spot_img
spot_img

6 ವರ್ಷದಿಂದ ಮಹಿಳಾ ಉದ್ಯೋಗಿಗಳ ಸಂಖ್ಯೆ, ವೇತನದಲ್ಲೂ ಏರಿಕೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ಭಾರತದ ಆರ್ಥಿಕ ಚುಟುವಟಿಕೆಯಲ್ಲಿ ಮಹಿಳೆಯರ ಭಾಗಿತ್ವ ಹೆಚ್ಚಾಗುತ್ತಿದ್ದು, ಹಾಗೇ ನಿರುದ್ಯೋಗ ದರ ಕಡಿತಗೊಂಡಿದೆ. ಕಳೆದ ಆರು ವರ್ಷಗಳಲ್ಲಿ ಶಿಕ್ಷಿತ ಮಹಿಳೆಯರು ವೃತ್ತಿಯಲ್ಲಿ ತೊಡಗುವಿಕೆ ಪ್ರಮಾಣ ವೃದ್ಧಿಸುತ್ತಿದೆ ಎಂದು ಅಂಕಿಅಂಶಗಳ ಸಚಿವಾಲಯದ ವರದಿ ಮಾಡಿದೆ.

ಎಲ್ಲಾ ವರ್ಗದಲ್ಲಿಯೂ ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿರುವ ಪ್ರಮಾಣ ಸ್ಥಿರವಾಗಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಕೂಡ ಆರ್ಥಿಕ ಚಟುವಟಿಕೆಯ ಭಾಗಿತ್ವ ಹೆಚ್ಚಾದ ಹಿನ್ನೆಲೆ ಮಹಿಳಾ ಕಾರ್ಮಿಕರ ಬಲ ಕೂಡ ಹೆಚ್ಚಾಗಿದೆ ಎಂದು ತಿಳಿಸಿದೆ.

ಕಳೆದ ಆರು ವರ್ಷದಲ್ಲಿ ಒಟ್ಟಾರೆ ಭಾರತದ ಕಾರ್ಮಿಕ ಮಾರುಕಟ್ಟೆ ಸೂಚಕಗಳು ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ.

ಕೇಂದ್ರ ಅಂಕಿ ಅಂಶ ಸಚಿವಾಲಯದಿಂದ ಪಾಕ್ಷಿಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್​ಎಫ್​ಎಸ್​) ಸಮೀಕ್ಷೆ ನಡೆಸಿದೆ. ಈ ವರದಿಯು ಕಾರ್ಮಿಕ ಜನಸಂಖ್ಯಾ ದರವನ್ನು ಬಿಂಬಿಸುತ್ತದೆ. ಇದು ಉದ್ಯೋಗದಲ್ಲಿ ತೊಡಗಿರುವ ದರವನ್ನು ವ್ಯಾಖ್ಯಾನಿಸುತ್ತದೆ.

2017ರಲ್ಲಿ ಶೇ 46.8ರಷ್ಟಿದ್ದ ಉದ್ಯೋಗಿಗಳ ದರ 2023-24ಕ್ಕೆ 58.2ರಷ್ಟಾಗಿದೆ. ಪಿಎಲ್​ಎಫ್​ಎಸ್​ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎಫ್​​ಎಲ್​ಎಫ್​ಪಿಆರ್​ ಕೂಡ 2017-18 ಹಾಗೂ 2023-24ರ ನಡುವೆ ಶೇ 23ರಷ್ಟು ಏರಿಕೆ ಕಂಡಿದೆ. ಮಹಿಳಾ ಭಾಗಿತ್ವ ದರ ಕೂಡ ದುಪ್ಪಟ್ಟಿ ಕೊಂಡಿದೆ.

ಕಾರ್ಮಿಕ ಮಹಿಳಾ ಬಲದಲ್ಲಿ ಶೇ 23.3ರಿಂದ 41.7ರಷ್ಟು ಏರಿಕೆ ಕಂಡಿದ್ದು, ಇಲ್ಲಿನ ನಿರುದ್ಯೋಗ ದರ ಶೇ 5.6ರಿಂದ 3.2ಕ್ಕೆ ಕುಸಿದಿದೆ.

