spot_img
spot_img

ರೈತರಿಗೆ ಯಶಸ್ವಿನಿ, ವಿದ್ಯಾರ್ಥಿಗಳಿಗೆ ಬಿಸಿಯೂಟ, ಮಹಿಳೆಯರಿಗೆ ಸ್ತ್ರೀಶಕ್ತಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ದೂರದರ್ಶಿ ಆಡಳಿತದ ರೂವಾರಿ ಎಸ್.ಎಂ. ಕೃಷ್ಣ ಅವರು ಮೂರು ಜನಪ್ರಿಯ ಯೋಜನೆಗಳ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಡುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ.

ಎಸ್.ಎಂ. ಕೃಷ್ಣ ರಾಜ್ಯ ಕಂಡ ದೂರದರ್ಶಿ, ಮುತ್ಸದ್ಧಿ, ಸಜ್ಜನ ರಾಜಕಾರಣಿ.‌ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅದರಲ್ಲೂ ಬೆಂಗಳೂರನ್ನು ಐಟಿ, ಬಿಟಿ ನಗರವಾಗಿ ಇಂದು ವಿಶ್ವ ಭೂ ಪಟದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ಬೀಜಾಂಕುರ ಬೆಂಬಲ ನೀಡಿ ಬೆಳೆಸಿದ್ದು ಇದೇ ಎಸ್.ಎಂ ಕೃಷ್ಣ. ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾದಂತ ಹಲವಾರು ಜನಪರ, ಜನಪ್ರಿಯ ಯೋಜನೆಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣರ ಆ ಮೂರು ಯೋಜನೆಗಳು ಈಗಲೂ ಕರುನಾಡಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ.

ಎಸ್.ಎಂ.ಕೃಷ್ಣ ರಾಜ್ಯ ಕಂಡ ದೂರದರ್ಶಿ ನಾಯಕ. ಸಜ್ಜನ, ಅಭಿವೃದ್ಧಿಯ ಮುನ್ನೋಟ ಹೊಂದಿದ ನಾಯಕ. ರಾಜ್ಯದ ಅಭಿವೃದ್ಧಿಯ ಪಥವನ್ನೇ ಬದಲಿಸಿದ ದಿಟ್ಟ ನಾಯಕರಾಗಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ 1999ರಿಂದ 2004ರ ವರೆಗೆ ಕರ್ನಾಟಕದ ಚುಕ್ಕಾಣಿಯನ್ನು ಹಿಡಿದಿದ್ದರು.

ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಎಸ್​ಎಂಕೆ ಅನೇಕ ಮೈಲಿಗಲ್ಲು ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಆಡಳಿತಗಾರರಿಗೆ ಆದರ್ಶಪ್ರಾಯರಾಗಿ ಹೊರಹೊಮ್ಮಿದ್ದರು. ತಮ್ಮ ಆಡಳಿತದಲ್ಲಿ ಎಸ್.ಎಂ. ಕೃಷ್ಣ ಅನೇಕ ಜನ ಪರ ಅಭಿವೃದ್ಧಿ, ಯೋಜನೆಗಳನ್ನು ಜಾರಿಗೊಳಿಸಿ, ದಿಟ್ಟ, ಅಭಿವೃದ್ಧಿ ಮುನ್ನೋಟದ ಆಡಳಿತಕ್ಕೆ ರಹದಾರಿ ಹಾಕಿದ್ದರು.

ಬೆಂಗಳೂರಿಗೆ ಐಟಿ, ಬಿಟಿ ನಗರದ ಬ್ರಾಂಡ್ ಬರುವಂತೆ ಮಾಡಿದ ಮೂಲ ಪುರುಷ ಇದೇ ಎಸ್.ಎಂ. ಕೃಷ್ಣ. ಅವರು ಮತ್ತು ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಲಿಕಾನ್ ಸಿಟಿಯಾಗುವಲ್ಲಿ ಬೀಜಾಂಕುರ ಹಾಕಿದ ದೂರದರ್ಶಿ ನಾಯಕರಾಗಿದ್ದಾರೆ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚಿಸಿದ್ದ ತೆರಿಗೆ ಸುಧಾರಣಾ ಆಯೋಗ, ಆಡಳಿತ ಸುಧಾರಣಾ ಆಯೋಗ, ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ, ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಐಟಿ ಮತ್ತು ಬಿಟಿ ಉದ್ಯಮಕ್ಕೆ ಕೊಟ್ಟ ಪ್ರೋತ್ಸಾಹ, ಗ್ರಾಮೀಣಪ್ರದೇಶದಲ್ಲಿ ವಸತಿ ನಿರ್ಮಾಣದಂತಹ ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿತ್ತು.

