ಕಾರ್ಯ ಪಡೆಯ ತಂಡ ಈ ದಾಳಿ ನಡೆಸಿದ್ದು, 330 ಕೆಜಿ ಹಾಲಿನ ಪುಡಿಯ ಬ್ಯಾಗ್ ಗಳು ಮತ್ತು 450 ಕೆಜಿ ಹಾಲಿನ ಪುಡಿಯ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಚಿತ್ತಬೋಯಿನ ದಾಮೋದರ್ ಯಾದವ್ ಎಂದು ಗುರುತಿಸಲಾಗಿದೆ.
ದಾಮೋದರ್ ಯಾದವ್ ಬಳಕೆಗೆ ಯೋಗ್ಯವಲ್ಲದ ಪೌಡರ್ ನ್ನು ಹೆಚ್ಚಿನ ಬೆಲೆಗೆ ಅಗತ್ಯವಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆತನನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಈ ಹಿಂದೆ ಒಂದೆರಡು ಬಾರಿ ಬಂಧಿಸಿದ್ದರು. ಆದರೂ ತನ್ನ ಹಾದಿಯನ್ನು ಸರಿಪಡಿಸಿಕೊಳ್ಳದ ಆರೋಪಿ, ಅಕ್ರಮ ವ್ಯಾಪಾರವನ್ನು ಪುನರಾರಂಭಿಸಿದ್ದ ಎಂದು ತಿಳಿದುಬಂದಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now