spot_img

SIMPLE ONE GEN NEW ELECTRIC SCOOTER: ಕಡಿಮೆ ಬೆಲೆ, ಹೆಚ್ಚು ಫೀಚರ್ಸ್

spot_img
spot_img

Share post:

Simple One GM 1.5 Electric Scooter Launched News:

ಇದು ಸಿಂಪಲ್ ಒನ್‌ನ ಅಪ್​ಡೇಟ್​ ವರ್ಷನ್​ ಜೊತೆಗೆ ಬಂದ ಫ್ಲ್ಯಾಗ್​ಶೀಪ್​ ಸ್ಕೂಟರ್​ ಆಗಿದೆ. ಸಿಂಪಲ್ ಎನರ್ಜಿ ಇದನ್ನು ಹೊಸ ಸಾಫ್ಟ್‌ವೇರ್ ಮತ್ತು ಹೊಸ ಡಿಸೈನ್​ನೊಂದಿಗೆ ರಚಿಸಿದೆ. ಅಷ್ಟೇ ಅಲ್ಲ, ಮೇಡ್​ ಇನ್​ ಇಂಡಿಯಾ ELECTRIC ಟೂ-ವೀಲರ್ಸ್​ ನೀಡುವ ವಾಹನಗಳಲ್ಲಿ ಅತ್ಯಧಿಕ ರೇಂಜ್​ನಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.ಬೆಂಗಳೂರು ಮೂಲದ ELECTRIC ವಾಹನ ಸ್ಟಾರ್ಟ್ಅಪ್ ಕಂಪೆನಿ ಸಿಂಪಲ್ ಎನರ್ಜಿ ಹೊಸ ELECTRIC ಸ್ಕೂಟರ್ ಬಿಡುಗಡೆ ಮಾಡಿದೆ.

Simple One Gen 1.5 Launch:ಹೊಸ ಸ್ಕೂಟರ್‌ನ ಹೆಸರು ‘ಒನ್ ಜೆನ್ 1.5’. ಇದನ್ನು 248 ಕಿ.ಮೀ ಮೈಲೇಜ್​ ರೇಂಜ್​ನಲ್ಲಿ ಪರಿಚಯಿಸಲಾಗಿದೆ. ಹಿಂದಿನ ಮಾದರಿಗಿಂತ 36 ಕಿ.ಮೀ. ಹೆಚ್ಚು ಮೈಲೇಜ್​ ನೀಡುತ್ತದೆ. ಮೇಡ್ ಇನ್ ಇಂಡಿಯಾ ELECTRIC ಟೂ-ವೀಲರ್​ ನೀಡುವ ವಾಹನಗಳಲ್ಲಿ ಅತ್ಯುನ್ನತ ಶ್ರೇಣಿಯಾಗಿದೆ. ಆದರೆ, ಹಿಂದಿನ ಮಾದರಿಯಾದ ‘ಸಿಂಪಲ್ ಒನ್ ಜೆನ್ 1’ ಸ್ಕೂಟರ್‌ನಲ್ಲಿ 212 ಕಿ.ಮೀ. ರೇಂಜ್​ ನೀಡುತ್ತದೆ.

