ಹಿಂದೂಳಿದ ವಿದ್ಯಾರ್ಥಿನಿಯರ ಹೈಯರ್ ಎಜುಕೇಷನ್ ಗೋಸ್ಕರ ಸಂತೂರ್ ಸ್ಕಾಲರ್‌ಶಿಪ್ ಅನ್ನು ವಿಪ್ರೊ ಕನ್ಸೂಮರ್ ಕೇರ್ ಅಂಡ್ ಲೈಟಿಂಗ್ ಸಹಯೋಗದಲ್ಲಿ ಈಗ 2024-25ನೇ ಸಾಲಿಗೆ ನೀಡಲಾಗುತ್ತಿದೆ. ಈ ವರ್ಷ 1500 ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್‌ಶಿಪ್ ಅನ್ನು ನೀಡಲು ಸಂತೂರ್ ಮುಂದಾಗಿದ್ದು, ಅರ್ಜಿಗೆ ಅಕ್ಟೋಬರ್ 15 ರವರೆಗೆ ಅವಕಾಶ ನೀಡಲಾಗಿದೆ.
ಅರ್ಹ ಆಸಕ್ತ ಸ್ನಾತಕ ಪದವಿ ಓದುತ್ತಿರುವ ವಿದ್ಯಾರ್ಥಿನಿಯರು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳಿಗೆ ಸೇರಿದ ಯುವತಿಯರಾಗಿರಬೇಕು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಛತ್ತೀಸಗಢ ನಾಲ್ಕು ರಾಜ್ಯದ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಹಾಕಬಹುದು. ಶಿಷ್ಯವೇತನಕ್ಕೆ 12ನೇ ತರಗತಿ (ಪಿಯುಸಿ) ಪೂರ್ಣಗೊಳಿಸಿ ನಂತರ ಉನ್ನತ ಶಿಕ್ಷಣ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದವರು ಅರ್ಜಿ ಹಾಕಬಹುದು. ಆಂಧ್ರ ಪ್ರದೇಶ, ಛತ್ತೀಸ್‌ಘಡ, ಕರ್ನಾಟಕ, ತೆಲಂಗಾಣ ರಾಜ್ಯದವರು ಅರ್ಹರಾಗಿರುತ್ತಾರೆ.
ವೆಬ್ ವಿಳಾಸ https://www.buddy4study.com/page/santoor-scholarship-programme ಕ್ಕೆ ಭೇಟಿ ನೀಡಿ. ತೆರೆದ ವೆಬ್‌ಪುಟದಲ್ಲಿ ಮೊದಲಿಗೆ ನೀವು ಸ್ಕಾಲರ್‌ಶಿಪ್ ಗೆ ಅರ್ಹತೆ, ಸೂಚನೆಗಳ ಕುರಿತು ಓದಿಕೊಳ್ಳಬಹುದು. ನಂತರ ಸ್ಕ್ರಾಲ್‌ಡೌನ್ ಮಾಡಿ. ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ. ಪಾಪಪ್ ವೆಬ್‌ಪೇಜ್ ತೆರೆಯಲಿದ್ದು, ಇಮೇಲ್, ಜಿಮೇಲ್, ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಷನ್ ಪಡೆಯಿರಿ. ನಂತರ ಸಂಪೂರ್ಣ ಅರ್ಜಿ ಸಲ್ಲಿಸಿ. ಕೇವಲ ಮೇಲೆ ತಿಳಿಸಲಾದ 4 ರಾಜ್ಯದ ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಸಬಹುದು.
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ಆಧಾರ್ ಕಾರ್ಡ್ ಇ-ಮೇಲ್ ವಿಳಾಸ ಬ್ಯಾಂಕ್ ಖಾತೆ ಸಂಖ್ಯೆ, ಪಾಸ್‌ಬುಕ್ ಕಾಪಿ ಮೊಬೈಲ್ ನಂಬರ್ ಇತರೆ ವೈಯಕ್ತಿಕ ಮಾಹಿತಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರತಕ್ಕದ್ದು. 2016-17 ರಲ್ಲಿ ಪ್ರಾರಂಭವಾದ ಸಂತೂರ್ ಶಿಷ್ಯವೇತನಗಳು ಬಾಲಕಿಯರಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಒದಗಿಸುತ್ತಿದೆ. ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ. ಇದು ದುರ್ಬಲ ವರ್ಗದ ಯುವತಿಯರಿಗೆ ಹೆಚ್ಚು ಅನುಕೂಲವಾಗಲಿದೆ . ಆನ್‌ಲೈನ್ ಹೊರತು ಇತರೆ ಯಾವುದೇ ಮಾದರಿಯಲ್ಲಿ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಆಗುವುದಿಲ್ಲ. ಈ ಸಾಲಿನಲ್ಲಿ ಸೌಲಭ್ಯ ಪಡೆಯಲಿರುವ ವಿದ್ಯಾರ್ಥಿನಿಯರ ಸಂಖ್ಯೆ 1,500. ಸಂತೂರ್ ಶಿಷ್ಯವೇತನ ಮೌಲ್ಯ ವಾರ್ಷಿಕ ರೂ.24,000. ಹೊಂದಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಇದೇ ಅಕ್ಟೋಬರ್ 15 ರಂದು ವೆಬ್‌ಸೈಟ್ ವಿಳಾಸ : https://www.santoorscholarships.com / https://www.buddy4study.com/page/santoor-scholarship-programme ಮುಖಾಂತರ ಅರ್ಜಿ ಸಲ್ಲಿಸಬಹುದು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now