ಮೈಸೂರು: ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಅವರ ಹಣೆಗೆ ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರು ಕುಂಕುಮ ಇಟ್ಟಿದ್ದಾರೆ.
ಇದನ್ನೂ ಓದಿ: ಚರಂಡಿ ಪ್ರವಾಹಕ್ಕೆ ಕೊಚ್ಚಿಹೋದ IAS ಕನಸು.. ಶ್ರೇಯಾ ಯಾದವ್ ಕುಟುಂಬದ ಭರವಸೆ ಛಿದ್ರ, ಛಿದ್ರ
ಆಷಾಢ ಮಾಸದ 3ನೇ ಶುಕ್ರವಾರ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಹಾಗೂ ಸಂಸದ ಸುನೀಲ್ ಬೋಸ್ ಚಾಮುಂಡಿ ಬೆಟ್ಟಕ್ಕೆ ಜೊತೆಯಾಗಿ ಬಂದಿದ್ದರು. ಈ ವೇಳೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ನೆರವೇರಿಸುವಾಗ ಬೆಂಬಲಿಗರ ಸಮ್ಮುಖದಲ್ಲೇ ಸವಿತಾ ಅವರ ಹಣೆಗೆ ಸಚಿವ ಹೆಚ್.ಸಿ ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ಕುಂಕುಮ ಇಟ್ಟಿದ್ದಾರೆ.
ಸುನೀಲ್ ಬೋಸ್ ಹಾಗೂ ಸವಿತಾ ಅವರ ನಡೆ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾದೆ. ಈ ಸಲದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಮದುವೆಯಾಗಿಲ್ಲ ಎಂದು ಸುನೀಲ್ ಬೋಸ್ ಅಫಿಡೆವಿಟ್ ಸಲ್ಲಿಸಿದ್ದರು. ಫೋಟೋ ವೈರಲ್ ಆಗ್ತಿದ್ದಂತೆ ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.