Features: ‘ಸಿಂಪಲ್ ಒನ್ ಜೆನ್ 1.5’ ಸ್ಕೂಟರ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳಿವೆ. ಬ್ಲೂಟೂತ್, ಕಾಲ್​, ಎಸ್​ಎಮ್​ಎಸ್​ ಮತ್ತು ವಾಟ್ಸ್‌ಆ್ಯಪ್​ ನೋಟಿಫಿಕೇಶನ್​ ಒದಗಿಸುವ ಆ್ಯಪ್​ ಇಂಟಿಗ್ರೇಷನ್​ ಜೊತೆ ನ್ಯಾವಿಗೇಷನ್, OTA ಅಪ್​ಡೇಟ್ಸ್​, ಆಟೋ ಬ್ರೈಟ್​ನೆಸ್​, ಟೈರ್‌ಪ್ರೆಶರ್​ ಮಾನಿಟರಿಂಗ್​ ಸಿಸ್ಟಮ್​ (TPMS), ಹೊಸ ರೈಡ್ ಮೋಡ್ಸ್​, ಪಾರ್ಕ್ ಅಸಿಸ್ಟಂಟ್​ ಫೀಚರ್​, ಫೈಂಡ್​ ಮೈ ವೆಹಿಕಲ್​ ಫೀಚರ್ಸ್​, ರೀಜನರೆಟಿವ್​ ಬ್ರೇಕಿಂಗ್, ರ್ಯಾಪಿಡ್​​ ಬ್ರೇಕ್, ಡ್ಯಾಶ್ ಥೀಮ್, ಟ್ರಿಪ್ ಹಿಸ್ಟರಿ ಮತ್ತು ಸ್ಟಾಟಿಸ್ಟಿಕ್ಸ್​, USB ಚಾರ್ಜಿಂಗ್ ಪೋರ್ಟ್ ಮತ್ತು ಸೌಂಡ್​ನಂತಹ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Powertrain: ಅಂದರೆ, ಸೀಟಿನ ಕೆಳಗಿರುವ ಮುಕ್ತ ಸ್ಥಳ. ಆದ್ದರಿಂದ ಇದನ್ನು ಅತ್ಯುತ್ತಮ ಬೂಟ್‌ಸ್ಪೇಸ್ ELECTRIC ಸ್ಕೂಟರ್ ಎಂದು ಕರೆಯುತ್ತದೆ.ಸಿಂಪಲ್ ಒನ್ ಜೆನ್ 1.5′ ELECTRIC ಸ್ಕೂಟರ್ ಮೋಟಾರ್ 8.5kW ಪವರ್ ಮತ್ತು 72Nm ಟಾರ್ಕ್ ಉತ್ಪಾದಿಸುತ್ತದೆ. ಸ್ಕೂಟರ್ ಕೇವಲ 2.77 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 40 ಕಿ.ಮೀ. ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ. 30 ಲೀಟರ್‌ಗಳಿಗಿಂತ ಹೆಚ್ಚು ಬೂಟ್‌ಸ್ಪೇಸ್ ಹೊಂದಿದೆ.

Battery Pack:ಇವುಗಳ ಜೊತೆಗೆ, ಸ್ಕೂಟರ್ 7 ಇಂಚಿನ ಡಿಜಿಟಲ್ ಡಿಸ್​ಪ್ಲೇ ಮತ್ತು LED ಲೈಟಿಂಗ್ ಅನ್ನು ಸಹ ಹೊಂದಿದೆ.ಸ್ಕೂಟರ್‌ನಲ್ಲಿ ಒದಗಿಸಲಾದ ಬ್ಯಾಟರಿ ಸೆಟಪ್‌ನಲ್ಲಿ ಫಿಕ್ಸ್ಡ್​ 3.7kWh ಬ್ಯಾಟರಿ ಪ್ಯಾಕ್ ಮತ್ತು 1.2kWh ರಿಮೂವ್​ಬಲ್​ ಬ್ಯಾಟರಿ ಒದಗಿಸಿದೆ. ಆದರೂ ಸ್ಕೂಟರ್‌ನ ಮೈಲೇಜ್​ ರೇಂಜ್​ ಹೆಚ್ಚಿಸಲು, ಬಳಕೆದಾರರು ಈ ಎರಡು ಬ್ಯಾಟರಿಗಳನ್ನು ಸಾಫ್ಟ್‌ವೇರ್‌ನೊಂದಿಗೆ ಅತ್ಯುತ್ತಮವಾಗಿಸುವ ಅಗತ್ಯವಿದೆ.

Market Competitors:ದೇಶಿಯ ಮಾರುಕಟ್ಟೆಯಲ್ಲಿ ಕಂಪೆನಿಯ ಈ ಹೊಸ ‘ಸಿಂಪಲ್ ಒನ್ ಜೆನ್ 1.5’ ಸ್ಕೂಟರ್, ‘ಓಲಾ ಎಸ್1 ಪ್ರೊ ಜೆನ್-3’ ಮತ್ತು ‘ಅಥರ್ 450ಎಕ್ಸ್’ ನಂತಹ ELECTRIC ಸ್ಕೂಟರ್‌ಗಳಿಗೆ ಠಕ್ಕರ್​ ನೀಡಬಲ್ಲದು.ಸಿಂಪಲ್ ಎನರ್ಜಿ ಭಾರತದ 23 ರಾಜ್ಯಗಳಲ್ಲಿ 150 ಡೀಲರ್‌ಶಿಪ್‌ಗಳು ಮತ್ತು 200 ಸರ್ವೀಸ್​ ಸೆಂಟರ್​ ಹೊಂದಿದೆ.

 

ಇದನ್ನು ಓದಿರಿ :The soon-to-be-launched direct train to Kashmir will offer a ride above the beautiful valleys of Kashmir

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...