Hyderabad News:
ಬಹುನಿರೀಕ್ಷಿತ SAMSUNG GALAXY S25ಸರಣಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳು ಇಲ್ಲಿವೆ.ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪನಿಯು ತನ್ನ ಲೇಟೆಸ್ಟ್ SAMSUNG GALAXY S25 ಸರಣಿಯನ್ನು ಬುಧವಾರ ಅದ್ಧೂರಿ ಕಾರ್ಯಕ್ರಮದ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. S-ಸರಣಿಯ ಮುಂದುವರೆದ ಭಾಗ ಇದಾಗಿದ್ದು, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.
ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೇಸರ್, 200MP ಕ್ಯಾಮರಾ ಮತ್ತು ವಿಶೇಷವಾಗಿ AI ಆಧಾರಿತ ಅನೇಕ ಜಬರದಸ್ತ್ ಫೀಚರ್ಗಳೊಂದಿಗೆ SAMSUNG GALAXY S25 (Samsung Galaxy S25), SAMSUNG GALAXY S25+ (Samsung Galaxy S25+) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದೆ.
ಸ್ಮಾರ್ಟ್‌ಫೋನ್ ಪ್ರಿಯರ ಕಾಯುವಿಕೆಗೆ ಸದ್ಯಕ್ಕೆ ಸ್ಟಾಪ್ ನೀಡಿದೆ.ಲೈನ್‌ಅಪ್ ಸರ್ಕಲ್ ಟು ಸರ್ಚ್, ಕಾಲ್ ಟ್ರಾನ್ಸ್‌ಕ್ರಿಪ್ಟ್‌ಗಳು, ಬರವಣಿಗೆ ಸಹಾಯ ಮತ್ತು ಹಿಂದೆ ಲಭ್ಯವಿರುವ ಇತರ AI ವೈಶಿಷ್ಟ್ಯಗಳಂತಹ ಇತರ AI-ಚಾಲಿತ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.
ಹಾಗಾದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು? ಇತರ ವೈಶಿಷ್ಟ್ಯಗಳೇನು? ಎಲ್ಲವನ್ನು ಈ ಕೆಳಗೆ ತಿಳಿದುಕೊಳ್ಳಬಹುದು.ಆಂಡ್ರಾಯ್ಡ್ 15 ಆಧಾರಿತ ಹಾಗೂ AI – ಸಂಯೋಜಿತದ ಜೊತೆಗೆ One UI 7 ವೈಶಿಷ್ಟ್ಯಗಳೊಂದಿಗೆ ರಿಫ್ರೆಶ್ ವಿನ್ಯಾಸವನ್ನು ಈ ಸ್ಮಾರ್ಟ್‌ಫೋನ್‌ಗಳು ಹೊಂದಿರಲಿವೆ. ಹೆಚ್ಚುವರಿಯಾಗಿ ಸ್ಯಾಮ್‌ಸಂಗ್ ವರ್ಧಿತ Bixby AI ಸಹಾಯಕದೊಂದಿಗೆ ಅನಾವರಣಗೊಂಡಿದ್ದು, ಈ ಸ್ಮಾರ್ಟ್‌ಫೋನ್‌ಗಳ ವಿಶೇಷ.
Price of these in Indian market: ಅದರ 12GB + 512GB ಸ್ಟೋರೇಜ್ ರೂಪಾಂತರದ ಬೆಲೆ 92,999 ರೂ.ಗಳಾಗಿದೆ. ಐಸಿಬ್ಲೂ, ಸಿಲ್ವರ್ ಶ್ಯಾಡೋ, ನೇವಿ ಮತ್ತು ಮಿಂಟ್ ಬಣ್ಣದ ಆಯ್ಕೆಗಳಲ್ಲಿ ನೀವು ಫೋನ್‌ಗಳನ್ನು ಖರೀದಿಸಬಹುದು. SAMSUNG GALAXY S25 ಬೆಲೆಯನ್ನು ನೋಡುವುದಾರೆ ಆರಂಭಿಕ ಫೋನ್ 12GB + 256GB ಸ್ಟೋರೇಜ್ ರೂಪಾಂತರಕ್ಕಾಗಿ ನೀವು 80,999 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
12GB + 256GB ಸ್ಟೋರೇಜ್ ಮೊಬೈಲ್ – 80,999 ರೂ.
12GB+512GB ಸ್ಟೋರೇಜ್ ಮೊಬೈಲ್ – 92,999 ರೂ.