ಅದರಲ್ಲೂ ಎಸ್.ಎಂ. ಕೃಷ್ಣರ ಅಧಿಕಾರಾವಧಿಯಲ್ಲಿ ಜಾರಿಗೊಳಿಸಲಾಗಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ, ರೈತರಿಗೆ ಯಶಸ್ವಿನಿ ವಿಮೆ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಅಚ್ಚಳಿಯದೇ ಉಳಿದ ಜನಪ್ರಿಯ ಯೋಜನೆಗಳಾಗಿವೆ.

ಎಸ್.ಎಂ‌. ಕೃಷ್ಣ ಆಡಳಿತದಲ್ಲಿ ಅಚ್ಚಳಿಯದೇ ಉಳಿದಿರುವ ಕ್ರಾಂತಿಕಾರಕ ಯೋಜನೆ ಮಧ್ಯಾಹ್ನದ ಬಿಸಿಯೂಟ. ಹಸಿದ ಹೊಟ್ಟೆಯಲ್ಲಿ ಕಲಿಕೆ ಕಷ್ಟ ಎಂದು ಮನವರಿಕೆ ಮಾಡಿಕೊಂಡು ಮಧ್ಯಾಹ್ನದ ಊಟವನ್ನು ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ದಿನನಿತ್ಯ ಒದಗಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದ ಹೆಗ್ಗಳಿಕೆ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ.

ಆ ದೂರದೃಷ್ಟಿ ಯೋಜನೆ ಈಗಲೂ ಜಾರಿಯಲ್ಲಿದ್ದು, ಮಕ್ಕಳಿಗೆ ಅಕ್ಷರ ದಾಸೋಹದ ಜೊತೆ ಅನ್ನ ದಾಸೋಹವನ್ನು ಪರಿಚಯಿಸಿಕೊಟ್ಟ ದೂರದರ್ಶಿ ಯೋಜನೆಯಾಗಿದೆ. ಈಗಲೂ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆ ಮೂಲಕ ಅನ್ನ ದಾಸೋಹದ ಜೊತೆ ಅಕ್ಷರ ದಾಸೋಹದ ಮಹತ್ವವನ್ನು ಮನಗಾಣಿಸಿದರು. ಅನ್ನ ದಾಸೋಹ ಈಗ ರಾಷ್ಟ್ರೀಯ ಯೋಜನೆಯಾಗಿ ಜಾರಿಯಾಗುತ್ತಿದೆ.

ಎಸ್.ಎಂ.ಕೃಷ್ಣ ತಮ್ಮ ಅಧಿಕಾರವಧಿಯಲ್ಲಿ ತೆಗೆದುಕೊಂಡ ಮತ್ತೊಂದು ಕ್ರಾಂತಿಕಾರಿಕ ಹೆಜ್ಜೆ ಯಶಸ್ವಿನಿ ಯೋಜನೆ. ಈ ಯೋಜನೆ ರೈತರಿಗೆ ಪ್ರಪ್ರಥಮ ಬಾರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುವ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದರು. ಇದು ರಾಜ್ಯದ ಅತ್ಯಂತ ಜನಪ್ರಿಯ ಯೋಜನೆಯಲ್ಲೊಂದಾಗಿತ್ತು‌.

ರೈತರಿಗೆ ಯಾವುದೇ ಆರೋಗ್ಯ ವಿಮೆ ಇಲ್ಲದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಮುನ್ನೋಟದ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದರು. ಬಳಿಕದ ಸರ್ಕಾರಗಳು ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದರು. ಇದೀಗ ಮತ್ತೆ ಈ ಯೋಜನೆ ಹೊಸ ರೂಪದಲ್ಲಿ ಜಾರಿಯಲ್ಲಿದೆ.

ರಾಜ್ಯದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸ್ಥಾಪನೆಗೆ ನಾಂದಿ ಹಾಡುವ ಮೂಲಕ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬಿದ ಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ಜನಪ್ರಿಯ ಯೋಜನೆಯಾದ ಸ್ತ್ರೀ ಶಕ್ತಿ ಜಾರಿಗೆ ತಂದಿದ್ದರು. ರಾಜ್ಯದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ”ಸ್ತ್ರೀಶಕ್ತಿ” ಯೋಜನೆಯನ್ನು 2000-01ನೇ ವರ್ಷದಿಂದ ಜಾರಿಗೊಳಿಸಲಾಗಿತ್ತು.

