spot_img
spot_img

ಇಸ್ರೋದ GSAT-N2 ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಸ್ಪೇಸ್‌ಎಕ್ಸ್

spot_img
spot_img

Share post:

ಬೆಂಗಳೂರು: ಫಾಲ್ಕನ್ 9 ರಾಕೆಟ್‌ ನೆರವಿನಿಂದ 4,700 ಕೆಜಿ ತೂಕದ GSAT-N2 ಹೈ-ಥ್ರೂಪುಟ್(HTS) ಉಪಗ್ರಹವನ್ನು ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್ ಫರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.

ದೇಶದ ಇತ್ತೀಚಿನ ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ಅನ್ನು ಬಿಲಿಯನೇರ್ ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಅಮೆರಿಕದ ಕೇಪ್ ಕೆನವೆರಲ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಇಸ್ರೋದ ವಾಣಿಜ್ಯ ವಿಭಾಗ ಎನ್‌ಎಸ್‌ಐಎಲ್ ತಿಳಿಸಿದೆ.

ಫಾಲ್ಕನ್ 9 ರಾಕೆಟ್‌ ನೆರವಿನಿಂದ 4,700 ಕೆಜಿ ತೂಕದ GSAT-N2 ಹೈ-ಥ್ರೂಪುಟ್(HTS) ಉಪಗ್ರಹವನ್ನು ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್ ಫರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು ಎಂದು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(NSIL) ತಿಳಿಸಿದೆ.

GSAT-N2 ಹೈ-ಥ್ರೂಪುಟ್ (HTS) ಸಂವಹನ ಉಪಗ್ರಹವನ್ನು ನವೆಂಬರ್ 19, 2024 ರಂದು ಅಮೆರಿಕದ ಕೇಪ್ ಕ್ಯಾನವೆರಲ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

4700 ಕೆಜಿ ತೂಕದ GSAT-N2 ಅನ್ನು ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್‌ಫರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು, ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ(ಎಂಸಿಎಫ್) ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸುತ್ತದೆ” ಎಂದು NSIL ‘X’ ನಲ್ಲಿ ಪೋಸ್ಟ್‌ ಮಾಡಿದೆ.

“ಜಿಎಸ್‌ಎಟಿ-ಎನ್2 ಬ್ಯಾಂಡ್ ಹೈ ಥ್ರೋಪುಟ್ ಸಂವಹನ ಉಪಗ್ರಹವಾಗಿದ್ದು, ದೇಶದ ಬ್ರಾಡ್‌ಬ್ಯಾಂಡ್ ಸೇವೆಗಳು ಮತ್ತು ವಿಮಾನದಲ್ಲಿ ಕನೆಕ್ಟಿವಿಟಿ ಹೆಚ್ಚಿಸುತ್ತದೆ” ಎಂದು ಎನ್‌ಎಸ್‌ಐಎಲ್ ಹೇಳಿದೆ.

ಈ ಉಪಗ್ರಹವು 14 ವರ್ಷ ಕಾರ್ಯಾಚರಣೆಯ ಅವಧಿಯನ್ನು ಹೊಂದಿದೆ ಮತ್ತು 32 ಬಳಕೆದಾರ ಕಿರಣಗಳನ್ನು ಹೊಂದಿದ್ದು, ಈಶಾನ್ಯ ಪ್ರದೇಶದಲ್ಲಿ ಎಂಟು ಕಿರಿದಾದ ಸ್ಪಾಟ್ ಕಿರಣಗಳು ಮತ್ತು ಭಾರತದ ಉಳಿದ ಭಾಗಗಳಲ್ಲಿ 24 ವಿಶಾಲ ಸ್ಪಾಟ್ ಕಿರಣಗಳನ್ನು ಒಳಗೊಂಡಿದೆ.

4,700 ಕೆ.ಜಿ ತೂಗುವ ಜಿಸ್ಯಾಟ್-2 ಉಪಗ್ರಹವು ಭಾರತದ ಸ್ವಂತ ರಾಕೆಟ್‌ಗಳ ಹೊತ್ತೊಯ್ಯುವ ಸಾಮರ್ಥ್ಯವನ್ನು ಮೀರಿದೆ. ಹೀಗಾಗಿ ಇಸ್ರೋ ಅದರ ಉಡಾವಣೆಗಾಗಿ ಸ್ಪೇಸ್‌ ಎಕ್ಸ್‌ನ್ನು ಆಯ್ಕೆ ಮಾಡಿಕೊಂಡಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...