spot_img
spot_img

SHAHRUKH KHAN FAN BOY : ತಂದೆ ವಿರುದ್ಧ ನಟ ಶಾರೂಖ್ಗೆ ದೂರು ನೀಡಲು ಮನೆಬಿಟ್ಟು ಬಂದ ಬಾಲಕ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bhopal (Madhya Pradesh) News :

ತಿಳಿವಳಿಕೆ ಇಲ್ಲದ ಮಕ್ಕಳು ಮಾಡುವ ಅವಾಂತರ ಒಂದೆರಡಲ್ಲ. ಇದು ಕೆಲವೊಮ್ಮೆ ಭಾರೀ ಅನಾಹುತಕ್ಕೂ ಕಾರಣವಾಗುತ್ತದೆ. ಇಲ್ಲೊಬ್ಬ ಬಾಲಕನ ಸಿನಿಮಾ ಹುಚ್ಚು ಪೋಷಕರಲ್ಲಿ ದಿಗ್ಭ್ರಮೆ ಮೂಡಿಸಿದೆ.ಇದನ್ನು ಪ್ರಶ್ನಿಸಿದವರನ್ನು ಆ ಮಕ್ಕಳು ಶತ್ರುಗಳಂತೆ ಕಾಣುತ್ತಾರೆ.

ಇಂಥದ್ದೇ ಒಂದು ಪ್ರಕರಣ ಮಧ್ಯಪ್ರದೇಶದಿಂದ ವರದಿಯಾಗಿದೆ.ಸಿನಿಮಾಗಳಲ್ಲಿನ ಸಾಹಸ ದೃಶ್ಯಗಳು ಮಕ್ಕಳ ಮೇಲೆ ಗಾಢ ಪರಿಣಾಮ ಬೀರುತ್ತವೆ. ತೆರೆಯ ಮೇಲೆ ನಾಯಕ ನಟ ಮಾಡಿದಂತೆ ತಾನೂ ಮಾಡಬೇಕು ಎಂದು ಇಲ್ಲಸಲ್ಲದ ಸ್ಟಂಟ್​ ಮಾಡುತ್ತಿರುತ್ತಾರೆ.ಇದರಿಂದ ಕುಪಿತನಾಗಿ ಅಪ್ಪನ ವಿರುದ್ಧ SHAHRUKH KHAN​ಗೆ ದೂರು ನೀಡಲು ಏಕಾಏಕಿ ಮನೆಬಿಟ್ಟು ಉತ್ತರಪ್ರದೇಶದಿಂದ ಮುಂಬೈ ರೈಲು ಹತ್ತಿ ಬಂದಿದ್ದಾನೆ.

ಸದ್ಯ ಬಾಲಕನನ್ನು ಭೋಪಾಲ್‌ನ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.ಬಾಲಿವುಡ್​ ನಟ SHAHRUKH KHAN​ ಅವರ ಸಿನಿಮಾಗಳನ್ನು ನೋಡಿ ಪ್ರೇರೇಪಿತನಾಗಿದ್ದ 11 ವರ್ಷದ ಬಾಲಕ, ತಾನೂ ಅಂತಹ ಸ್ಟಂಟ್​​ಗಳನ್ನು ಮಾಡಲು ಹೋಗಿ ತಂದೆಯಿಂದ ಬೈಸಿಕೊಂಡು ಪೆಟ್ಟು ತಿಂದಿದ್ದ.

A true fan of Shah Rukh: ಜೊತೆಗೆ ನಟನ 40 ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದ್ದಾನಂತೆ. ಜವಾನ್​ ಸಿನಿಮಾದಲ್ಲಿ SHAHRUKH KHAN​ ಯೋಧನ ಪಾತ್ರದಲ್ಲಿ ಮಾಡಿರುವ ಸಾಹಸಗಳು ಬಾಲಕನ ತಲೆಕೆಡಿಸಿವೆ. ಆತ ಯಾವಾಗಲೂ ಅದೇ ಮಾದರಿಯ ಸಾಹಸ ಪ್ರದರ್ಶನ ಮಾಡುತ್ತಿದ್ದನಂತೆ.

