ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವದಿಲ್ಲಾ, ತಪ್ಪು ಮಾಡಿದ್ರೆ ತಾನೇ ಹೆದರಬೇಕು . ನಾನು ತಪ್ಪೇ ಮಾಡಿಲ್ಲ ಮತ್ಯಾಕೆ ಹೆದರಬೇಕು ಎಂದು ರಾಜ್ಯಪಾಲರ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂರ ಆದರು.
ರಾಜ್ಯಪಾಲರಿಂದ C M ಗೆ ನೋಟೀಸ್ ;
ಮೈಸೂರು ; ರಾಜ್ಯಪಾಲರ ಶೋಕಾಸ್ ನೋಟೀಸ್ ಕುರಿತು ಮೈಸೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು,ರಾಜ್ಯಪಾಲರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ . ಚುನಾಯಿತ ಸರ್ಕಾರದ ಮುಖ್ಯಮಂತ್ರಿಯಾದ ನನ್ನ ಮೇಲೆ ಏಕಾಏಕಿ ನೋಟೀಸ್ ನೀಡಿದ್ದಾರೆ. 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರೋನು ನಾನು, ನನಗೆ ನೋಟೀಸ್ ನೀಡುವ ಮುನ್ನ ಎಲ್ಲಾ ಕಾನೂನನ್ನು ಕೂಲಂಕುಶವಾಗಿ ನೋಡದೆ ನೋಟೀಸ್ನೀಡಿ ಸರ್ಕಾರ ಅಸ್ಥಿರ ಗೊಳಿಸೋದಕ್ಕೆ ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.
C M ಮೇಲೆ ರಾಜ್ಯಪಾಲರ ಆತುರವೇಕೆ ?
ದೂರು ಬಂದ ದಿನವೇ ಆತುರವಾಗಿ ಶೋಕಾಸ್ ನೀಡಿದ್ದಾರೆ. ಅವರ ಪಕ್ಷದವರೇ ಆದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ್ ರೆಡ್ಡಿ ಮೇಲೆ ದೂರುಗಳಿವೆ. ವರ್ಷಗಟ್ಟಲೇ ಸುಮ್ಮನಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ . ಇದರರ್ಥ ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.ಜನರಿಂದ ಆಯ್ಕೆಯಾದ ಸರ್ಕಾರವನ್ನು ದುರ್ಬಲ ಮಾಡಲು ಹೊರಟಿದೆ. ಇದು ಸಂವಿಧಾನವನ್ನು ಕೊಲೆ ಮಾಡುವ ಉದ್ದೇಶ, ಪ್ರಜಾಪ್ರಭುತ್ವವನ್ನು ನಾಶ ಮಾಡುವ ಕೆಲಸ ಎಂದು ನೇರವಾಗಿ ರಾಜ್ಯಪಾಲರ ಮತ್ತು ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿದರು.
ಇದರಲ್ಲಿ ನನ್ನ ಪಾತ್ರ ಏನು ಇಲ್ಲಾ ,ನಾನೇನೂ ಮಾಡಿಲ್ಲಾ ಆದರೂ ನನ್ನ ಮೇಲೆ ಶೋಕಾಸ್ ನೋಟೀಸ್ ನೀಡಿದ್ದಾರೆ. ರಾಜ್ಯಪಾಲರು ಸಂಪೂರ್ಣವಾಗಿ ಕೆಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಜ್ಯಪಾಲರ ವಿರುದ್ಧ ಆರೋಪ ಮಾಡಿದರು.