Samsung Screen Replacement Program: ಸ್ಕ್ರೀನ್ ಮೇಲೆ ಗ್ರೀನ್ ಲೈನ್ ಕುರಿತು ಸ್ಯಾಮ್‌ಸಂಗ್ ಇಂಡಿಯಾ ಪ್ರಮುಖ ನಿರ್ಧಾರ ಕೈಗೊಂಡಿದೆ. ತಮ್ಮ ಬಳಕೆದಾರರಿಗೆ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಅವಕಾಶ ಪಡೆಯುವ ಅವಧಿಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಿಸಿದೆ.
ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಅವಧಿಯನ್ನು ವಿಸ್ತರಿಸುವ ಮೂಲಕ ಸ್ಯಾಮ್‌ಸಂಗ್ ಕಂಪನಿಯು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಬಗ್ಗೆ ಸ್ಯಾಮ್‌ಸಂಗ್ ಇಂಡಿಯಾ ಪ್ರಕಟಣೆ ಮೂಲಕ ತಿಳಿಸಿದೆ. ಗ್ರೀನ್ ಲೈನ್ ಸಮಸ್ಯೆಯನ್ನು ಎದುರಿಸುತ್ತಿರುವ ಬಳಕೆದಾರರಿಗೆ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಪಡೆಯಲು ಇನ್ನೂ ಕೆಲವು ದಿನಗಳ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಸ್ಯಾಮ್‌ಸಂಗ್ ಬಳಕೆದಾರರು ಕೆಲವು ಸಮಯದಿಂದ ಗ್ರೀನ್ ಲೈನ್ ಸಮಸ್ಯೆವನ್ನು ಎದುರಿಸುತ್ತಿದ್ದಾರೆ ಎಂಬ ವರದಿಗಳಿವೆ. Galaxy S21 ಸೀರಿಸ್, Galaxy S21 FE, Galaxy S22 Ultra ನಂತಹ ಮೊಬೈಲ್‌ಗಳಲ್ಲಿ ಸಾಫ್ಟ್‌ವೇರ್ ಇನ್ಸ್ಟಾಲ್ ವೇಳೆ ಗ್ರೀನ್ ಲೈನ್ ಸಮಸ್ಯೆ ಬರುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬಗ್ಗೆ ಹಲವಾರು ಸ್ಯಾಮ್‌ಸಂಗ್ ಬಳಕೆದಾರರು ಸ್ಕ್ರೀನ್ ಮೇಲೆ ಗ್ರೀನ್ ಲೈನ್ ಮೂಡುತ್ತಿದೆ ಎಂದು ದೂರಿದ್ದಾರೆ.
ಸ್ಯಾಮ್‌ಸಂಗ್ ಬಳಕೆದಾರರು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಇದರ ಕುರಿತು ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸ್ಯಾಮ್‌ಸಂಗ್ ಕಂಪನಿಯು ಭಾರತದಲ್ಲಿನ ಬಳಕೆದಾರರಿಗೆ ಉಚಿತ ಒನ್-ಟೈಮ್ ಸ್ಕ್ರೀನ್ ರಿಪ್ಲೇಸ್ಮೆಂಟ್ ನೀಡಲು ನಿರ್ಧರಿಸಿತು. ಆ ಗಡುವು ಸೆಪ್ಟೆಂಬರ್ 30 ರಂದು ಕೊನೆಗೊಂಡಿದ್ದರೂ, ಕಂಪನಿಯು ಅದನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸುವುದಾಗಿ ಘೋಷಿಸಿತು.
ಈ ಸೇವೆಗಳನ್ನು ಪಡೆಯಲು ಹತ್ತಿರದ ಸ್ಯಾಮ್‌ಸಂಗ್ ಸೇವಾ ಕೇಂದ್ರವನ್ನು ಸಂಪರ್ಕಿಸಲು ಕಂಪನಿಯು ಸಲಹೆ ನೀಡುತ್ತದೆ. ಈ ಹಿಂದೆ OnePlus ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿತ್ತು. ಆಗ OnePlus ಕೂಡ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಕಾರ್ಯಕ್ರಮವನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಟೆಕ್ ದೈತ್ಯೆ ಆ್ಯಪಲ್ ಕೂಡ ಇತ್ತೀಚೆಗೆ ತನ್ನ ಜನಪ್ರಿಯ ಮಾಡೆಲ್ ‘ಐಫೋನ್ 14 ಪ್ಲಸ್’ನ ಹಿಂಬದಿಯ ಕ್ಯಾಮೆರಾವನ್ನು ಉಚಿತವಾಗಿ ರಿಪೇರಿ ಮಾಡುವುದಾಗಿ ಘೋಷಿಸಿತ್ತು.
ಈ ನಿಟ್ಟಿನಲ್ಲಿ ಸೇವಾ ಕಾರ್ಯಕ್ರಮವನ್ನೂ ಆರಂಭಿಸಲಾಗಿದೆ. ರಿಯರ್ ಕ್ಯಾಮರಾಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೊಳಗಾಗಿರುವ ಬಳಕೆದಾರರ ಐಫೋನ್ ಅನ್ನು ಯಾವುದೇ ಪೂರಕ ಶುಲ್ಕವನ್ನು ತೆಗೆದುಕೊಳ್ಳದೆ ದುರಸ್ತಿ ಮಾಡುವುದಾಗಿ ಘೋಷಿಸಿದೆ.
ಈ ಘೋಷಣೆಗೂ ಮುನ್ನ ದುರಸ್ತಿಗೆ ಒಳಗಾದವರೂ ರಿಪೇರಿ ಹಣ ವಾಪಸ್ ನೀಡುವುದಾಗಿಯೂ ಹೇಳಲಾಗಿದೆ.