ಇನ್ನು ಸುಶಿಕ್ಷಿತ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಳ್ಳುವ ಪ್ರವೃತ್ತಿ ಕೂಡ ಹೆಚ್ಚಾಗಿದೆ. ಪಿಎಲ್​ಎಫ್​ಎಸ್​ ದತ್ತಾಂಶ ಪ್ರಕಾರ, 2023-24ರಲ್ಲಿ ಸ್ನಾತಕೋತ್ತರ ಮಟ್ಟದ ಶಿಕ್ಷಣ ಪಡೆದ ಶೇ 19.6 ಮಂದಿ ಉದ್ಯೋಗ ನಿರ್ವಹಿಸುತ್ತಿದ್ದರು. ಈ ಭಾಗಿತ್ವ 2017-18ರಲ್ಲಿ 34.5ರಷ್ಟಿತ್ತು.

ಇದೇ ವೇಳೆ ಹೈಸ್ಕೂಲ್​ ಮಟ್ಟ ಶಿಕ್ಷಣ ಪಡೆದ ಮಹಿಳೆಯರ ಉದ್ಯೋಗದಲ್ಲಿ ತೊಡಗಿಕೊಳ್ಳುವಿಕೆ ಪ್ರಮಾಣ 2017-18ರಲ್ಲಿ 11.4ರಷ್ಟಿದ್ದರೆ, 2023-24ರಲ್ಲಿ 23.9ರಷ್ಟಿದೆ. ಪ್ರಾಥಮಿಕ ಶಿಕ್ಷಣ ಹೊಂದಿರುವ ಮಹಿಳಾ ದುಡಿಯುವ ವರ್ಗ 2017-18ರಲ್ಲಿ 24.9ರಷ್ಟಿದ್ದರೆ, 2023-24ರಲ್ಲಿ 50.2ರಷ್ಟಿದೆ. (ಐಎಎನ್​ಎಸ್​)

ಕಳೆದ ಆರು ವರ್ಷದಲ್ಲಿ ಒಟ್ಟಾರೆ ಭಾರತದ ಕಾರ್ಮಿಕ ಮಾರುಕಟ್ಟೆ ಸೂಚಕಗಳು ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ. ಕೇಂದ್ರ ಅಂಕಿ ಅಂಶ ಸಚಿವಾಲಯದಿಂದ ಪಾಕ್ಷಿಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್​ಎಫ್​ಎಸ್​) ಸಮೀಕ್ಷೆ ನಡೆಸಿದೆ.

ಈ ವರದಿಯು ಕಾರ್ಮಿಕ ಜನಸಂಖ್ಯಾ ದರವನ್ನು ಬಿಂಬಿಸುತ್ತದೆ. ಇದು ಉದ್ಯೋಗದಲ್ಲಿ ತೊಡಗಿರುವ ದರವನ್ನು ವ್ಯಾಖ್ಯಾನಿಸುತ್ತದೆ.

2017ರಲ್ಲಿ ಶೇ 46.8ರಷ್ಟಿದ್ದ ಉದ್ಯೋಗಿಗಳ ದರ 2023-24ಕ್ಕೆ 58.2ರಷ್ಟಾಗಿದೆ.
ಕಾರ್ಮಿಕ ಬಲ ಭಾಗಿತ್ವ ದರವು (ಎಲ್​ಎಫ್​ಪಿಎಆರ್​​) ಕೂಡ ಏರಿಕೆಯಾಗಿದ್ದು, ಇದು 60.1ರಷ್ಟಿದೆ. ಆರ್ಥಿಕ ಸ್ಥಿರತೆ ಮತ್ತು ಉದ್ಯೋಗ ಲಭ್ಯತೆ ಸುಧಾರಣೆಯಿಂದಾಗಿ ನಿರುದ್ಯೋಗ ದರವೂ 6.0ನಿಂದ ಶೇ 2ಕ್ಕೆ ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...