Eluru (Andhra Pradesh) News:
ಸಂಕ್ರಾಂತಿ ಹಬ್ಬದ ಹಿನ್ನೆಲೆ ಹೊಸ ಅಳಿಯನಿಗೆ ಮಾವನ ಕುಟುಂಬವು 452 ಬಗೆಯ ಖಾದ್ಯಗಳನ್ನು ತಯಾರಿಸಿ ಉಣ ಬಡಿಸಿದೆ.ಹೊಸ SON IN LAW ಮೊದಲ ಬಾರಿಗೆ ಅತ್ತೆ- ಮಾವನ ಮನೆಗೆ ಬಂದಾಗ ತರಹೇವಾರಿ ಆಹಾರ ಪದಾರ್ಥ ಮಾಡಿ ಉಣಬಡಿಸುವುದು ಇದೇ ಹಬ್ಬದಲ್ಲಿ. ಆಂಧ್ರಪ್ರದೇಶದ ಕುಟುಂಬವೊಂದು ತಮ್ಮ SON IN LAWನಿಗಾಗಿ ಬರೋಬ್ಬರಿ 452 ಬಗೆಯ ಖಾದ್ಯಗಳನ್ನು ತಯಾರಿಸಿದೆ.
ವರ್ಷದ ಮೊದಲ ಮತ್ತು ರೈತರ ಹಬ್ಬವಾದ ಸಂಕ್ರಾಂತಿಯು ನವ ವಧು – ವರರಿಗೂ ಸುಗ್ಗಿ ತರುತ್ತದೆ. ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂನ ವಂದನಾಪು ವೆಂಕಟೇಶ್ವರ ರಾವ್ ಅವರು ಕುಟುಂಬ ತನ್ನ ಅಳಿಯನಿಗೆ ಅದ್ಧೂರಿ ಸ್ವಾಗತ ಕೋರಿದೆ. ಮಾವನ ಮನೆಯ ಪ್ರೀತಿ ಕಂಡು SON IN LAW ಅವಾಕ್ಕಾಗಿದ್ದಾನೆ. ವಿಧವಿಧದ ಖಾದ್ಯಗಳನ್ನು ಸವಿದಿದ್ದಾರೆ.
Dinner for son-in-law: ವಿವಿಧ ಶಾಖಾಹಾರ, ಕುರುಕಲು ತಿಂಡಿ, ಸಿಹಿತಿಂಡಿಗಳು, ಹಣ್ಣುಗಳು, ಒಣ ಹಣ್ಣುಗಳು, ತಂಪು ಪಾನೀಯ ಸೇರಿದಂತೆ 452 ಬಗೆಯ ಖಾದ್ಯಗಳನ್ನು ಊಟದ ಟೇಬಲ್ ಮೇಲೆ ಮಟ್ಟಸವಾಗಿ ಜೋಡಿಸಿಡಲಾಗಿತ್ತು.
SON IN LAW ಮತ್ತು ಮಗಳನ್ನು ಭೋಜನಕ್ಕೆ ಕರೆದು ಆತಿಥ್ಯ ನೀಡಲಾಗಿದೆ.ಮೊದಲ ಸಂಕ್ರಾಂತಿ ಹಬ್ಬಕ್ಕೆ ಬಂದ ಹೊಸ SON IN LAWನಿಗೆ ಮಾವನ ಮನೆಯ ಕುಟುಂಬವು, ವಿಶೇಷ ಭೋಜನದ ಮೂಲಕ ಆಶ್ಚರ್ಯಚಕಿತಗೊಳಿಸಿದೆ.
Surprised son-in-law: ಇಷ್ಟೊಂದು ಪ್ರಮಾಣದಲ್ಲಿ ವಿಧವಿಧದ ಭೋಜನವನ್ನು ತಾನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಸಸ್ಯಾಹಾರದಲ್ಲಿ ಹಲವು ಬಗೆಯ ಪದಾರ್ಥಗಳು ಇರುವುದನ್ನು ಇಂದೇ ನೋಡಿದ್ದೇನೆ ಎಂದರು.ಮಾವನ ಮನೆಯ ಅದ್ಧೂರಿ ಆತಿಥ್ಯ ಕಂಡು ಅಳಿಯ ಶಿವ ಭಾಸ್ಕರ್ ಅಚ್ಚರಿಪಟ್ಟಿದ್ದಾರೆ.
ಈ ಮೆಗಾ ಡಿನ್ನರ್‌ನಲ್ಲಿನ ಖಾದ್ಯಗಳನ್ನು ನೋಡಿ ಕಣ್ಣಗಲಿಸಿದ್ದಾರೆ. ಬಳಿಕ ಮಾವ ವೆಂಕಟೇಶ್ವರ ರಾವ್ ಮಾತನಾಡಿ, ಸಂಪ್ರದಾಯ, ಆಚಾರಗಳ ಪ್ರಕಾರ ಹೊಸ SON IN LAWನಿಗೆ ಮೊದಲ ಸಂಕ್ರಾಂತಿಗೆ ಅದ್ಧೂರಿ ಆತಿಥ್ಯ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ನಾವು ಕೂಡ 452 ಬಗೆಯ ಖಾದ್ಯಗಳೊಂದಿಗೆ ಆತಿಥ್ಯ ನೀಡಿದ್ದೇವೆ ಎಂದು ಹೇಳಿದ್ದಾರೆ.
452 ಬಗೆಯ ತರಹೇವಾರಿ ಖಾದ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟು ತಿನಿಸುಗಳನ್ನು ಕಂಡ ನೆಟ್ಟಿಗರು ತಮಗೂ ಕೂಡ ಇಂತಹ ಪತ್ನಿ ಮತ್ತು ಕುಟುಂಬ ಸಿಕ್ಕರೆ ಎಷ್ಟು ಚೆನ್ನ ಎಂದು ತಮಾಷೆಯಾಗಿ ಚರ್ಚಿಸುತ್ತಿದ್ದಾರೆ.
ಇದನ್ನು ಓದಿರಿ : EFFECTS OF JAGGERY ON DIABETES : ಶುಗರ್ ಪೇಷಂಟ್ಗಳು ಬೆಲ್ಲ ಸೇವಿಸೋದು ಉತ್ತಮವೇ?