Jabalpur (Madhya Pradesh) NEWS:
ಮಧ್ಯಪ್ರದೇಶದ ಜಬಲ್ಪುರದ ಚಿಲ್ಲರೆ ಮಾರುಕಟ್ಟೆಯಲ್ಲಿ 5 ರೂಪಾಯಿಯ ನಾಣ್ಯಗಳು ಕಣ್ಮರೆಯಾಗುತ್ತಿವೆ ಎಂದು ವರದಿಯಾಗಿದೆ.
5 ರೂ. ನಾಣ್ಯಗಳ ಕೊರತೆ ಇರುವುದನ್ನು ತಿಳಿದ ಮಧ್ಯವರ್ತಿಗಳು, ಅವುಗಳನ್ನು ಸಂಗ್ರಹಿಸಿ ಬ್ಲಾಕ್ನಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಂದ 5 ರೂಪಾಯಿಯ ನಾಣ್ಯಗಳ ಪೂರೈಕೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಬ್ಯಾಂಕ್ ಅಧಿಕಾರಿಗಳೇ ಒಪ್ಪಿಕೊಂಡಿದ್ದಾದರೂ ಕಾರಣ ಏನಿರಬಹುದೆಂದು ಹುಡುಕಿದರೆ ಇದರ ಹಿಂದಿರುವ ಅಸಲಿ ಕಥೆಯೇ ಬೇರೆ ಇದೆ.
“5 ರೂಪಾಯಿಯ ನಾಣ್ಯಗಳು ಕಣ್ಮರೆಯಾಗುತ್ತಿರುವುದಕ್ಕೆ ಸಣ್ಣ ಸಣ್ಣ ವ್ಯಾಪಾರಿಗಳಲ್ಲಿ ಅಸಮಾಧಾನ ತರಿಸಿದೆ. 5 ರೂ. ನಾಣ್ಯಗಳ ಬದಲಿಗೆ 1 ಮತ್ತು 2 ರೂ.ಗಳ ನಾಣ್ಯಗಳನ್ನು ನೀಡಲಾಗುತ್ತಿದೆ. ಆದರೆ, ಈ ನಾಣ್ಯಗಳನ್ನು ಸ್ವೀಕರಿಸಲು ಕೆಲವು ಗ್ರಾಹಕರು ಹಿಂಜರಿಯುತ್ತಿದ್ದಾರೆ. ನಾವು ಏನೂ ಮಾಡದ ಪರಿಸ್ಥಿಯಲ್ಲಿದ್ದೇವೆ. ಸಂಬಂಧಪಟ್ಟವರು ನಮ್ಮ ಸಮಸ್ಯೆಗಳತ್ತ ಗಮನ ನೀಡಬೇಕು” ಎಂದು ಜಬಲ್ಪುರದ ಹಾಲಿನ ವ್ಯಾಪಾರಿ ಸಾವಿತ್ರಿ ಗಂಗ್ವಾನ್ ಎಂಬುವರು ಮನವಿ ಮಾಡಿಕೊಂಡಿದ್ದಾರೆ.
