spot_img
spot_img

SALUMARADA TIMMAKKA PARK – ಬಯಲುಸೀಮೆಯಲ್ಲಿ ಹಸಿರು ಸಸ್ಯೋದ್ಯಾನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Haveri News:

ಸುಮಾರು 20 ಎಕರೆ ವಿಸ್ತೀರ್ಣದಲ್ಲಿರುವ ಸಸ್ಯೋದ್ಯಾನದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳನ್ನು ಬೆಳೆಸಲಾಗಿದೆ. ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಮನಸ್ಸಿಗೆ ಮುದ ನೀಡುತ್ತವೆ. ಅಲಂಕಾರಿಕ ಸಸ್ಯೆಗಳು ಸೇರಿದಂತೆ ವಿವಿಧ ಬಗೆಯ ಮರಗಳು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಇನ್ನು ಸಿಮೆಂಟ್‌ನಲ್ಲಿ ನಿರ್ಮಿಸಿರುವ ನವಿಲು, ಜಿಂಕೆ ಸೇರಿದಂತೆ ವಿವಿಧ ಪ್ರಾಣಿಗಳು ಪ್ರವಾಸಿಗರಿಗೆ ಕಾಡಿನ ಅನುಭವ ನೀಡುತ್ತಿವೆ. ವೀಕ್ಷಣಾ ಗೋಪುರ, ಗುಂಪಾಗಿ ಕುಳಿತುಕೊಳ್ಳಲು ಮಾಡಿರುವ ಕಾಟೇಜ್‌ಗಳು ಸುಂದರವಾಗಿವೆ.ತಾಲೂಕಿನ ಕರ್ಜಗಿ ಬಳಿ ನಿರ್ಮಾಣಗೊಂಡಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಅರಣ್ಯ ಇಲಾಖೆ ಮೊದಲಿದ್ದ ಕುರುಚಲು ಕಾಡನ್ನು ಸ್ವಚ್ಛಗೊಳಿಸಿ ಸಾಲುಮರದ ತಿಮ್ಮಕ್ಕ ಪಾರ್ಕ್​ ನಿರ್ಮಿಸಿದೆ. ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಹಸಿರಿನಿಂದ ಪ್ರವಾಸಿಗರು ಮತ್ತು ಮಕ್ಕಳನ್ನು ಆಕರ್ಷಿಸುತ್ತಿದೆ. ಬಸ್​ ನಿಲ್ದಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಇನ್ನಷ್ಟು ಪ್ರವಾಸಿಗರು ಭೇಟಿ ನೀಡಿ ಶುದ್ಧ ಗಾಳಿ ಜೊತೆ ಸುಂದರ ಪರಿಸರವನ್ನು ಸವಿಯಬಹುದು.

Toys attracting gold;

ಜೋಕಾಲಿ, ಜಾರುಬಂಡಿ, ತಿರುಗುಣಿ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಪಕರಣಗಳು ಚಿಣ್ಣರನ್ನು ಆಕರ್ಷಿಸುತ್ತಿವೆ. ಈ ಉದ್ಯಾನವನದಲ್ಲಿ ಮಕ್ಕಳಿಗೆ ಆಟ ಆಡಲು ಇರುವ ವಿವಿಧ ಆಟೋಪಕರಣಗಳನ್ನೂ ಸಹ ಇಲ್ಲಿ ಸ್ಥಾಪಿಸಲಾಗಿದ್ದು, ಚಿಣ್ಣರನ್ನು ಸೆಳೆಯುತ್ತಿವೆ.

Description of wild animals and birds;

ಸಸ್ಯೋದ್ಯಾನದ ಪ್ರತಿ ದಾರಿಯಲ್ಲಿ ಅರಣ್ಯಪ್ರೇಮ ಸಾರುವ ಫಲಕಗಳನ್ನು ಹಾಕಲಾಗಿದೆ. ದಾರಿಗಳ ಇಕ್ಕೆಲಗಳಲ್ಲಿ ಕಾಡುಪ್ರಾಣಿ ಮತ್ತು ಪಕ್ಷಿಗಳ ಚಿತ್ರಗಳು ಸಹ ಇಲ್ಲಿವೆ. ಅಲ್ಲದೆ ಪ್ರಾಣಿಪಕ್ಷಿಗಳ ಕುರಿತ ವಿವರಣೆಯನ್ನು ಸಹ ಬರೆಯಲಾಗಿದೆ.

Scientific name and information of plants:

ಕೆಲವೊಂದು ಗಿಡಗಳ ವೈಜ್ಞಾನಿಕ ಹೆಸರು ಮತ್ತು ಅವುಗಳ ಮಹತ್ವವನ್ನು ಸಾರುವ ಫಲಕಗಳು ಪ್ರವಾಸಿಗರಲ್ಲಿ ಪರಿಸರಪ್ರೇಮ ಬೆಳೆಸುತ್ತವೆ.

