Srinagar News:
ಕಾಶ್ಮೀರದಲ್ಲಿ ಶುಕ್ರವಾರ ಮೈನಸ್ 8.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, 1974ರ ಬಳಿಕ ಅತ್ಯಂತ ಚಳಿಯ ರಾತ್ರಿ ಇದಾಗಿದೆ. ಕಣಿವೆ ರಾಜ್ಯದಲ್ಲಿ ಮೈನಸ್ ಡಿಗ್ರಿ ತಾಪಮಾನ ಮುಂದುವರೆದಿದ್ದು, ಚಿಲೈ ಕಲಾನ್ ಋತು ಆರಂಭಕ್ಕೆ ಸಜ್ಜಾಗಿದೆ. ಡೆಡ್ ವಿಂಟರ್ ಎಂದು ಕರೆಯಲಾಗುವ ಈ ಕಾಲವೂ ಮೈ ನಡುಗುವ ಚಳಿ ಬಳಿಕ ಕಾಶ್ಮೀರದಲ್ಲಿ ಆರಂಭವಾಗುತ್ತದೆ. ಅನಂತ್ನಾಗ್ನಲ್ಲಿ -10.5, ಶೋಫಿಯಾನದಲ್ಲಿ -10.4 ಮತ್ತು ಪುಲ್ವಾಮಾದಲ್ಲಿ -10.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಾಶ್ಮೀರದಲ್ಲಿ ಭಾರೀ ಚಳಿಗೆ ಈಗಾಗಲೇ ನೀರು ಘನೀಕರಿಸುತ್ತಿದ್ದು, ಮೂರು ಜಿಲ್ಲೆಗಳಲ್ಲಿ ಮೈನಸ್ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 1891ರ ಬಳಿಕ ಡಿಸೆಂಬರ್ನಲ್ಲಿ ಮೂರನೇ ಅತ್ಯಂತ ಚಳಿ ದಿನ ಶುಕ್ರವಾರ ರಾತ್ರಿ ದಾಖಲಾಗಿದೆ. ಚಳಿಗಾಲದಲ್ಲಿ ಇಲ್ಲಿನ ದಾಖಲೆ ತಾಪಮಾನವೂ 1934ರ ಡಿಸೆಂಬರ್ 13 ರಂದು -12.8ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
Start of Chilli Colon:
ಕಾಶ್ಮೀರದಲ್ಲಿ ತೀವ್ರ ಚಳಿ ಅವಧಿಯನ್ನು ಚಿಲ್ಲೈ ಕಾಲನ್ ಎಂದು ಗುರುತಿಸಲಾಗಿದ್ದು, ಡಿಸೆಂಬರ್ 21 ರಿಂದ ಜನವರಿ 31ರವರೆಗೆ ಈ ಋತುಮಾನ ಇರುತ್ತದೆ. ಇದಾದ ಬಳಿಕ ಮುಂದಿನ 20 ದಿನ ಅಂದರೆ ಜನವರಿ 31 ರಿಂದ ಫೆಬ್ರವರಿ 19ರವರೆಗೆ ಚಿಲ್ಲೈ ಖುರ್ದ್ ಆಗಿದ್ದು, ಮುಂದಿನ ಹತ್ತು ದಿನ ಅಂದರೆ ಫೆಬ್ರವರಿ 20 ರಿಂದ ಮಾರ್ಚ್ 2ರವರೆಗೆ ಚಿಲ್ಲೈ ಬಚ್ಚಾ ಅವಧಿಯಾಗಿದೆ. ಮೊದಲಿನ ಎರಡು ಅವಧಿಗೆ ಹೋಲಿಕೆ ಮಾಡಿದಾಗ ಈ ಸಮಯದಲ್ಲಿ ಚಳಿ ಕೊಂಚ ಸುಧಾರಣೆ ಹೊಂದಿರುತ್ತದೆ.
Frozen Dal Lake:
ನಗರದಲ್ಲಿ ಶುಷ್ಕತೆ ಮುಂದುವರೆದಿದ್ದು ಇದು ಜನರಲ್ಲಿ ಕೆಮ್ಮು ಮತ್ತು ಚಳಿಗೂ ಕಾರಣವಾಗವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಇಲಾಖೆ ಪ್ರಕಾರ, ಡಿಸೆಂಬರ್ 26ರವರೆಗೆ ಒಣ ಹವೆ ಮುಂದುವರೆಯಲಿದ್ದು, ಡಿಸೆಂಬರ್ 21-22ರಂದು ಎತ್ತರ ಪ್ರದೇಶದಲ್ಲಿ ಹಗುರ ಹಿಮ ಬೀಳಲಿದೆ. ಅನೇಕ ಪ್ರದೇಶದಲ್ಲಿ ಡಿಸೆಂಬರ್ 27ರ ರಾತ್ರಿ ಮತ್ತು ಡಿಸೆಂಬರ್ 28ರಂದು ಹಿಮ ಮಳೆ ಕಾಣ ಬಹುದಾಗಿದೆ. ಈ ನಡುವೆ ಕಣಿವೆಯಲ್ಲಿ ಮುಂದಿನ ಕೆಲವು ದನಗಳ ಕಾಲ ಶೀತ ಅಲೆ ಮುಂದುವರೆಯಲಿದೆ. ಚಳಿ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಕಡೆ ನೀರಿನ ಪೂರೈಕ ಮೂಲಗಳು ಘನೀಕರಿಸುತ್ತಿದೆ. ಅದರಲ್ಲೂ ಇಲ್ಲಿನ ಪ್ರಖ್ಯಾತ ಸಿಹಿ ನೀರಿನ ಸರೋವರದಲ್ಲಿ ಈಗಾಗಲೇ ನೀರು ಘನೀಕರಿಸಲು ಪ್ರಾರಂಭಿಸಿದೆ.
Prayer of Kashmiris for snow:
ರಾಜ್ಯದಲ್ಲಿ ಉತ್ತಮ ಹಿಮ ಬಿದ್ದಾಗ ಶುಷ್ಕತೆ ನೀಗಿಸಲಿದೆ. ಆದರೆ ಚಳಿಯ ವಾತಾವರಣ ಕಣಿವೆ ಜನರಲ್ಲಿ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.ಮೈನಡುಕುವ ಚಳಿಯ ನಡುವೆ ಕಣಿವೆ ಸ್ವರ್ಗದಂತೆ ಕಾಣವುದು ಹಿಮದ ಹೊದಿಕೆ ಆವೃತವಾದಾಗ ಶುಷ್ಕ ಹವಾಮಾನ ಕೊನೆಗೊ ಈ ನಡುವೆ ಕಣಿವೆಯಲ್ಲಿ ಅನೇಕ ಭಾಗದಲ್ಲಿ ತೀವ್ರ ಚಳಿಯಿಂದಾಗಿ ನೀರಿನ ಪೈಪ್ಗಳು ಘನೀಕರಿಸುತ್ತಿದ್ದು, ವಿದ್ಯುತ್ ಸಮಸ್ಯೆ ಎದುರಾಗಿದೆ.