Samsung Galaxy A06 5G News:
ಈ ಸುದ್ದಿ SAMSUNG ಪ್ರಿಯರಿಗೆ. Samsung Galaxy A06 ಅನ್ನು 5Gಗೆ ಅಪ್ಡೇಟ್ ಮಾಡಿ ಪರಿಚಯಿಸಿದೆ. ಇದರ ಬೆಲೆ ಮತ್ತು ಫೀಚರ್ಸ್ ವಿವರ ಇಲ್ಲಿದೆ.SAMSUNG ಇದನ್ನು ಆಕರ್ಷಕ ಕಲರ್ ಆಪ್ಷನ್ ಮತ್ತು ಸ್ಟೈಲೀಶ್ ಲುಕ್ನಲ್ಲಿ ವಿನ್ಯಾಸಗೊಳಿಸಿದೆ. ಕಳೆದ ವರ್ಷ ಇದೇ ಫೋನ್ ಅನ್ನು 4G ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ 5G ನೆಟ್‌ವರ್ಕ್ ಸಪೋರ್ಟ್ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ.
ಸ್ಯಾಮ್‌ಸಂಗ್ ಇನ್ನೂ ನಾಲ್ಕು ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್ಗಳನ್ನು ಪಡೆಯಲಿದೆ ಎಂದು ಹೇಳುತ್ತದೆ. SAMSUNG ಪ್ರಿಯರಿಗೆ ಗುಡ್ನ್ಯೂಸ್. ‘Samsung A06 5G’ ಸ್ಮಾರ್ಟ್‌ಫೋನ್ ಅನ್ನು ಅದ್ಭುತ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆ 10,499 ರೂ.ಯಿಂದ ಪ್ರಾರಂಭವಾಗುತ್ತದೆ.
Display:6.7-ಇಂಚಿನ HD+ ಡಿಸ್ಪ್ಲೇ. 90Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ.
Processor:RAM ಪ್ಲಸ್ ವೈಶಿಷ್ಟ್ಯದ ಮೂಲಕ RAM ಅನ್ನು 12GB ವರೆಗೆ ಹೆಚ್ಚಿಸಬಹುದು.ಡೈಮೆನ್ಸಿಟಿ 6300 ಚಿಪ್‌ಸೆಟ್.
Camera Setup: ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್ಗಾಗಿ ಫ್ರಂಟ್ನಲ್ಲಿ 8MP ಕ್ಯಾಮೆರಾವನ್ನು ನೀಡಿದೆ.ರಿಯರ್ನಲ್ಲಿ 50MP ಕ್ಯಾಮೆರಾ ಜೊತೆಗೆ 2MP ಕ್ಯಾಮೆರಾ ಡೆಪ್ತ್ ಸೆನ್ಸಾರ್ ಹೊಂದಿದೆ.
Powerful Battery:5000mAh ಬ್ಯಾಟರಿ ಹೊಂದಿದೆ. 25W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
Operating System: ನಾಲ್ಕು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್ಸ್ ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್ಡೇಟ್ಸ್ ಒದಗಿಸುವುದಾಗಿ ಕಂಪನಿ ಹೇಳುತ್ತದೆ.ಆಂಡ್ರಾಯ್ಡ್ 15 ಜೊತೆಗೆ OneUI 7ನೊಂದಿಗೆ ಬರುತ್ತದೆ.
Protection:ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ IP54 ರೇಟಿಂಗ್.
Color Option: ಈ ಫೋನ್ ಮಾರುಕಟ್ಟೆಯಲ್ಲಿ ಮೂರು ಕಲರ್ ಆಪ್ಷನ್ ಅಂದ್ರೆ ಬ್ಲ್ಯಾಕ್, ಗ್ರೇ ಮತ್ತು ಲೈಟ್ ಗ್ರೀನ್ನಲ್ಲಿ ಲಭ್ಯವಿದೆ.SAMSUNG ತನ್ನ ಫೋನ್ 12 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ ಎಂದು ಹೇಳುತ್ತದೆ
Sales Details:ನೀವು ರೂ. 129 ಪಾವತಿಸಿ SAMSUNG ಕೇರ್+ ಚಂದಾದಾರಿಕೆಯನ್ನು ಪಡೆದರೆ ಈ ಫೋನ್‌ಗೆ ಒಂದು ವರ್ಷದ ಸ್ಕ್ರೀನ್ ರೀಪ್ಲೇಸ್ ವಾರಂಟಿ ಸಿಗುತ್ತದೆ.ಈ ಫೋನ್ SAMSUNG ವಿಶೇಷ ಮಳಿಗೆಗಳು ಸೇರಿದಂತೆ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯ. ಆದರೂ ಈ ಬಾಕ್ಸ್ನಲ್ಲಿ ಟೈಪ್-ಸಿ ಕೇಬಲ್ ಅನ್ನು ಮಾತ್ರ ಇದೆ. ಇದರರ್ಥ ನೀವು ಚಾರ್ಜಿಂಗ್ ಅಡಾಪ್ಟರ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.
ಇದನ್ನು ಓದಿರಿ :Markets Open Lower Amid Uncertainty Over US Tariff Measures, Weak Asian Peers