ಇನ್ನು 12GB + 256GB ಸ್ಟೋರೇಜ್ ಹೊಂದಿರುವ SAMSUNG GALAXY S25+ ಫೋನ್ ಬೆಲೆ 99,999 ರೂ. ಆಗಿದೆ. 12GB + 512GB ಸ್ಟೋರೇಜ್ ಇರುವ ಮೊಬೈಲ್ಗೆ 1,29,999 ರೂ. ದರ ನಿಗದಿ ಮಾಡಲಾಗಿದೆ. ನೀವು SAMSUNG GALAXY S25+ ಅನ್ನು ನೇವಿ ಮತ್ತು ಸಿಲ್ವರ್ ಶ್ಯಾಡೋ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
12GB + 256GB ಸ್ಟೋರೇಜ್ ಮೊಬೈಲ್ – 99,999 ರೂ.
12GB + 512GB ಸ್ಟೋರೇಜ್ ಮೊಬೈಲ್ – 1,29,999 ರೂ.
12GB + 1TB ಸ್ಟೋರೇಜ್ ರೂಪಾಂತರದ ಬೆಲೆ 1,65,999 ರೂ.ಗಳಾಗಿವೆ. ಟೈಟಾನಿಯಂ ಸಿಲ್ವರ್ ಬ್ಲೂ, ಟೈಟಾನಿಯಂ ಗ್ರೇ, ಟೈಟಾನಿಯಂ ವೈಟ್‌ಸಿಲ್ವರ್ ಮತ್ತು ಟೈಟಾನಿಯಂ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.SAMSUNG GALAXY S25 ಅಲ್ಟ್ರಾ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆಯು 1,29,999 ರೂ.ಗಳಾಗಿದೆ. ಅದರ 12GB + 512GB ಸ್ಟೋರೇಜ್ ರೂಪಾಂತರದ ಬೆಲೆ 1,41,999 ರೂ.ಗಳಾಗಿವೆ.
12GB RAM ಮತ್ತು 256GB ಸ್ಟೋರೇಜ್ ಮೊಬೈಲ್ – 1,29,999 ರೂ.
12GB + 512GB ಸ್ಟೋರೇಜ್ ಮೊಬೈಲ್ – 1,41,999 ರೂ.
12GB + 1TB ಸ್ಟೋರೇಜ್ ಮೊಬೈಲ್ – 1,65,999 ರೂ.
Samsung Galaxy S25, Galaxy S25+ Specifications:
Display: SAMSUNG GALAXY S25+ ಮೊಬೈಲ್ ಸ್ವಲ್ಪ ದೊಡ್ಡದಾದ 6.7-ಇಂಚಿನ ಡೈನಾಮಿಕ್ AMOLED 2X ಸ್ಕ್ರೀನ್ ಹೊಂದಿದ್ದು ಸ್ಟ್ಯಾಂಡರ್ಡ್ ಮಾದರಿಯಂತೆಯೇ ಅದೇ ವಿಶೇಷಣಗಳೊಂದಿಗೆ ಹೊಂದಿದೆ.
SAMSUNG GALAXY S25 6.2-ಇಂಚಿನ ಪೂರ್ಣ HD+ ಡೈನಾಮಿಕ್ AMOLED 2X ಸ್ಕ್ರೀನ್ ಅನ್ನು ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 2,600nits ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ.
Processor: SAMSUNG GALAXY S25 ಮತ್ತು SAMSUNG GALAXY S25+ ಸ್ಮಾರ್ಟ್‌ಫೋನ್ ಇವರೆಡೂ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12GB ವರೆಗಿನ LPDDR5x RAM ಮತ್ತು 512GB ವರೆಗಿನ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.
Camera: 120 – ಡಿಗ್ರಿ ಫೀಲ್ಡ್ ಆಫ್ ವ್ಯೂ ಜೊತೆಗೆ 12MP ಅಲ್ಟ್ರಾವೈಡ್ ಕ್ಯಾಮರಾ, 3x ಆಪ್ಟಿಕಲ್ ಜೂಮ್ ಮತ್ತು OIS ಹೊಂದಿರುವ 10MP ಟೆಲಿಫೋಟೋ ಕ್ಯಾಮರಾ ಹೊಂದಿವೆ. ಎರಡೂ ಫೋನ್‌ಗಳು ಮುಂಭಾಗದಲ್ಲಿ 12MP ಸೆಲ್ಫಿ ಕ್ಯಾಮರಾವನ್ನು ಸಹ ಹೊಂದಿವೆ.
ವಿಷನ್ ಬೂಸ್ಟರ್ ಮತ್ತು ಅಡಾಪ್ಟಿವ್ ಕಲರ್ ಟೋನ್ ವೈಶಿಷ್ಟ್ಯಗಳೊಂದಿಗೆ ಈ ಸ್ಮಾರ್ಟ್‌ಫೋನ್ ಲಭ್ಯವಿದ್ದು, ಎರಡೂ 50MP ಪ್ರಾಥಮಿಕ ಕ್ಯಾಮರಾ ಜೊತೆಗೆ 2x ಇನ್-ಸೆನ್ಸರ್ ಜೂಮ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿವೆ.