People who come with family on holidays and weekends;

ದಿನನಿತ್ಯದ ಜಂಜಾಟ ಒತ್ತಡದ ಬದುಕಿನಲ್ಲಿ ರಿಲ್ಯಾಕ್ಸ್​ ಪಡೆಯಲು ಈ ಸ್ಥಳ ಹೇಳಿ ಮಾಡಿಸಿದಂತಿದೆ. ಈ ರೀತಿಯ ತಾಣಗಳಿಗೆ ಭೇಟಿ ನೀಡಿ ಪರಿಸರ ಸೌಂದರ್ಯ ಸವಿಯುವದು. ಕೆಲಕಾಲ ಒತ್ತಡ ಮರೆತು ಜೀವನಕ್ಕೆ ಮತ್ತೆ ಉತ್ಸಾಹ ತುಂಬುತ್ತದೆ ಎನ್ನುತ್ತಾರೆ ಪ್ರವಾಸಿಗರು. ಇಲ್ಲಿಯ ವಾತಾವರಣ ಕೆಲವರಿಗಂತೂ ಅಚ್ಚುಮೆಚ್ಚಾಗಿದ್ದು ಪ್ರತಿವಾರಕ್ಕೆ ಒಮ್ಮೆಯಾದರು ಈ ತಾಣಕ್ಕೆ ಭೇಟಿ ನೀಡುವುದಾಗಿ ತಿಳಿಸುತ್ತಾರೆ. ವಾರಾಂತ್ಯದ ದಿನಗಳು ಸೇರಿದಂತೆ ರಜಾ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಸಿರು ವಾತಾವರಣದಲ್ಲಿ ಅಲೆದಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಸಂಭ್ರಮಿಸುತ್ತಾರೆ. ಇನ್ನೂ ಕೆಲವರು ರೀಲ್ಸ್‌ಗಾಗಿ ವಿಡಿಯೋಗಳನ್ನು ಸೆರೆಹಿಡಿದು ಸಂಭ್ರಮಿಸುತ್ತಾರೆ. ಮನೆಯ ಸದಸ್ಯರೆಲ್ಲಾ ಬಂದು ಪರಿಸರದ ಸೌಂದರ್ಯ ಸವೆದು ಗುಂಪು ಭೋಜನ ಸವಿಯುತ್ತಾರೆ.

Bus stand, drinking water system is needed;

ಹಾವೇರಿಯಿಂದ ಕರ್ಜಗಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್‌ಗಳು ಇಲ್ಲಿ ನಿಲುಗಡೆಯಾದರೆ ಪ್ರವಾಸಿಗರ ಸಂಖ್ಯೆ ಅಧಿಕವಾಗಲಿದೆ. ಇನ್ನು ಉದ್ಯಾನವದಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲಾ. ಈ ಕೆಲವು ಇಲ್ಲಗಳನ್ನು ನಿವಾರಣೆ ಮಾಡಿಕೊಂಡರೆ ಕರ್ಜಗಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲಾ ಎನ್ನುತ್ತಾರೆ ಪರಿಸರಪ್ರೇಮಿಗಳು.ಈ ಉದ್ಯಾನವನಕ್ಕೆ ಬಸ್ ನಿಲ್ದಾಣವಿಲ್ಲಾ ಇಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಇಲ್ಲಾ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SHIVASENA SUPPORT TO BJP : ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

New Delhi News: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಔಪಚಾರಿಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಮಿತ್ರ ಪಕ್ಷ ಬಿಜೆಪಿಗೆ ಬೆಂಬಲ ನೀಡುವುದಾಗಿ SHIVASENA SUPPORT TO BJP...

SIGANDUR BRIDGE : ಅಂತಿಮ ಹಂತದಲ್ಲಿ ಸಿಗಂದೂರು ಸೇತುವೆ ಕಾಮಗಾರಿ, ಕೆಲವೇ ತಿಂಗಳಲ್ಲಿ ಲೋಕಾರ್ಪಣೆShimoga News: ಸಾಗರ ತಾಲೂಕಿನ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ...

Shivamogga News: ಸಾಗರ ತಾಲೂಕಿನ SIGANDUR BRIDGE ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ ಮೇ ನಲ್ಲಿ ಲೋಕಾರ್ಪಣೆಯಾಗಲಿದೆ. ಹೌದು ನಾಡಿಗೆ...

HOW TO AWARE OF CYBER FRAUD : ಹಾಗಿದ್ರೆ ಮಾತ್ರ ಸೈಬರ್ ವಂಚನೆಯಿಂದ ಬಚಾವ್ ಆಗಲು ಸಾಧ್ಯ

Hyderabad News: ನಿಜವೆಂದು ತೋರುವ ಈ ನಕಲಿ ವೆಬ್​​ಸೈಟ್​ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಬೇಕು, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಇಲ್ಲಿದೆ...

COFFEE EXPORTS : 1.29 ಶತಕೋಟಿ ಡಾಲರ್ಗೆ ತಲುಪಿದ ಭಾರತದ ಕಾಫಿ ರಫ್ತು

New Delhi News: ಭಾರತದ COFFEE ರಫ್ತು ದ್ವಿಗುಣಗೊಂಡಿದೆ. ಈ ಮೂಲಕ ದೇಶದ ರಫ್ತಿನ ಪ್ರಮಾಣ ಹೆಚ್ಚಿಸಲು ತನ್ನದೇ ಕೊಡುಗೆ ನೀಡಿದೆ.ಉತ್ತಮ ಗುಣಮಟ್ಟ ಮತ್ತು ಅನನ್ಯ...