WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Seoul (South Korea) News:
SOUTH KOREAದ ಮುವಾನ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಭೀಕರ ವಿಮಾನ ದುರಂತ ಸಂಭವಿಸಿದೆ. ವಿಮಾನದಲ್ಲಿದ್ದ 181 ಜನರ ಪೈಕಿ 179 ಜನ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.ಹಕ್ಕಿ ಡಿಕ್ಕಿ ಹಾಗೂ ಪ್ರತಿಕೂಲ ವಾತಾವರಣ ವಿಮಾನ ಅಪಘಾತಕ್ಕೆ ಕಾರಣವಾಗಿರಬಹುದು.
ಆದರೆ ತನಿಖೆ ಬಳಿಕವೇ ಸೂಕ್ತ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದುರಂತದಲ್ಲಿ ಜೆಜು ಏರ್ ವಿಮಾನ ಸಂಪೂರ್ಣ ಸುಟ್ಟು ಹೋಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಹೊರತುಪಡಿಸಿ ಎಲ್ಲ 179 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
What happened?: SOUTH KOREAದ ನೈರುತ್ಯದಲ್ಲಿರುವ ಮುವಾನ್ ವಿಮಾನ ನಿಲ್ದಾಣದಲ್ಲಿ ಜೆಜು ಏರ್ ವಿಮಾನದ ಲ್ಯಾಂಡಿಂಗ್ ಗೇರ್ ಫೇಲ್ ಆದ ಪರಿಣಾಮ ಈ ದುರಂತ ನಡೆದಿದೆ ಎಂದು ಆರಂಭದಲ್ಲಿ ಅಧಿಕಾರಿಗಳು ಅಂದಾಜಿಸಿದ್ದರು.ಈ ವಿಮಾನ ಬ್ಯಾಂಕಾಕ್‌ನಿಂದ SOUTH KOREAಕ್ಕೆ ಆಗಮಿಸಿದ ವೇಳೆ ಘಟನೆ ನಡೆದಿದೆ.
ಬೆಂಕಿ ನಂದಿಸಲು 32 ಅಗ್ನಿಶಾಮಕ ವಾಹನಗಳು ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿತ್ತು.ಏರ್ಪೋರ್ಟ್ ರನ್ವೇಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ರನ್ವೇಗೆ ಅಪ್ಪಳಿಸಿ ಬಳಿಕ ಕೊನೆಯಲ್ಲಿದ್ದ ಬೇಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತುರ್ತು ಸೇವಾ ಕಚೇರಿ ಮಾಹಿತಿ ನೀಡಿದೆ.ರಕ್ಷಣಾ ಕಾರ್ಯಾಚರಣೆಗೆ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು, ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸುವಂತೆ ದಕ್ಷಿಣ ಕೊರಿಯಾ ಉಪ ಪ್ರಧಾನಿ ಚೊಯ್ ಸ್ಯಾಂಗ್ ಮೊಕ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು.
ಘಟನೆಯ ಲೈವ್ ವಿಡಿಯೋವನ್ನು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ಬಿತ್ತರಿಸಿದೆ. ವಿಡಿಯೋದಲ್ಲಿ ವಿಮಾನ ರನ್ವೇಗೆ ಅಪ್ಪಳಿಸಿ ಬಳಿಕ ವೇಗದಲ್ಲಿ ಚಲಿಸುತ್ತಿದ್ದು, ಈ ವೇಳೆ ಅದರಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಕೊನೆಯಲ್ಲಿದ್ದ ಗೋಡೆಗೆ ಗುದ್ದಿ ಬೆಂಕಿ ಹೊತ್ತುಕೊಂಡು ಸುಟ್ಟು ಹೋಗಿರುವುದು ವಿಡಿಯೋದಲ್ಲಿ ಗಮನಿಸಬಹುದು.
Azerbaijan plane crash: ಡಿಸೆಂಬರ್ 25 ರಂದು ಅಜರ್‌ಬೈಜಾನ್‌ನ ರಾಜಧಾನಿ ಬಾಕುದಿಂದ ರಷ್ಯಾದ ಗ್ರೋಜ್ನಿಗೆ ಹಾರುತ್ತಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ಯಾಸೆಂಜರ್ ವಿಮಾನ ಕಝಾಕಿಸ್ತಾನ್ ವಾಯುಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ38 ಮಂದಿ ಬಲಿಯಾಗಿ ಪವಾಡಸದೃಶ್ಯವಾಗಿ 29 ಮಂದಿ ಬದುಕುಳಿದಿದ್ದರು.
Jeju Air Apologizes:ವಿಮಾನ ಪತನದಿಂದ ಉಂಟಾಗಿರುವ ಪ್ರಾಣಹಾನಿಯ ಬಗ್ಗೆ ಕಳವಳ ವಕ್ತಪಡಿಸಿ ಜೆಜು ಏರ್ ಸಂಸ್ಥೆ ಕ್ಷಮೆಯಾಚಿಸಿದೆ. ಜೊತೆಗೆ ರಕ್ಷಣಾ ಕಾರ್ಯಚರಣೆ ಮತ್ತು ಅಪಘಾತ ಸಂಬಂಧ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ತಿಳಿಸಿದೆ.ಬ್ಯಾಂಕಾಕ್‌ನಿಂದ SOUTH KOREAಕ್ಕೆ ಆಗಮಿಸಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದ್ದು, 179 ಪ್ರಯಾಣಿಕರು ಅಸುನೀಗಿದ್ದಾರೆ. ಇಬ್ಬರು ವಿಮಾನ ಸಿಬ್ಬಂದಿ ಮಾತ್ರ ಬದುಕುಳಿಯುವ ಸಾಧ್ಯತೆ ಇದೆ.
ಇದನ್ನು ಓದಿರಿ : MEGA MILLIONS LOTTERY : ಭಾರತೀಯ ಮೂಲದ ವ್ಯಕ್ತಿಯ ಸ್ಟೋರ್ನಲ್ಲಿ ಮಾರಾಟವಾದ ₹10,418 ಕೋಟಿ