ಸಾವಿತ್ರಿ ಅವರ ವ್ಯವಹಾರವು ಹೆಚ್ಚಾಗಿ ಚಿಲ್ಲರೆ ಹಣದ ಮೇಲೆ ಅವಲಂಬನೆ ಇರುವುದರಿಂದ ತಲೆದೂರಿರುವ 5 ರೂ. ನಾಣ್ಯಗಳ ಸಮಸ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಗ್ರಾಹಕರು 1 ಅಥವಾ 2 ರೂ. ನಾಣ್ಯಗಳ ರೂಪದಲ್ಲಿ 5 ರೂ. ಸ್ವೀಕರಿಸುತ್ತಿಲ್ಲ. 5 ರೂ. ನಾಣ್ಯದ ಕೊರತೆಯಿಂದ ಸಾಕಷ್ಟು ಸಮಸ್ಯೆ ಎದುರಿಸಲಾಗುತ್ತಿದೆ. 5 ರೂ. ನಾಣ್ಯಗಳನ್ನು ನೀಡುವಂತೆ ನಾನು ಸ್ಥಳೀಯ ಬ್ಯಾಂಕ್ನ ಮೊರೆ ಹೋಗಿದ್ದೆ. ಆದರೆ, ಅವರೂ ಸಹ ಅಸಹಾಯಕತೆ ವ್ಯಕ್ತಪಡಿಸಿದರು. ತಲೆದೂರಿರುವ ಸಮಸ್ಯೆ ಕಂಡು ಕೆಲವರು ಹೆಚ್ಚುವರಿ (ಶೇ.5ರಿಂದ 10ರಷ್ಟು) ಹಣಕ್ಕೆ 5 ರೂ. ನಾಣ್ಯ ನೀಡುತ್ತಿದ್ದಾರೆ. ಈ ಪರಿಸ್ಥಿತಿ ಇನ್ನಷ್ಟು ಹದಗೆಡಿಸುತ್ತಿದೆ ಎಂದು” ಸಾವಿತ್ರಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ, ಔಷಧಿ ಅಂಗಡಿ ನಡೆಸುತ್ತಿರುವ ಗೌತಮ್ ಸಿಂಘೈ ಎಂಬುವರು ಮಾತನಾಡಿ, “ಗ್ರಾಹಕರಿಗೆ 5 ರೂ. ಚಿಲ್ಲರೆ ಇಲ್ಲದೆ ಚಾಕೊಲೇಟ್ ನೀಡಲಾಗುತ್ತಿದೆ. ಈ ಕೊರತೆಯ ಲಾಭ ಪಡೆದು, ದಲ್ಲಾಳಿಗಳು 5 ರೂ. ನಾಣ್ಯಗಳನ್ನು ಶೇ.5ರಿಂದ 10ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಏನೂ ಮಾಡಲಾಗದೆ, ನಮ್ಮಂತಹ ಕೆಲವು ಸಣ್ಣ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ನಾಣ್ಯಗಳನ್ನು ಖರೀದಿಸುಂತಾಗಿದೆ. ಈ ನಾಣ್ಯಗಳನ್ನು ಕರಗಿಸಿ ಬ್ಲೇಡ್‌ಗಳನ್ನಾಗಿ ಮಾಡಲಾಗುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದು, ಇದರಿಂದ ಕೆಲವರು ಹೆಚ್ಚಿನ ಹಣ ಗಳಿಸುತ್ತಿದೆ ಎನ್ನಲಾಗುತ್ತಿದೆ. ಬ್ಲೇಡ್‌ಗಳನ್ನು ಉತ್ಪಾದಿಸಲು ಈ ನಾಣ್ಯಗಳನ್ನು ಉಪಯುಕ್ತ. ಹಾಗಾಗಿ 5 ರೂ. ನಾಣ್ಯಗಳ ಸಮಸ್ಯೆ ಉದ್ಭವಿಸಿರಬಹುದು. ಅಂತಹ ತಯಾರಿಕೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಬ್ಯಾಂಕುಗಳಿಗೆ ಕಾಲಕಾಲಕ್ಕೆ ಕರೆನ್ಸಿಗಳನ್ನು ಪೂರೈಸುವಾಗ ಮಾರುಕಟ್ಟೆಯಲ್ಲಿ ಎಷ್ಟು ಹಣ ಚಲಾವಣೆಯಾಗಬೇಕು ಎಂಬುದನ್ನು ನಿರ್ಧರಿಸುವುದು ಆರ್‌ಬಿಐ. ಹಲವು ದಿನಗಳಿಂದ ಆರ್‌ಬಿಐ ಈ ನಾಣ್ಯಗಳನ್ನು ಪೂರೈಸಿಲ್ಲ ಎಂಬುದು ನಿಜ. ದೀಪಾವಳಿ ವೇಳೆ ಜಬಲ್ಪುರಕ್ಕೆ 5 ರೂಪಾಯಿ ನಾಣ್ಯಗಳು ಬಂದಿದ್ದವು. ಆ ಬಳಿಕ ಪೂರೈಕೆ ಆದ ಮಾಹಿತಿ ಇಲ್ಲ. ಆದ್ದರಿಂದ, ಮಾರುಕಟ್ಟೆಯಲ್ಲಿ 5 ರೂ. ನಾಣ್ಯಗಳು ಕಡಿಮೆ ಇವೆ. ಕಡಿಮೆ ಪೂರೈಕೆಯೇ ಇದಕ್ಕೆ ಪ್ರಮುಖ ಕಾರಣ” ಎಂದು ಎಸ್‌ಬಿಐ ವ್ಯವಸ್ಥಾಪಕರು ಹೇಳಿದ್ದಾರೆ.
