Hubli News:
ಶ್ರೀರಾಮುಲು ವಂಡರ್ಫುಲ್ ಫ್ರೆಂಡ್. ನಾನು ರಾಮುಲು ಜೊತೆ ಮಾತನಾಡಿಲ್ಲ. ರಾಮುಲು ಕಾಂಗ್ರೆಸ್ಗೆ ಬಂದರೆ ವೈಯಕ್ತಿಕವಾಗಿ ಸ್ವಾಗತ ಕೊರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. SANTOSH LAD ON SRIRAMULU ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುವೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಇದೇ ವೇಳೆ ಪವಿತ್ರ ಸ್ನಾನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
As we have a double decker bus:
ನಗರದಲ್ಲಿಂದು ಮಾತನಾಡಿದ ಅವರು, ಶ್ರೀರಾಮುಲು ಮೋಸ್ಟ್ ಹಂಬಲ್ ಪರ್ಸನ್. ರಾಮುಲು ವಂಡರ್ಫುಲ್ ಫ್ರೆಂಡ್. ಕಾಂಗ್ರೆಸ್ ಪಕ್ಷಕ್ಕೆ ಬಂದರೆ ವೈಯಕ್ತಿಕವಾಗಿ ನಾನು ಅವರನ್ನು ಸ್ವಾಗತ ಮಾಡುವೆ. ಈ ಬಗ್ಗೆ ನನಗೆ ಯಾವುದೇ ಟಾಸ್ಕ್ ಕೊಟ್ಟಿಲ್ಲ. ನಮ್ಮ ಪಕ್ಷ ಡಬಲ್ ಡೆಕ್ಕರ್ ಬಸ್ ಇದ್ದಂತೆ. SANTOSH LAD ON SRIRAMULU ಯಾರಾದರೂ ಬರಬಹುದು, ಹೋಗಬಹುದು ಎಂದರು.
ಗಂಗಾ ಸ್ನಾನ ಮಾಡಿದ ತಕ್ಷಣ ಪಾಪ ಹೋಗಲ್ಲ. ಈ ದೇಶದ ಆರ್ಥಿಕ ವ್ಯವಸ್ಥೆ ಮೂಲೆಗುಂಪಾಗಿದೆ. ದೇಶದ ವ್ಯವಸ್ಥೆ ಹಾಳುಮಾಡಿರೋದು ಪಾಪ ಅಲ್ವಾ?. ಎರಡು ಲಕ್ಷ ಕಿರಾಣಿ ಅಂಗಡಿಗಳು ಮುಚ್ಚಿ ಹೋಗಿವೆ. ಇದನ್ನು ಯಾರಾದರೂ ಮಾತಾಡ್ತಾರಾ?. ಅದೆಷ್ಟೇ ತೀರ್ಥಸ್ನಾನ ಮಾಡಿದ್ರೂ ಪಾಪ ಮಾಫಿ ಆಗಲ್ಲ. ನಾನು ಕೂಡ ಓರ್ವ ಹಿಂದೂ. ಅಮಿತ್ ಶಾ, ಮೋದಿ ಪಾಪ ಎಲ್ಲಿ ಹೋದ್ರೂ ತೊಳೆಯೋಕೆ ಆಗಲ್ಲ. ಖರ್ಗೆ ಸಾಹೇಬರು ಹೇಳಿದ್ದು ಸರಿ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಲಾಡ್ ಸಮರ್ಥಿಸಿಕೊಂಡರು.
We Lokayukta believe:
ಕೇಂದ್ರ ಬಜೆಟ್ ಬಗ್ಗೆ ಯಾವುದೇ ನೀರಿಕ್ಷೆ ಇಲ್ಲ. ಎಲ್ಲ ಖಾಲಿ ಡಬ್ಬಾ. ಬರೋದು ಹಿಂದೂಗಳ ಬಗ್ಗೆ ಮಾತಾಡೋದು, ಹೋಗೋದು. ಇದನ್ನು ಬಿಟ್ರೆ ಬೇರೆ ಇಲ್ಲ. ಹಿಂದೂ-ಮುಸ್ಲಿಂ ಬಗ್ಗೆ ಹೇಳಿಕೆ ನೀಡುವುದನ್ನು ಬಿಟ್ರೆ ಏನು ಇಲ್ಲ. ಯಾವ ಹಿಂದೂಗಳಿಗೆ ಏನಾಗಿದೆ? ಅದರ ಡಿಟೇಲ್ಸ್ ಕೊಡ್ತಾರಾ?. ಜಿಡಿಪಿ ಬೆಳವಣಿಗೆ ಬಗ್ಗೆ ಸ್ಪಷ್ಟೀಕರಣ ಕೊಡ್ತಾರಾ?.
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ ಹಾಗಾಗಿದೆ ಬಿಜೆಪಿ ಸ್ಥಿತಿ. ಮೇಕ್ ಇನ್ ಇಂಡಿಯಾದಲ್ಲಿ ಏನಾಗಿದೆ?. ಏನೋ ಒಂದು ಹೇಳೋದು, ಹೋಗೋದು.SANTOSH LAD ON SRIRAMULU ಇದೇ ಇವರ ಕೆಲಸ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಪಾಲ್ಗೆ ಗೌರವ ಕೊಟ್ಟಂತೆ, ನಾವು ಲೋಕಾಯುಕ್ತ ಸಂಸ್ಥೆ ನಂಬುತ್ತೇವೆ.
ಹೊಸತನದ ರಾಜಕೀಯ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ವಾಟ್ಸ್ಆ್ಯಪ್ ಯೂನಿವರ್ಸಿಟಿಯೇ ಫೈನಲ್ ಅಲ್ಲ. ಯುವ ಜನತೆ ಅರ್ಥ ಮಾಡಕೊಬೇಕು. ದೇಶ ಬಿಜೆಪಿ – ಕಾಂಗ್ರೆಸ್ನವರ ಸ್ವತ್ತಲ್ಲ ಎಂದರು.
ಇದನ್ನು ಓದಿರಿ : ADHIPATRA TRAILER : ‘ಅಧಿಪತ್ರ’ ಚಿತ್ರದಲ್ಲಿ ಕಥೆಯೇ ಹೀರೋ