ರಾಜ್ಯದಲ್ಲಿ 176 ತಾಲೂಕುಗಳ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ತ್ರೀಶಕ್ತಿ ಗುಂಪುಗಳನ್ನು ರಚನೆ ಮಾಡಲಾಗಿತ್ತು. ಯೋಜನೆಯ ಮೂಲಕ ಮಹಿಳೆಯರ ಅಬಿವೃದ್ಧಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಅನುದಾನವನ್ನು ಮೀಸಲಿಟ್ಟು ಬೃಹತ್ ಪ್ರಮಾಣದಲ್ಲಿ ಮಹಿಳೆಯರನ್ನು ಸಂಘಟಿಸಲು ಪ್ರಯತ್ನಿಸುವ ಮೂಲಕ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದರು.

ರೈತರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಸುಲಭವಾಗಿ, ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳು ಸಿಗಲಿ ಎಂಬ ಉದ್ದೇಶದಿಂದ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದು ಅತ್ಯಂತ ಯಶಸ್ವಿ ಆರೋಗ್ಯ ಸೇವೆಯಾಗಿ ಹೊರಹೊಮ್ಮಿತ್ತು. ಈ ಸಂಬಂಧ ವೈದ್ಯರು ಹಾಗೂ ರೈತರ ಜೊತೆ ಸಮಾಲೋಚನೆ ನಡೆಸಿ ನೀತಿಯನ್ನು ರೂಪಿಸಿ ಯೋಜನೆ ಜಾರಿಗೆ ತಂದಿದ್ದರು.

ಈ ಯೋಜನೆಯಡಿ ಕಳೆದ 14 ವರ್ಷಗಳಿಂದಲೂ ಸರ್ಕಾರಿ ಹಾಗೂ ಖಾಸಗಿಯ ಸುಮಾರು 780 ಅಧಿಕ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ. ಸರ್ಕಾರದಿಂದ ಸುಮಾರು 1,225 ಕೋಟಿ ರೂಪಾಯಿಗಳನ್ನು ಚಿಕಿತ್ಸೆಗಾಗಿ ವ್ಯಯ ಮಾಡಲಾಗಿದೆ. 43 ಲಕ್ಷಕ್ಕೂ ಅಧಿಕ ಮಂದಿ ಯೋಜನೆಯ ಫಲಾನುಭವಿಗಳಿದ್ದು ಹೃದಯ ಸೇರಿದಂತೆ ಒಟ್ಟು 823 ಶಸ್ತ್ರ ಚಿಕಿತ್ಸೆಗಳು ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಸುಲಭವಾಗಿ ಚಿಕಿತ್ಸೆ ಲಭ್ಯವಾಗುತ್ತಿದೆ.
ತುಮಕೂರಿನ ಸಿದ್ಧಗಂಗಾ ಮಠ ಮತ್ತು ಸುತ್ತೂರು ಮಠಗಳ ಭಕ್ತರಾಗಿದ್ದ ಎಸ್.ಎಂ.ಕೃಷ್ಣ, ಅಲ್ಲಿನ ಅಕ್ಷರ ದಾಸೋಹ ಅನ್ನದಾಸೋಹದಿಂದ ಪ್ರೇರಣೆ ಪಡೆದರು.

ಆ ಕಾರಣದಿಂದಲೇ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಲಾ ಮಕ್ಕಳು ಹಸಿವಿನಿಂದ ಬಳಲಬಾರದು ಎಂದು 2001ರಲ್ಲಿ ಮಧ್ಯಾಹ್ನದ ಬಿಸಿ ಊಟ ಯೋಜನೆ ಜಾರಿಗೆ ತಂದರು. ತಮ್ಮ ಆಡಳಿತಾವಧಿಯಲ್ಲಿ ಮಳೆ, ಬೆಳೆ ಇಲ್ಲದೆ, ಭೀಕರ ಬರ, ಅಶಾಂತಿಯ ವಾತಾವರಣ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾಗಿದ್ದವು. ಆ ಸಂದರ್ಭದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳಿಗೆ ನಮ್ಮ ಯಾವ ಕಾರ್ಯಕ್ರಮಗಳು ನಿಂತರು ಚಿಂತೆಯಿಲ್ಲ, ಯಾವುದೇ ಕಾರಣಕ್ಕೂ ಮಧ್ಯಾಹ್ನದ ಬಿಸಿ ಊಟ ಯೋಜನೆ ನಿಲ್ಲಬಾರದು ಎಂದು ಸೂಚಿಸಿದ್ದರು.‌ ಇದು ಅವರ ಜನಪರ ಕಾಳಜಿ, ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿತ್ತು.

ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಗೆ ಸಂಬಂಧಿಸಿದ ಯೋಜನೆ ಪರಿಚಯಿಸಿದಾಗ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ನಂತರದಲ್ಲಿ ಸ್ತ್ರೀಶಕ್ತಿ ಸಂಘಗಳು ಸಾಕಷ್ಟು ಬೆಳೆದವು. ಮಹಿಳೆಯರಿಗೆ ಆರ್ಥಿಕ ಪ್ರಗತಿಯನ್ನು ಸಾಧಿಸುವಂತಹ ಹಾಗೂ ಸಾಮಾಜಿಕ ಬದಲಾಣೆಗೆ ಸೂಕ್ತ ವಾತಾವರಣವನ್ನು ಮೂಡಿಸುವಂತಹ ಪ್ರಕ್ರಿಯೆಯನ್ನು ಬಲಪಡಿಸುವುದು.

ರಾಜ್ಯಾದ್ಯಂತ ಸ್ವಸಹಾಯ ಮಹಿಳಾ ಗುಂಪುಗಳನ್ನು ರಚಿಸುವುದು ಹಾಗೂ ಅವರಲ್ಲಿ ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆ ಮೂಡಿಸಿ ಸಂಪನ್ಮೂಲಗಳ ಮೇಲೆ ಹತೋಟಿ ಹಾಗೂ ಸಾಮೀಪ್ಯವನ್ನು ಸಾಧಿಸುವುದು.

ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹಿಳೆಯರನ್ನು ತೊಡಗಿಸುವುದರ ಮೂಲಕ ಬಡ ಮಹಿಳೆಯರ ಆದಾಯವನ್ನು ಹೆಚ್ಚಿಸಿ, ಆರ್ಥಿಕ ಸ್ಥಿರತೆಯನ್ನು ಮೂಡಿಸುವುದು ಇದರ ಧೇಯ್ಯೋದ್ದೇಶವಾಗಿದೆ. ಅಂದು ಎಸ್.ಎಂ. ಕೃಷ್ಣ ಆಡಳಿತದಲ್ಲಿ ಹಾಕಿದ್ದ ಸ್ತ್ರೀ ಶಕ್ತಿ ಗಿಡ ಇವತ್ತು ಹೆಮ್ಮರವಾಗಿ ಬೆಳೆದಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SHIVASENA SUPPORT TO BJP : ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

New Delhi News: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಔಪಚಾರಿಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಮಿತ್ರ ಪಕ್ಷ ಬಿಜೆಪಿಗೆ ಬೆಂಬಲ ನೀಡುವುದಾಗಿ SHIVASENA SUPPORT TO BJP...

SIGANDUR BRIDGE : ಅಂತಿಮ ಹಂತದಲ್ಲಿ ಸಿಗಂದೂರು ಸೇತುವೆ ಕಾಮಗಾರಿ, ಕೆಲವೇ ತಿಂಗಳಲ್ಲಿ ಲೋಕಾರ್ಪಣೆShimoga News: ಸಾಗರ ತಾಲೂಕಿನ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ...

Shivamogga News: ಸಾಗರ ತಾಲೂಕಿನ SIGANDUR BRIDGE ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ ಮೇ ನಲ್ಲಿ ಲೋಕಾರ್ಪಣೆಯಾಗಲಿದೆ. ಹೌದು ನಾಡಿಗೆ...

HOW TO AWARE OF CYBER FRAUD : ಹಾಗಿದ್ರೆ ಮಾತ್ರ ಸೈಬರ್ ವಂಚನೆಯಿಂದ ಬಚಾವ್ ಆಗಲು ಸಾಧ್ಯ

Hyderabad News: ನಿಜವೆಂದು ತೋರುವ ಈ ನಕಲಿ ವೆಬ್​​ಸೈಟ್​ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಬೇಕು, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಇಲ್ಲಿದೆ...

COFFEE EXPORTS : 1.29 ಶತಕೋಟಿ ಡಾಲರ್ಗೆ ತಲುಪಿದ ಭಾರತದ ಕಾಫಿ ರಫ್ತು

New Delhi News: ಭಾರತದ COFFEE ರಫ್ತು ದ್ವಿಗುಣಗೊಂಡಿದೆ. ಈ ಮೂಲಕ ದೇಶದ ರಫ್ತಿನ ಪ್ರಮಾಣ ಹೆಚ್ಚಿಸಲು ತನ್ನದೇ ಕೊಡುಗೆ ನೀಡಿದೆ.ಉತ್ತಮ ಗುಣಮಟ್ಟ ಮತ್ತು ಅನನ್ಯ...