Reasons for the shortage:
ರಿಸರ್ವ್ ಬ್ಯಾಂಕಿನಿಂದ 5 ರೂ. ನಾಣ್ಯಗಳು ಪೂರೈಕೆಯಾಗದ ಕಾರಣ ಈ ಕೊರತೆ ಕಂಡು ಬರುತ್ತಿದೆ. ಇದರ ಜೊತೆಗೆ, 5 ರೂ. ನಾಣ್ಯಗಳನ್ನು ಬ್ಲೇಡ್‌ಗಳನ್ನು ತಯಾರಿಸಲು ಬಳಸಲಾಗುತ್ತಿದೆ ಎಂದು ಸ್ಥಳೀಯರೇ ಹೇಳುತ್ತಿದ್ದಾರೆ. ಒಂದೇ ನಾಣ್ಯದ ಲೋಹದಿಂದ ಐದು ಬ್ಲೇಡ್‌ಗಳನ್ನು ತಯಾರಿಸಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಕೆಲವು ವಿಡಿಯೋಗಳು ವೈರಲ್ ಆಗಿವೆ ಎಂದು ಸ್ಥಳೀಯರು ಹೇಳುತ್ತಾರೆ. ನಾಣ್ಯಗಳನ್ನು ಖರೀದಿಸಿ ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಇದೊಂದು ಲಾಭದಾಯಕ ದಂಧೆ ಆಗಿ ಪರಿವರ್ತನೆಯಾಗಿದೆ. ಹಾಗಾಗಿ 5 ರೂ. ನಾಣ್ಯಗಳ ಸಮಸ್ಯೆ ತಲೆದೂರಿದೆ ಎನ್ನಲಾಗುತ್ತಿದೆ.
ಜಬಲ್ಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕರೊಬ್ಬರು ನಾಣ್ಯಗಳ ಕೊರತೆ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ್ದು, ಹಲವು ದಿನಗಳಿಂದ ಆರ್‌ಬಿಐನಿಂದ ನಾಣ್ಯಗಳ ಪೂರೈಕೆ ಆಗುತ್ತಿಲ್ಲ. ದೀಪಾವಳಿಗೂ ಮುನ್ನ ಜಬಲ್ಪುರಕ್ಕೆ 5 ರೂ. ನಾಣ್ಯಗಳು ಬಂದಿದ್ದು ಕೊನೆಯದಾಗಿದೆ. ಪೂರೈಕೆ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಕೊರತೆ ಕಂಡು ಬರುತ್ತಿದೆ. ಬ್ಲಾಕ್ನಲ್ಲಿ ಹೆಚ್ಚಿನ ಬೆಲೆಗೆ 5 ರೂ. ನಾಣ್ಯಗಳನ್ನು ನೀಡುವುದು ಹಾಗೂ ಇತರ ಉದ್ದೇಶಗಳಿಗಾಗಿ ಈ ನಾಣ್ಯಗಳನ್ನು ಕರಗಿಸುವುದು ಎರಡೂ ಕಾನೂನುಬಾಹಿರ. ಅಂತಹ ಪ್ರಕರಣಗಳು ಕಂಡು ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Bullets Manufactured In US, Serbia Recovered From Top Jharkhand TSPC Naxalite