ನವದೆಹಲಿ: ಭಾರತದ ಆರ್ಥಿಕ ಚುಟುವಟಿಕೆಯಲ್ಲಿ ಮಹಿಳೆಯರ ಭಾಗಿತ್ವ ಹೆಚ್ಚಾಗುತ್ತಿದ್ದು, ಹಾಗೇ ನಿರುದ್ಯೋಗ ದರ ಕಡಿತಗೊಂಡಿದೆ. ಕಳೆದ ಆರು ವರ್ಷಗಳಲ್ಲಿ ಶಿಕ್ಷಿತ ಮಹಿಳೆಯರು ವೃತ್ತಿಯಲ್ಲಿ ತೊಡಗುವಿಕೆ ಪ್ರಮಾಣ ವೃದ್ಧಿಸುತ್ತಿದೆ ಎಂದು ಅಂಕಿಅಂಶಗಳ ಸಚಿವಾಲಯದ ವರದಿ ಮಾಡಿದೆ.
ಎಲ್ಲಾ ವರ್ಗದಲ್ಲಿಯೂ ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿರುವ ಪ್ರಮಾಣ ಸ್ಥಿರವಾಗಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಕೂಡ ಆರ್ಥಿಕ ಚಟುವಟಿಕೆಯ ಭಾಗಿತ್ವ ಹೆಚ್ಚಾದ ಹಿನ್ನೆಲೆ ಮಹಿಳಾ ಕಾರ್ಮಿಕರ ಬಲ ಕೂಡ ಹೆಚ್ಚಾಗಿದೆ ಎಂದು ತಿಳಿಸಿದೆ.
ಕಳೆದ ಆರು ವರ್ಷದಲ್ಲಿ ಒಟ್ಟಾರೆ ಭಾರತದ ಕಾರ್ಮಿಕ ಮಾರುಕಟ್ಟೆ ಸೂಚಕಗಳು ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಅಂಕಿ ಅಂಶ ಸಚಿವಾಲಯದಿಂದ ಪಾಕ್ಷಿಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್ಎಫ್ಎಸ್) ಸಮೀಕ್ಷೆ ನಡೆಸಿದೆ. ಈ ವರದಿಯು ಕಾರ್ಮಿಕ ಜನಸಂಖ್ಯಾ ದರವನ್ನು ಬಿಂಬಿಸುತ್ತದೆ. ಇದು ಉದ್ಯೋಗದಲ್ಲಿ ತೊಡಗಿರುವ ದರವನ್ನು ವ್ಯಾಖ್ಯಾನಿಸುತ್ತದೆ.
2017ರಲ್ಲಿ ಶೇ 46.8ರಷ್ಟಿದ್ದ ಉದ್ಯೋಗಿಗಳ ದರ 2023-24ಕ್ಕೆ 58.2ರಷ್ಟಾಗಿದೆ. ಪಿಎಲ್ಎಫ್ಎಸ್ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎಫ್ಎಲ್ಎಫ್ಪಿಆರ್ ಕೂಡ 2017-18 ಹಾಗೂ 2023-24ರ ನಡುವೆ ಶೇ 23ರಷ್ಟು ಏರಿಕೆ ಕಂಡಿದೆ. ಮಹಿಳಾ ಭಾಗಿತ್ವ ದರ ಕೂಡ ದುಪ್ಪಟ್ಟಿ ಕೊಂಡಿದೆ.
ಕಾರ್ಮಿಕ ಮಹಿಳಾ ಬಲದಲ್ಲಿ ಶೇ 23.3ರಿಂದ 41.7ರಷ್ಟು ಏರಿಕೆ ಕಂಡಿದ್ದು, ಇಲ್ಲಿನ ನಿರುದ್ಯೋಗ ದರ ಶೇ 5.6ರಿಂದ 3.2ಕ್ಕೆ ಕುಸಿದಿದೆ.
ಇನ್ನು ಸುಶಿಕ್ಷಿತ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಳ್ಳುವ ಪ್ರವೃತ್ತಿ ಕೂಡ ಹೆಚ್ಚಾಗಿದೆ. ಪಿಎಲ್ಎಫ್ಎಸ್ ದತ್ತಾಂಶ ಪ್ರಕಾರ, 2023-24ರಲ್ಲಿ ಸ್ನಾತಕೋತ್ತರ ಮಟ್ಟದ ಶಿಕ್ಷಣ ಪಡೆದ ಶೇ 19.6 ಮಂದಿ ಉದ್ಯೋಗ ನಿರ್ವಹಿಸುತ್ತಿದ್ದರು. ಈ ಭಾಗಿತ್ವ 2017-18ರಲ್ಲಿ 34.5ರಷ್ಟಿತ್ತು.
ಇದೇ ವೇಳೆ ಹೈಸ್ಕೂಲ್ ಮಟ್ಟ ಶಿಕ್ಷಣ ಪಡೆದ ಮಹಿಳೆಯರ ಉದ್ಯೋಗದಲ್ಲಿ ತೊಡಗಿಕೊಳ್ಳುವಿಕೆ ಪ್ರಮಾಣ 2017-18ರಲ್ಲಿ 11.4ರಷ್ಟಿದ್ದರೆ, 2023-24ರಲ್ಲಿ 23.9ರಷ್ಟಿದೆ. ಪ್ರಾಥಮಿಕ ಶಿಕ್ಷಣ ಹೊಂದಿರುವ ಮಹಿಳಾ ದುಡಿಯುವ ವರ್ಗ 2017-18ರಲ್ಲಿ 24.9ರಷ್ಟಿದ್ದರೆ, 2023-24ರಲ್ಲಿ 50.2ರಷ್ಟಿದೆ. (ಐಎಎನ್ಎಸ್)
ಕಳೆದ ಆರು ವರ್ಷದಲ್ಲಿ ಒಟ್ಟಾರೆ ಭಾರತದ ಕಾರ್ಮಿಕ ಮಾರುಕಟ್ಟೆ ಸೂಚಕಗಳು ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ. ಕೇಂದ್ರ ಅಂಕಿ ಅಂಶ ಸಚಿವಾಲಯದಿಂದ ಪಾಕ್ಷಿಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್ಎಫ್ಎಸ್) ಸಮೀಕ್ಷೆ ನಡೆಸಿದೆ.
ಈ ವರದಿಯು ಕಾರ್ಮಿಕ ಜನಸಂಖ್ಯಾ ದರವನ್ನು ಬಿಂಬಿಸುತ್ತದೆ. ಇದು ಉದ್ಯೋಗದಲ್ಲಿ ತೊಡಗಿರುವ ದರವನ್ನು ವ್ಯಾಖ್ಯಾನಿಸುತ್ತದೆ.
2017ರಲ್ಲಿ ಶೇ 46.8ರಷ್ಟಿದ್ದ ಉದ್ಯೋಗಿಗಳ ದರ 2023-24ಕ್ಕೆ 58.2ರಷ್ಟಾಗಿದೆ.
ಕಾರ್ಮಿಕ ಬಲ ಭಾಗಿತ್ವ ದರವು (ಎಲ್ಎಫ್ಪಿಎಆರ್) ಕೂಡ ಏರಿಕೆಯಾಗಿದ್ದು, ಇದು 60.1ರಷ್ಟಿದೆ. ಆರ್ಥಿಕ ಸ್ಥಿರತೆ ಮತ್ತು ಉದ್ಯೋಗ ಲಭ್ಯತೆ ಸುಧಾರಣೆಯಿಂದಾಗಿ ನಿರುದ್ಯೋಗ ದರವೂ 6.0ನಿಂದ ಶೇ 2ಕ್ಕೆ ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.