ದೆಹಲಿ: ಪೆನ್ಡ್ರೈವ್ ಹಂಚಿದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡರನ್ನು ಪಕ್ಕದಲ್ಲಿ ಕುರಿಸಿಕೊಳ್ಳುತ್ತಾರೆ . ನಮ್ಮ ಕುಟುಂಬಕ್ಕೆ ವಿಷ ಹಾಕಿದವನನ್ನ ನಾವು ಬೆಂಬಲಿಸ ಬೇಕಾ ಎಂದು ಕೇಂದ್ರ ಸಚಿವ H.D.ಕುಮಾರಣ್ಣ ಪ್ರಶ್ನಿಸಿ ಗರಂ ಆಗಿದ್ದಾರೆ .
ದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ತೀರ್ಮಾನದಿಂದ ಮನಸ್ಸಿಗೆ ಬೇಸರವಾಗಿದೆ . ಪ್ರೀತಂಗೌಡ ಯಾರು ಎಂದು ಪ್ರಶ್ನಿಸಿದರು.ಇವನು ಹಾಸನದಲ್ಲಿ ನಮ್ಮ ಕುಟುಂಬವನ್ನು ಸರ್ವನಾಶ ಮಾಡಲಿಕ್ಕೆ ಹೊರಟವನು ಇವನು ಇವನ ಬಗ್ಗೆ ಗೊತ್ತಿಲ್ವ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಪಾದಯಾತ್ರೆಗೆ ನಮ್ಮ ನೇರಾ ನೇರ ಬೆಂಬಲ ಇಲ್ಲ
ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿಚಾರ ಕುರಿತು ಬಿಜೆಪಿ ನಾಯಕರ ವಿರುದ್ಧವೇ ಕೇಂದ್ರ ಸಚಿವ ಕುಮಾರಣ್ಣ ಅಸಮಾಧಾನಗೊಂಡಿದ್ದಾರೆ . ದೆಹಲಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದವರಿಗೆ ಬೆಂಬಲ ಕೊಡಲ್ಲ. ಬಿಜೆಪಿಯ ಪಾದಯಾತ್ರೆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡು ಮಾಡುತ್ತಿದ್ದಾರೆ . ಬಿಜೆಪಿ ಪಾದಯಾತ್ರೆಗೆ ನಮ್ಮ ನೈತಿಕ ಬೆಂಬಲವೂ ಇಲ್ಲ ಎಂದು ಜಂಟಿ ಪಾದಯಾತ್ರೆಯ ವಿರುದ್ಧ ಕುಮಾರಣ್ಣ ಗರಂ ಆಗಿದ್ದಾರೆ.