Haveri News:
ನಗರದ ಭಗತಸಿಂಗ್ ಪಿಯು ಕಾಲೇಜು ತನ್ನ ವಾರ್ಷಿಕೋತ್ಸವ ಆಚರಿಸಿದ್ದು, ಕಾರ್ಯಕ್ರಮಕ್ಕೆ ಆಡಳಿತ ಮಂಡಳಿ ವಿಶೇಷ ಅತಿಥಿಯೊಬ್ಬರನ್ನು ಆಹ್ವಾನಿಸಿತ್ತು. ಆ SPECIAL GUEST BULL ಬೇರ್ಯಾರು ಅಲ್ಲ. ಹೌದು, ಭಗತಸಿಂಗ್ ಕಾಲೇಜಿನಲ್ಲಿ ಈ ಹೋರಿಗೆ ಸಾಕಷ್ಟು ವಿದ್ಯಾರ್ಥಿ ಅಭಿಮಾನಿಗಳಿದ್ದಾರೆ.
ಆಡಳಿತ ಮಂಡಳಿ ವಾರ್ಷಿಕೋತ್ಸವ ಸಿದ್ಧತೆ ಕುರಿತಂತೆ ಸಭೆ ನಡೆಸಿದಾಗ ವಿದ್ಯಾರ್ಥಿಗಳು ಹೋರಿಯನ್ನು ಕರೆಸುವ ಆಸೆ ವ್ಯಕ್ತಪಡಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ಹೋರಿ ನಂದಿಯನ್ನು ಕಾಲೇಜಿನ ವಾರ್ಷಿಕೋತ್ಸವಕ್ಕೆ ವಿಶೇಷ ಅತಿಥಿಯನ್ನಾಗಿ ಆಯ್ಕೆ ಮಾಡಿತು. ದನ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿರುವ ಹುಲಗಿನಕೊಪ್ಪದ ನಂದಿ ಹೆಸರಿನ ಹೋರಿಯನ್ನ.
Minching of the Chief Guest in the programme:
SPECIAL GUEST BULL ಆಹ್ವಾನ ಸ್ವೀಕರಿಸಿದ ಹುಲಗಿನಕೊಪ್ಪ ನಂದಿಯ ಮಾಲೀಕರು ಹೋರಿಯನ್ನು ಕಾಲೇಜಿಗೆ ಕರೆತಂದರು. ಈ ವೇಳೆ ದಾರಿ ಉದ್ದಕ್ಕೂ ಪಟಾಕಿ ಸಿಡಿಸಲಾಯಿತು. ಕಾಲೇಜು ಆವರಣದಲ್ಲಿ ಹೋರಿಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಕಾರ್ಯಕ್ರಮದ ವೇದಿಕೆಗೆ ನಂದಿಯನ್ನು ಕರೆತರಲಾಯಿತು. ಕೆಲವರು ವಿಡಿಯೋ ಮಾಡಿ ಸಂಭ್ರಮಿಸಿದರೆ ಇನ್ನೂ ಕೆಲವರು ಹೋರಿಯ ಹಗ್ಗವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಂಡರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಚೇರ್ಮನ್ ಸತೀಶ್ ಮಾತನಾಡಿದ್ದು, “ನಾವು ಪ್ರತಿವರ್ಷ ವಾರ್ಷಿಕೋತ್ಸವ ಆಚರಿಸುತ್ತೇವೆ. ವಾರ್ಷಿಕೋತ್ಸವ ಆಚರಿಸುವ ಮುನ್ನ ಅತಿಥಿಗಳ ಆಯ್ಕೆ ಕುರಿತಂತೆ ಸಭೆ ನಡೆಸಲಾಗುತ್ತದೆ .
ಸಭೆಯಲ್ಲಿ ವಿದ್ಯಾರ್ಥಿಗಳು ವಿಶೇಷ ಅತಿಥಿಯನ್ನಾಗಿ ದನಬೆದರಿಸುವ ಸ್ಪರ್ಧೆಯ ಹೋರಿ ಹುಲಗಿನಕೊಪ್ಪ ನಂದಿಯನ್ನು ಕರೆಸುವ ಆಸೆ ವ್ಯಕ್ತಪಡಿಸಿದರು. ಅದರ ಮಾಲೀಕರು ನಮ್ಮ ಆಹ್ವಾನ ಸ್ವೀಕರಿಸಿ ಹೋರಿಯನ್ನು ಕಾಲೇಜಿಗೆ ಕರೆತಂದಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಸಂಭ್ರಮಿಸಿದ್ದಾರೆ” ಎಂದು ತಿಳಿಸಿದ್ದಾರೆ.
Celebrated Students:
ವಿದ್ಯಾರ್ಥಿಗಳು ಈ ಬಗ್ಗೆ, “ಹಾವೇರಿ ಎಂದರೆ ಹೋರಿ ಹಬ್ಬ, ಹೋರಿ ಹಬ್ಬ ಅಂದರೆ ಹಾವೇರಿ. ಹಾವೇರಿ ಜಾನಪದ ಸೊಗಡಿನ ಕ್ರೀಡೆ ದನ ಬೆದರಿಸುವ ಸ್ಪರ್ಧೆಗೆ ಪ್ರಸಿದ್ಧಿಯಾಗಿದೆ. ಸಿನಿಮಾ ನಾಯಕ ನಾಯಕಿಯರಿಗೆ ಇರುವಂತೆ ಇಲ್ಲಿ ದನ ಬೆದರಿಸುವ ಹೋರಿಗಳಿಗೆ ಸಾವಿರಾರು ಅಭಿಮಾನಿಗಳಿರುತ್ತಾರೆ. ಅದೇ ರೀತಿ ನಮ್ಮ ಕಾಲೇಜಿನಲ್ಲಿ ಹುಲಗಿನಕೊಪ್ಪ ನಂದಿ ಹೋರಿಗೆ ಅಭಿಮಾನಿಗಳಿದ್ದಾರೆ. ಕಾಲೇಜು ಆಡಳಿತ ಮಂಡಳಿಗೆ ಮತ್ತು ಹೋರಿ ಮಾಲೀಕರಿಗೆ ಧನ್ಯವಾದ ಅರ್ಪಿಸುವುದಾಗಿ” ವಿದ್ಯಾರ್ಥಿಗಳು ಹೇಳಿದ್ದಾರೆ.
ದನ ಬೆದರಿಸುವ ಸ್ಪರ್ಧೆ ಹಾವೇರಿ ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಹಾವೇರಿ, ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗದಲ್ಲಿ ಈ ಕ್ರೀಡೆ ಭಾರಿ ಜನಮನ್ನಣೆ ಗಳಿಸಿದೆ. ದೀಪಾವಳಿಯಿಂದ ಆರಂಭವಾಗುವ ಈ ಕ್ರೀಡೆ ಜನವರಿ ತಿಂಗಳವರೆಗೆ ಆಚರಿಸಲಾಗುತ್ತದೆ.
ಇದನ್ನು ಓದಿರಿ : 12 Booked for Assaulting Comedian Over Jokes on Veer Pahariya After Actor Condemns Attack