Amaravati (Andhra Pradesh) NEWS :
ಇಲ್ಲೊಂದಿಷ್ಟು ಹಿರಿಯ ನಾಗರಿಕರು ವಯಸ್ಸು 80 ದಾಟಿದರೂ ನದಿ, ಕೊಳಗಳನ್ನು ಸಲೀಸಾಗಿ SWIMMING ದಾಟುತ್ತಿದ್ದಾರೆ. ತಮ್ಮ ಫಿಟ್‌ನೆಸ್ ಬದ್ಧತೆಯಿಂದ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ವಯಸ್ಸು 60 ದಾಟಿದರೆ ಚಲನಶೀಲತೆ ಕಡಿಮೆಯಾಗಿ, ಕೈ, ಕಾಲು, ಮಂಡಿ ನೋವು ಎನ್ನುವವರೇ ಹೆಚ್ಚು. ಆದರೆ ಕೆಲವು ಹಿರಿಯ ನಾಗರಿಕರು ವಯಸ್ಸು ಕೇವಲ ಸಂಖ್ಯೆಯಷ್ಟೇ ಎನ್ನುವುದನ್ನು ಸಾಬೀತುಪಡಿಸುತ್ತಾರೆ.
ವಿಜಯವಾಡ ಬಳಿಯ ಉಂಡವಳ್ಳಿಯಲ್ಲಿರುವ ಅಕ್ವಾ ಡೆವಿಲ್ಸ್ ಕ್ಲಬ್ನಲ್ಲಿ ಮಹಿಳೆಯರೂ ಸೇರಿದಂತೆ 80 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 10 ಈಜುಗಾರರು ನಿಯಮಿತವಾಗಿ ತರಬೇತಿ ಪಡೆಯುತ್ತಾರೆ. ಇಂದಿನ ಯುವಕರಿಗೆ ಇವರು ಹೇಳುವ ಮಾತು, “ನೀವು ಎಷ್ಟೇ ಸಂಪತ್ತು ಸಂಪಾದಿಸಿದರೂ, ಉತ್ತಮ ಆರೋಗ್ಯವಿಲ್ಲದಿದ್ದರೆ ಅವೆಲ್ಲ ಅರ್ಥಹೀನ”.
ಈ ಮೊದಲ ಸೈಕ್ಲಿಂಗ್ ಮಾಡುತ್ತಿದ್ದ ಎಂಎಲ್ಆರ್ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ 80 ವರ್ಷದ ಮರಿ ಲಕ್ಷ್ಮ ರೆಡ್ಡಿ ಕಾಲು ನೋವು ಪ್ರಾರಂಭವಾದ ನಂತರ ಈಜುವುದನ್ನು ಪ್ರಾರಂಭಿಸಿದರು. ಸೈಕ್ಲಿಂಗ್ ಮಾಡುತ್ತಿದ್ದಾಗ 2015ರಲ್ಲಿ ಬಿಎಸ್ಎಫ್ ಜೊತೆಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಸೈಕಲ್ ಸವಾರಿ ಮಾಡಿದ್ದರು.
ತಮ್ಮ 75ನೇ ವಯಸ್ಸಿನಲ್ಲಿ ಈಜಲು ಪ್ರಾರಂಭಿಸಿದ ಇವರು ಅಂದಿನಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಕೃಷ್ಣಾ ನದಿಯನ್ನು SWIMMING ದಾಟಿದ್ದಾರೆ. “ನನ್ನ ವಿದ್ಯಾರ್ಥಿಗಳಿಗೆ ನಾನು ಸ್ಫೂರ್ತಿಯಾಗಲು ಬಯಸುತ್ತೇನೆ” ಎನ್ನುತ್ತಾರೆ ಮರಿ ಲಕ್ಷ್ಮ ರೆಡ್ಡಿ. ಕಳೆದ ಜನವರಿಯಲ್ಲಿ ನಡೆದ ಕೃಷ್ಣಾ ನದಿ ದಾಟುವ ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ನನಗೆ ಖಚಿತತೆ ಇರಲಿಲ್ಲ, ಆದರೆ ನನ್ನ ಸ್ನೇಹಿತರು ನನ್ನನ್ನು ಪ್ರೋತ್ಸಾಹಿಸಿದರು. ಆ ಸ್ಪರ್ಧೆಯನ್ನು ನಾನು 40 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ.
ಇಲ್ಲಿಯವರೆಗೆ ನಾನು ಈಜುವುದರಲ್ಲಿ ಸುಮಾರು 30 ಪದಕಗಳನ್ನು ಗೆದ್ದಿದ್ದೇನೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ನಾನು 40 ನಿಮಿಷಗಳ ಕಾಲ ಈಜುತ್ತೇನೆ. ಯೋಗ ಮಾಡುತ್ತೇನೆ, ನಡೆಯುತ್ತೇನೆ. ನಾನು ಯಾವಾಗಲೂ ನನ್ನ ಕಾಲೇಜು ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತೇನೆ” ಎಂದು ಹೇಳಿದರು.
From back pain to swimming 2 km in the sea:
ವಿಜಯವಾಡದ ಮುತ್ಯಾಲಂಪಡುವಿನ ವೆಂಕಟೇಶ್ವರ ರಾಜು ಅವರು ತಮ್ಮ 88ನೇ ವಯಸ್ಸಿನಲ್ಲಿ ಈಜುವುದನ್ನು ಜೀವನವಿಧಾನವನ್ನಾಗಿ ಮಾಡಿಕೊಂಡಿದ್ದಾರೆ.
