WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Agra (Uttar Pradesh) News :
ಉಚಿತ ಅಷ್ಟೇ ಅಲ್ಲ, ಪ್ರವಾಸಿಗರು ಚಕ್ರವರ್ತಿ ಷಹಜಹಾನ್ ಮತ್ತು ಬೇಗಂ ಮುಮ್ತಾಜ್ ಅವರ ನಿಜವಾದ ಸಮಾಧಿಗಳನ್ನು ವೀಕ್ಷಿಸಬಹುದಾಗಿದೆ.ಜನವರಿ 26, 27 ಮತ್ತು 28 ರಂದು SHAH JAHANನ ಉರುಸ್ ನಡೆಯಲಿರುವುದರಿಂದ ಈ ವೇಳೆ ಪ್ರವಾಸಿಗರಿಗೆ ತಾಜ್ ಮಹಲ್‌ಗೆ ಉಚಿತ ಪ್ರವೇಶವಿರುತ್ತದೆ.
Third Day Open to All:ಹೂವು ಮತ್ತು ಹಿಂದೂಸ್ತಾನಿ ಬಣ್ಣದ ಬೆಡ್ಶೀಟ್ಗಳನ್ನ ಸಹ ಅಲ್ಲಿ ಹಾಕಲಾಗುತ್ತದೆ. ಉರುಸ್ನ ಮೊದಲ ಮತ್ತು ಎರಡನೇ ದಿನದಂದು, ಮಧ್ಯಾಹ್ನದಿಂದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಉಚಿತ ಪ್ರವೇಶವಿದ್ದರೆ, ಮೂರನೇ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತಾಜ್ ಮಹಲ್‌ಗೆ ಎಲ್ಲರೂ ಮುಕ್ತವಾಗಿ ಪ್ರವೇಶಿಸಬಹುದು.ತಾಜ್ ಮಹಲ್‌ನಲ್ಲಿ ಉರುಸ್ ಆಚರಿಸುವುದನ್ನು ಹಿಂದೂ ಮುಖಂಡರು ವಿರೋಧಿಸುತ್ತಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಚಕ್ರವರ್ತಿ SHAH JAHAN ಉರುಸ್ ಆಚರಣೆ ಸಮಿತಿ, ತಾಜ್ ಸೆಕ್ಯುರಿಟಿ ಪೊಲೀಸ್ ಮತ್ತು ಸಿಐಎಸ್‌ಎಫ್‌ನ ಅಧಿಕಾರಿಗಳು ಸಭೆ ನಡೆಸಿ ಅಲ್ಲಿ ಭದ್ರತೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಷಹಜಹಾನ್‌ರ 3 – ದಿನದ 370ನೇ ಉರುಸ್ ಜನವರಿ 26 ರಿಂದ ಪ್ರಾರಂಭವಾಗುತ್ತದೆ. ತಾಜ್ ಮಹಲ್‌ನ ನೆಲಮಾಳಿಗೆಯಲ್ಲಿರುವ ಮೊಘಲ್ ಚಕ್ರವರ್ತಿ ಷಹಜಹಾನ್ ಮತ್ತು ಅವರ ಪತ್ನಿ ಮುಮ್ತಾಜ್ ಅವರ ನಿಜವಾದ ಸಮಾಧಿಯಲ್ಲಿ ಉರುಸ್ ಆಚರಣೆಗಳು ನಡೆಯುತ್ತವೆ.