Battery and Charging: ಸ್ಯಾಮ್‌ಸಂಗ್ ಗ್ಯಾಲಕ್ಸಿ S25 4,000mAh ಬ್ಯಾಟರಿಯನ್ನು ಹೊಂದಿದ್ದು, ಅದು 25W ವೈರ್ಡ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಪವರ್‌ಶೇರ್ ಅನ್ನು ಬೆಂಬಲಿಸುತ್ತದೆ. SAMSUNG GALAXY S25+ 4,900mAh ಬ್ಯಾಟರಿ ಹೊಂದಿದ್ದು, 45W ವೈರ್ಡ್ ಚಾರ್ಜಿಂಗ್ ಮತ್ತು ಅದೇ ವೈರ್‌ಲೆಸ್ ಚಾರ್ಜಿಂಗ್ ಮಾನದಂಡಗಳಿಗೆ ಬೆಂಬಲವನ್ನು ನೀಡುತ್ತದೆ.
Samsung Galaxy S25 Ultra Specifications: ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ 1Hz-120Hz ವೇರಿಯಬಲ್ ರಿಫ್ರೆಶ್ ದರದೊಂದಿಗೆ 6.9-ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ. 2,600nits ವರೆಗೆ ಗರಿಷ್ಠ ಹೊಳಪು ಮತ್ತು ಕಾರ್ನಿಂಗ್ ಗೊರಿಲ್ಲಾ ಆರ್ಮರ್ 2 ರಕ್ಷಣೆಯನ್ನು ಹೊಂದಿದೆ. S24 Ultra ನ 6.8-ಇಂಚಿನ ಪರದೆಗೆ ಹೋಲಿಸಿದರೆ ಸ್ವಲ್ಪ ದೊಡ್ಡದು.
Processor: SAMSUNG GALAXY S25 ಅಲ್ಟ್ರಾ ಪ್ರಬಲ Snapdragon 8 Elite ಚಿಪ್‌ಸೆಟ್‌ನೊಂದಿಗೆ ಬರುತ್ತದೆ. Android 15 ಆಧಾರಿತ One UI 7 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 12GB RAM ಮತ್ತು 1TB ವರೆಗೆ ಸ್ಟೋರೇಜ್ ಹೊಂದಿರುವುದು ವಿಶೇಷವಾಗಿದೆ.
Camera: 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ 50MP ಅಲ್ಟ್ರಾವೈಡ್ ಕ್ಯಾಮರಾ, 5x ಆಪ್ಟಿಕಲ್ ಜೂಮ್ ಮತ್ತು OIS ಹೊಂದಿರುವ 50MP ಟೆಲಿಫೋಟೋ ಕ್ಯಾಮರಾ ಮತ್ತು 3x ಆಪ್ಟಿಕಲ್ ಜೂಮ್ ಮತ್ತು OIS ಹೊಂದಿರುವ 10MP ಟೆಲಿಫೋಟೋ ಕ್ಯಾಮರಾದೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ.
ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 12MP ಕ್ಯಾಮರಾ ಸಂವೇದಕ ಒದಗಿಸಲಾಗಿದೆ.SAMSUNG GALAXY S25 ಅಲ್ಟ್ರಾ ಫೋನ್ ಅತ್ಯಂತ ಶಕ್ತಿಶಾಲಿ ಕ್ಯಾಮರಾ ಬೆಂಬಲದೊಂದಿಗೆ ಬರುತ್ತದೆ. ಇದು 2x ಇನ್-ಸೆನ್ಸರ್ ಜೂಮ್ ಮತ್ತು OIS ಹೊಂದಿರುವ 200MP ಪ್ರಾಥಮಿಕ ಕ್ಯಾಮರಾ ಹೊಂದಿದೆ.
Battery and Charging: SAMSUNG GALAXY S25 ಅಲ್ಟ್ರಾ ಫೋನ್ 45W ವೈರ್ಡ್ ಚಾರ್ಜಿಂಗ್ ಸಪೋರ್ಟ್ ಮಾಡುವುದರ ಜೊತೆಗೆ 5,000mAh ಬ್ಯಾಟರಿ ಹೊಂದಿರುತ್ತದೆ. ಇದು ಸಿಲಿಕಾನ್ ಕಾರ್ಬನ್ ಬ್ಯಾಟರಿ ಆಗಿರಲಿದೆ. 45W ವೇಗದ ಚಾರ್ಜಿಂಗ್ ತಂತ್ರಜ್ಞಾನದ ಜೊತೆಗೆ SAMSUNG GALAXY S25 ಮತ್ತು SAMSUNG GALAXY S25+ ನಂತೆ 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಪವರ್‌ಶೇರ್ ಸಹ ಬೆಂಬಲಿಸುತ್ತದೆ.
ಇದನ್ನು ಓದಿರಿ : PINK SALT BENEFITS FOR HEALTH : ಪಿಂಕ್ ಉಪ್ಪಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