ಶಿವಮೊಗ್ಗ : ವಿಮಾನ ನಿಲ್ದಾಣದ ಪರವಾನಗಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇನ್ನೊಂದು ತಿಂಗಳು ವಿಸ್ತರಣೆ ಮಾಡಿದೆ.ನಿಲ್ದಾಣದಲ್ಲಿ ಕೆಲವು ಮೂಲಸೌಲಭ್ಯಗಳ ಕೊರತೆ ಇರುವುದನ್ನು ಮನಗಂಡ ಡಿಜಿಸಿಎ ಸೆ.23 ರ ವರೆಗೆ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿತ್ತು. ಅದನ್ನು ಮತ್ತೆ ವಿಸ್ತರಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ‘ಡಿಜಿಸಿಎ ಒಂದು ತಿಂಗಳ ಕಾಲಾವಕಾಶ ನೀಡಿದೆ. ಅಷ್ಟರೊಳಗೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ’ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ‘ಡಿಜಿಸಿಎ ಒಂದು ತಿಂಗಳ ಕಾಲಾವಕಾಶ ನೀಡಿದೆ. ಅಷ್ಟರೊಳಗೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ’ ಎಂದು ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸಂಸ್ಥೆ ಎರಡು ನಗರಗಳಿಗೆ ಸಂಪರ್ಕ ಕಲ್ಪಿಸುವುದು ದೃಢಪಟ್ಟಿದ್ದು, 20 ದಿನ ಮೊದಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು ಚೆನೈ ಮತ್ತು ಹೈದರಾಬಾದ್ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುತ್ತಿದೆ. ಹೊಸ ವಿಮಾನದ ಸಂಚಾರವು ಅಕ್ಟೋಬರ್ 10ರಿಂದ ಆರಂಭವಾಗುತ್ತಿದೆ. ಒಂದೇ ವಿಮಾನವು ಎರಡೂ ನಗರಗಳಿಗೆ ಸಂಪರ್ಕ ಒದಗಿಸುತ್ತದೆ.
ಸ್ಪೈಸ್‌ಜೆಟ್ ವಿಮಾನವು ಬೆಳಗ್ಗೆ 10.40ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 12.10 ಕ್ಕೆ ಶಿವಮೊಗ್ಗಕ್ಕೆ ಬರುತ್ತದೆ. ಬಳಿಕ 12.35ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.05ಕ್ಕೆ ಹೈದರಾಬಾದ್ ತಲುಪುತ್ತದೆ. ಮತ್ತೆ ಹೈದರಾಬಾದ್‌ನಿಂದ 2.40ಕ್ಕೆ ಹೊರಟು ಸಂಜೆ 4ಗಂಟೆಗೆ ಶಿವಮೊಗ್ಗ ತಲುಪುತ್ತದೆ. ಸಂಜೆ 4.25ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 7.55ಕ್ಕೆ ಚೆನ್ನೈ ತಲುಪುತ್ತದೆ.
ಈಗಾಗಲೆ ಶಿವಮೊಗ್ಗ-ಬೆಂಗಳೂರು ನಡುವೆ ಇಂಡಿಗೋ ವಿಮಾನ, ಹೈದರಾಬಾದ್, ತಿರುಪತಿ ಮತ್ತು ಗೋವಾ ನಡುವೆ ಸ್ಟಾರ್ ಏರ್ ವಿಮಾನಗಳು ಸಂಚರಿಸುತ್ತಿವೆ. ಮುಂದಿನ ಹಂತದಲ್ಲಿ ಮುಂಬಯಿ ಮತ್ತು ಹೊಸದಿಲ್ಲಿಗೂ ವಿಮಾನ ಯಾನ ಸೌಲಭ್ಯ ಏರ್ಪಡುವ ಸಾಧ್ಯತೆ ಇದೆ.