“1984 ರಲ್ಲಿ, ನಾನು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದೆ, ಆಗ ವೈದ್ಯರು ಈಜು ಅಳವಡಿಸಿಕೊಳ್ಳುವಂತೆ ಸೂಚಿಸಿದರು. ನಾನು ಕೃಷ್ಣಾ ನದಿಯಲ್ಲಿ ಈಜಲು ಪ್ರಾರಂಭಿಸಿದೆ, ಮತ್ತು ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಯಿತು. ಅಂದಿನಿಂದ, ನಾನು ಕೃಷ್ಣಾ ನದಿಯನ್ನು ಮೂರು ಬಾರಿ ದಾಟಿದ್ದೇನೆ.
ಒಮ್ಮೆ ಗೋದಾವರಿ, ಮತ್ತು ವಾರಾಣಸಿಯ ಗಂಗಾ ನದಿಯಲ್ಲಿ ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಈಜಿದ್ದೇನೆ. ನನ್ನ ಮುಂದಿನ ದೊಡ್ಡ ಸವಾಲು ಬಾಪಟ್ಲಾ ಬಳಿ ಸಮುದ್ರದಲ್ಲಿ 2 ಕಿ.ಮೀ ಈಜುವುದು. ಇಂದಿಗೂ, ನಾನು ಪ್ರತಿದಿನ ಬೆಳಗ್ಗೆ ಕೃಷ್ಣಾ ನದಿಯಲ್ಲಿ ಒಂದು ಗಂಟೆ ಈಜುತ್ತೇನೆ” ಎಂದು ಅವರು ಹೇಳುತ್ತಾರೆ.
ಫಿಟ್‌ನೆಸ್ ಮತ್ತು ಉತ್ಸಾಹದ ವಿಷಯಕ್ಕೆ ಬಂದಾಗ ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಈ ಅಸಾಧಾರಣ ಹಿರಿಯರೇ ಸಾಕ್ಷಿ. ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು ಎನ್ನುವ ಹಿರಿಯ ನಾಗರಿಕರ ಈಜು, ಸೈಕ್ಲಿಂಗ್ ಮತ್ತು ವ್ಯಾಯಾಮಕ್ಕಿರುವ ಸಮರ್ಪಣೆ ಯುವ ಪೀಳಿಗೆಗೆ ಸ್ಫೂರ್ತಿಯೇ ಸರಿ.
9 ಬಾರಿ ಕೃಷ್ಣಾ ನದಿ ದಾಟಿದ ಈಜುಗಾರ :
1988ರಿಂದ ಇಲ್ಲಿಯವೆರೆಗೆ ತಮ್ಮ 87ನೇ ವಯಸ್ಸಿನಲ್ಲಿ ವಿಜಯವಾಡದ ಪೊಟ್ಲೂರಿ ಜನಾರ್ದನ ಮೂರ್ತಿ ಅವರು ಒಂಬತ್ತು ಬಾರಿ ಕೃಷ್ಣಾ ನದಿಯನ್ನು ಈಜಿ ದಾಟಿದ್ದಾರೆ. ಆರಂಭದಲ್ಲಿ ಆರೋಗ್ಯದ ದೃಷ್ಟಿಯಿಂದ ಈಜುವುದನ್ನು ಪ್ರಾರಂಭಿಸಿದರು. ಆದರೆ ಈಗ ಅದನ್ನು ಕ್ರೀಡೆಯಾಗಿ ಸ್ವೀಕರಿಸಿ, ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
“ನನಗೆ ವೈದ್ಯರು ಅಥವಾ ಔಷಧಗಳಿಗೆ ಅವಲಂಬಿತವಾಗದೆ ಜೀವನ ನಡೆಸಬೇಕು ಎನ್ನುವ ಆಸೆಯಿತ್ತು. ಅದಕ್ಕಾಗಿ ನಾನು ಪ್ರತಿದಿನ ಬೆಳಗ್ಗೆ ಅಕ್ವಾ ಕ್ಲಬ್ನಲ್ಲಿ ಸ್ವಲ್ಪ ಹೊತ್ತು ಜಿಮ್ ಸೆಷನ್ ಮಾಡುತ್ತೇನೆ. ನಂತರ ಒಂದು ಗಂಟೆ ಈಜುತ್ತೇನೆ. ಮೊದಲಿಗೆ ನನಗೆ ಇದೆಲ್ಲದರ ಬಗ್ಗೆ ಭಯವಿತ್ತು. ಆದರೆ ನನ್ನ ಪತ್ನಿ ಹಾಗೂ ಇತರರು ನನ್ನನ್ನು ಪ್ರೋತ್ಸಾಹಿಸಿದರು. ನಾಲ್ಕು ತಿಂಗಳೊಳಗೆ ನಾನು ಈಜು ಕಲಿತು ಸ್ಪರ್ಧೆಯಲ್ಲೂ ಭಾಗವಹಿಸಿದೆ. ಸ್ಪರ್ಧೆಗಳಿಗೆ ಅಲ್ಲದಿದ್ದರೂ, ನನ್ನ ಆರೋಗ್ಯಕ್ಕಾಗಿ ನಾನು ಈಜುವುದನ್ನು ಮುಂದುವರಿಸುತ್ತೇನೆ. ರಾಷ್ಟ್ರೀಯ ಮಟ್ಟದ ಈವೆಂಟ್ಗಳಲ್ಲೂ ನಾನು ಭಾಗವಹಿಸಿದ್ದು, ಪದಕಗಳನ್ನೂ ಮುಡಿಗೇರಿಸಿಕೊಂಡಿದ್ದೇನೆ.” ಎಂದು ಹೇಳಿತ್ತಾರೆ ಪೊಟ್ಲೂರಿ ಜನಾರ್ದನ ಮೂರ್ತಿ.