ಬೆಂಗಳೂರು: ರಾಜ್ಯಾಧ್ಯಂತ ರದ್ದುಗೊಂಡಿದ್ದಂತ ಅರ್ಹರ ಬಿಪಿಎಲ್ ರೇಷನ್ ಕಾರ್ಡ್ ಸಮಸ್ಯೆ ಸರಿಪಡಿಸಲಾಗಿದೆ. ಇನ್ನೂ ಕೆಲವರದ್ದು ಸರಿ ಪಡಿಸಲಾಗುತ್ತಿದೆ. ಇದೀಗ ರಾಜ್ಯಾಧ್ಯಂತ ಮತ್ತೆ ಅರ್ಹರ ಬಿಪಿಎಲ್ ಕಾರ್ಡ್ ಆಯಕ್ಟೀವ್ ಮಾಡಲಾಗಿದೆ. ಹೀಗಾಗಿ ಹಿಂದಿನ ತಿಂಗಳಂತೆಯೇ ಪರಿಡತ ಧಾನ್ಯ ವಿತರಣೆಯಾಗಲಿದೆ.
ಅರ್ಹರ ಬಿಪಿಎಲ್ ಕಾರ್ಡ್ ಆಯಕ್ಟೀವ್ ಆಗಿದ್ದು, ಹಿಂದಿನ ತಿಂಗಳು ಹೇಗೆ ಅಕ್ಕಿ ಸಿಗುತ್ತಿತ್ತೋ ಅದೇ ರೀತಿ ಈ ತಿಂಗಳು ಸಿಗಲಿದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಅವರನ್ನು ಭೇಟಿ ಮಾಡುತ್ತೇನೆ. ಅಕ್ಕಿ ವಿತರಣೆ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದಂತ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಕೂಲಿ ಮಾಡುವವರು, ಬಡವರಿಗೆ ತೊಂದರೆ ಆಗಬಾರದು ಅಂತ ಅರ್ಹರ ಬಿಪಿಎಲ್ ಕಾರ್ಡ್ ಮತ್ತೆ ಆಯಕ್ಟೀವ್ ಮಾಡಲಾಗಿದೆ. ಯಾರಿಗೂ ತೊಂದರೆ ಆಗೋದಿಲ್ಲ ಅಂತ ತಿಳಿಸಿದರು.
ಅಂದಹಾಗೇ ರಾಜ್ಯಾಧ್ಯಂತ ಅರ್ಹರ ಬಿಪಿಎಲ್ ರೇಷನ್ ಕಾರ್ಡ್ ಸರಿ ಪಡಿಸುವಂತ ಪ್ರಕ್ರಿಯೆಯನ್ನು ಆಹಾರ ಇಲಾಖೆ ಚಾಲು ಮಾಡಿದೆ. ಸರ್ಕಾರದ ಸೂಚನೆಯಂತೆ ಅರ್ಹರ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿದ್ದರೇ ರೀ ಆಯಕ್ಟೀವ್ ಮಾಡುವ ಕೆಲಸದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ತೊಡಗಿದ್ದಾರೆ.