Belgaum News:
ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದಲ್ಲಿ ಪ್ರತಿಷ್ಠಾಪಿಸಿರುವ ಮಹಾತ್ಮ ಗಾಂಧಿ ಕಂಚಿನ ಪುತ್ಥಳಿ ಉದ್ಘಾಟನೆ ಸಮಾರಂಭಕ್ಕೆ ವ್ಹೀಲ್ ಚೇರ್ ಮೇಲೆ ಆಗಮಿಸಿದ್ದ ಶಾಂತಾಬಾಯಿ ಸುಬ್ಬರಾವ್ ವೆರ್ಣೇಕರ್ ಅವರ ಉತ್ಸಾಹಕ್ಕೆ ಪಾರವೇ ಇರಲಿಲ್ಲ. SHANTABAI VERNEKAR ಅವರ ತಂದೆಯವರದ್ದು ಅಂಕೋಲಾ ತಾಲೂಕಿನ ಅಗರಗೋಣ ಗ್ರಾಮ. ಸದ್ಯ ಅವರೀಗ ಗದಗ ನಗರದಲ್ಲಿ ಮಗನ ಜೊತೆಗೆ ವಾಸವಾಗಿದ್ದಾರೆ.
ಮಾತನಾಡಿದ ಅಜ್ಜಿ, ”ನನಗೆ ಆಗ 12-13 ವರ್ಷ ವಯಸ್ಸು. ಆಗ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶಾದ್ಯಂತ ಹಬ್ಬಿತ್ತು. ಅದರ ಬಿಸಿ ನಮ್ಮೂರಿಗೂ ತಟ್ಟಿತ್ತು. ಉಪ್ಪಿನ ಸತ್ಯಾಗ್ರಹಕ್ಕೆ ಖುದ್ದು ಗಾಂಧೀಜಿ ಆಗಮಿಸಿದ್ದರು. ನಮ್ಮೂರಿಗೆ ಬಂದವರು ನಮ್ಮ ಮನೆಗೂ ಬಂದಿದ್ದರು. SHANTABAI VERNEKAR ಅವರ ಆಗಮನದಿಂದ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. SHANTABAI VERNEKAR ಆಗ ಗಾಂಧೀಜಿ ಅವರಿಗೆ ಅನ್ನ, ಸಾರು, ನಾನಾ ಬಗೆಯ ಪಲ್ಯ ಸೇರಿ ವಿವಿಧ ತಿನಿಸುಗಳನ್ನು ನನ್ನ ಕೈಯಾರೆ ಮಾಡಿಕೊಟ್ಟಿದ್ದೆ. ಅವರು ಪ್ರೀತಿಯಿಂದ ನಮ್ಮ ಆತಿಥ್ಯ ಸ್ವೀಕರಿಸಿದ್ದರು” ಎಂದು ಸ್ಮರಿಸಿದರು.
ಆ ಅಜ್ಜಿ ಉಪ್ಪಿನ ಸತ್ಯಾಗ್ರಹಕ್ಕೆ ಬಂದಿದ್ದ ಮಹಾತ್ಮ ಗಾಂಧೀಜಿಗೆ ಅಡುಗೆ ಮಾಡಿಕೊಟ್ಟಿದ್ದರು. ಈಗ ಅವರಿಗೆ 105 ವರ್ಷ ವಯಸ್ಸು. ಉದಯ ವೆರ್ಣೇಕರ್ ಮಾತನಾಡಿ, ”ನಮ್ಮ ತಾಯಿಗೆ ನಾನು ಹತ್ತನೇ ಮತ್ತು ಕೊನೆಯ ಮಗ. ನಮ್ಮ ತಾಯಿ ಗಾಂಧೀಜಿ ಅವರಿಗೆ ಅಡುಗೆ ಮಾಡಿ ಕೊಟ್ಟಿದ್ದರು. ಇದು ನಮ್ಮ ಕುಟುಂಬಕ್ಕೆ ದೊಡ್ಡ ಹೆಮ್ಮೆ. ನಮ್ಮ ತಾಯಿಯವರ ಚಿಕ್ಕಮ್ಮನ ಇಬ್ಬರು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನಗೈದಿದ್ದರು. ಈ ವಿಚಾರವನ್ನು ನಮ್ಮ ತಾಯಿಯವರು ಈಗಲೂ ನೆನೆದು ಕಣ್ಣೀರು ಹಾಕುತ್ತಾರೆ. ಅಲ್ಲದೇ ಯಾವುದೇ ಫಲಾಪೇಕ್ಷೆ ಬಯಸದೆ ನಮ್ಮ ತಾಯಿ ಸೇವೆ ಸಲ್ಲಿಸಿದ್ದರು. ಸರ್ಕಾರದಿಂದ ಯಾವುದೇ ಸೌಲಭ್ಯವನ್ನು ನಾವು ಪಡೆದಿಲ್ಲ” ಎಂದರು.
”ಮೂರು ದಿನ ನಮ್ಮ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಗಾಂಧೀಜಿ ಅವರಿಗೆ ಊಟೋಪಚಾರದ ಜೊತೆಗೆ ಸ್ನಾನಕ್ಕೆ ಬಿಸಿನೀರು ಕಾಯಿಸಿ ಕೊಟ್ಟಿದ್ದೆ. ನಮ್ಮ ಅಣ್ಣನ ಮಕ್ಕಳು ನನಗೆ ಸಹಾಯ ಮಾಡಿದ್ದರು. ಈಗ ಬೆಳಗಾವಿಯಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಕ್ಕೆ ನನಗೆ ಆಹ್ವಾನಿಸಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ” ಎಂದು ಅಜ್ಜಿ ಹರ್ಷ ವ್ಯಕ್ತಪಡಿಸಿದರು.
More than hundred freedom fighters participated:
ಮಹಾತ್ಮ ಗಾಂಧಿ ಪುತ್ಥಳಿ ಉದ್ಘಾಟನೆಗೆ ನಾಡಿನ ಮೂಲೆ ಮೂಲೆಗಳಿಂದ ನೂರಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರು ಇಳಿ ವಯಸ್ಸನ್ನೂ ಲೆಕ್ಕಿಸದೇ ಆಗಮಿಸಿದ್ದು ವಿಶೇಷವಾಗಿತ್ತು.