ಉತ್ತರಪ್ರದೇಶದ 11 ವರ್ಷದ ಬಾಲಕ ನಟ SHAHRUKH KHAN​ ಅಪ್ಪಟ ಅಭಿಮಾನಿ. ಜವಾನ್​ ಸಿನಿಮಾದಲ್ಲಿನ ಸಾಹಸಗಳಿಗೆ ಮನಸೋತಿದ್ದ. ಹೀಗೆ ಮಾಡಲು ಹೋಗಿ ಹಲವು ಬಾರಿ ಪೆಟ್ಟು ಮಾಡಿಕೊಂಡಿದ್ದಾನೆ. ಮಗನ ಹುಚ್ಚಾಟಕ್ಕೆ ತಂದೆ ಬೈದಿದ್ದಾನೆ. ಇಷ್ಟಾದರೂ ಸುಮ್ಮನಾಗದ ಬಾಲಕ ಅಪಾಯಕಾರಿ ಸಾಹಸದಿಂದ ದೂರವಾಗಿರಲಿಲ್ಲ. ಈ ಬಗ್ಗೆ ನೆರೆಹೊರೆಯವರು ದೂರು ನೀಡಿದಾಗ, ಕೋಪಗೊಂಡ ತಂದೆ ಬಾಲಕನಿಗೆ ಹೊಡೆದಿದ್ದಾನೆ.

Shahrukh came to complain against his father: ಉತ್ತರಪ್ರದೇಶದಿಂದ ಮುಂಬೈಗೆ ಹೊರಡುವ ರೈಲು ಹತ್ತಿದ್ದಾನೆ. ರೈಲು ಮಧ್ಯಪ್ರದೇಶದ ಸಂತ ಹಿರ್ದಾರಾಂ ನಗರ ರೈಲ್ವೆ ನಿಲ್ದಾಣಕ್ಕೆ ಬಂದಾಗ ರೈಲ್ವೆ ಪೊಲೀಸರು ಒಂಟಿ ಮಗುವನ್ನು ಗಮನಿಸಿದ್ದಾರೆ.ತನ್ನನ್ನು ಹೊಡೆದ ತಂದೆಯ ವಿರುದ್ಧ ಆ ಬಾಲಕ ತೀವ್ರ ಅಸಮಾಧಾನಗೊಂಡಿದ್ದಾನೆ. ನಟ SHAHRUKH KHAN​​ಗೆ ಈ ಬಗ್ಗೆ ದೂರು ನೀಡಿ ಅಪ್ಪನಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿ, ಹೇಳದೆ ಕೇಳದೆ ಮನೆ ಬಿಟ್ಟು ಬಂದಿದ್ದಾನೆ.

ಬಾಲಕನ್ನು ವಿಚಾರಿಸಿದಾಗ ಆತ, SHAHRUKH KHAN​ ಭೇಟಿಯಾಗಲು ಮುಂಬೈಗೆ ತೆರಳುತ್ತಿರುವುದಾಗಿ ಹೇಳಿದ್ದಾನೆ. ತನ್ನನ್ನು ತಂದೆ ಹೊಡೆದಿದ್ದು, ಈ ಬಗ್ಗೆ ದೂರು ನೀಡಬೇಕಿದೆ ಎಂದಿದ್ದಾನೆ. ಮಗುವನ್ನು ವಶಕ್ಕೆ ಪಡೆದ ಪೊಲೀಸರು, ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮನೆಬಿಟ್ಟು ಬಂದ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ.ಟಿಕೆಟ್​ ಇಲ್ಲದೇ ಪಯಣಿಸುತ್ತಿದ್ದಾಗ ರೈಲ್ವೆ ಪೊಲೀಸರು ವಿಚಾರಿಸಿದ್ದಾರೆ.

ಸಿನಿಮಾದಲ್ಲಿ SHAHRUKH KHAN​ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವಂತೆ ತನ್ನನ್ನು ಹೊಡೆದ ತಂದೆಗೂ ಬುದ್ಧಿ ಕಲಿಸಬೇಕೆಂದು ಮಗು ಬಯಸಿತ್ತು” ಎಂದು ಹೇಳಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಗಳು, “ಮಗು ಸಿನಿಮಾಗಳಿಂದ ಪ್ರಭಾವಿತನಾಗಿದೆ. ತಂದೆ ಹೊಡೆದ ಕಾರಣ ಕೋಪಗೊಂಡು SHAHRUKH KHAN​ಗೆ ದೂರು ನೀಡಲು ರೈಲು ಹತ್ತಿ ಮುಂಬೈನತ್ತ ಹೊರಟಿದ್ದಾನೆ.\

ಇದನ್ನು ಓದಿರಿ : DR RAVI PATIL : ಲಕ್ಷ್ಮೀ ಹೆಬ್ಬಾಳ್ಕರ್ರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಅವಶ್ಯಕತೆಯಿಲ್ಲ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...