spot_img
spot_img

Swiggy: ಕೋಟ್ಯಧಿಪತಿಗಳಾಗಿ ಬದಲಾದ 500 ಮಂದಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಸ್ವಿಗ್ಗಿ ಬುಧವಾರ ಷೇರುಪೇಟೆಯಲ್ಲಿ ಭರ್ಜರಿಯಾಗಿ ಲಿಸ್ಟ್‌ ಆಗಿದ್ದು, ಬಳಿಕವೂ ಕಂಪನಿ ಷೇರುಗಳು ಭಾರೀ ಏರಿಕೆ ಕಂಡಿವೆ. ಇದಾದ ಬೆನ್ನಲ್ಲೇ ಸ್ವಿಗ್ಗಿಯ 500 ಉದ್ಯೋಗಿಗಳು ಒಂದೇ ದಿನದಲ್ಲಿ ಕೋಟ್ಯಧಿಪತಿಗಳಾಗಿ ಬದಲಾಗಿದ್ದಾರೆ. ಇವರಲ್ಲಿ 70 ಉದ್ಯೋಗಿಗಳು ಕನಿಷ್ಠ 8.5 ಕೋಟಿ ರೂ. (1 ಮಿಲಿಯನ್ ಡಾಲರ್‌) ಪಡೆದುಕೊಂಡಿದ್ದು, ಮಿಲಿಯನೇರ್‌ಗಳಾಗಿ ರೂಪುಗೊಂಡಿದ್ದಾರೆ.ಇದಲ್ಲದೆ, ಅತಿ ದೊಡ್ಡ ಐಪಿಒಗಳಲ್ಲಿ ಒಂದಾದ ಸ್ವಿಗ್ಗಿ ತನ್ನ 5,000 ಉದ್ಯೋಗಿಗಳಿಗೆ 9,000 ಕೋಟಿ ರೂ.

ಮೊತ್ತದ ಷೇರು ಹಂಚಿಕೆ ಮಾಡಿದೆ. ಇವರೆಲ್ಲ ಕಂಪನಿ ಜೊತೆ ಸುದೀರ್ಘ ಕಾಲದಿಂದ ಗುರುತಿಸಿಕೊಂಡವರಾಗಿದ್ದಾರೆ.

ಉದ್ಯೋಗಿ ಷೇರು ಆಯ್ಕೆ (ಇಎಸ್‌ಒಪಿ)ಯಡಿ ಸ್ಟಾರ್ಟಪ್‌ ಒಂದು ಈ ಪ್ರಮಾಣದ ಷೇರು ಹಂಚಿಕೆ ಮಾಡುವುದು ತೀರಾ ಅಪರೂಪದ ಬೆಳವಣಿಗೆಯಾಗಿದೆ. ಸ್ವಿಗ್ಗಿಗಿಂತ ಮುನ್ನ ಈ ಹಿಂದೆ ಫ್ಲಿಪ್‌ಕಾರ್ಟ್‌ ಕೂಡ ಇದೇ ರೀತಿ ಷೇರುಗಳನ್ನು ಹಂಚಿಕೆ ಮಾಡಿತ್ತು.

ಫ್ಲಿಪ್‌ಕಾರ್ಟ್‌ ಕಂಪನಿಯ ಹಿಂದಿನ ಮತ್ತು ಹಾಲಿ ಉದ್ಯೋಗಿಗಳಿಗೆ 11,600-12,500 ಕೋಟಿ ರೂ.ಗಳನ್ನು ನೀಡಿತ್ತು. ಇದು ಈವರೆಗೆ ಅತಿ ದೊಡ್ಡ ಸಂಪತ್ತು ಸೃಷ್ಟಿಯ ಬೆಳವಣಿಗೆಯಾಗಿದೆ. ಫ್ಲಿಪ್‌ಕಾರ್ಟ್‌ನ ಹಣ ಪಾವತಿಯಲ್ಲಿ 2023ರ ಜುಲೈನಲ್ಲಿ 17,000 ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ ಹಂಚಿಕೆ ಮಾಡಿದ 5,800 ಕೋಟಿ ರೂ. ಕೂಡ ಸೇರಿದೆ.

ವಾಲ್‌ಮಾರ್ಟ್ ಮಾಲೀಕತ್ವದ ದೈತ್ಯ ಇ ಕಾಮರ್ಸ್‌ ಕಂಪನಿಯ ಅತಿದೊಡ್ಡ ಇಎಸ್‌ಇಪಿ ಪಾವತಿ ಇದಾಗಿದ್ದು, ಕಂಪನಿಯು ಕಳೆದ ವರ್ಷಗಳಲ್ಲಿ ಒಟ್ಟಾರೆಯಾಗಿ ಐದು ಬಾರಿ ಷೇರುಗಳ ಮರುಖರೀದಿ ನಡೆಸಿದ್ದು, 12,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಬೈಬ್ಯಾಕ್‌ ಮಾಡಿದೆ.

ಇತರ ಸ್ಟಾರ್ಟಪ್‌ಗಳು ಕೂಡ ಉದ್ಯೋಗಿಗಳ ಕೈಗೆ ಹಣ ನೀಡಿವೆ. ಆದರೆ, ಇದ್ಯಾವುದೂ ಫ್ಲಿಪ್‌ಕಾರ್ಟ್‌ ಹಾಗೂ ಸ್ವಿಗ್ಗಿಗೆ ಸರಿಸಮನಾಗಿಲ್ಲ.

ಐಪಿಒಗೆ ಮುನ್ನ ಕಳೆದ ತಿಂಗಳಷ್ಟೇ ಸ್ವಿಗ್ಗಿಯ ಸಹ ಸಂಸ್ಥಾಪಕ ಶ್ರೀಹರ್ಷ ಮಜೆಟಿ, ನಂದನ್‌ ರೆಡ್ಡಿ, ಫಾನಿ ಕಿಶನ್‌, ಫುಡ್‌ ಮಾರ್ಕೆಟ್‌ಪ್ಲೇಸ್‌ ಸಿಇಒ ರೋಹಿತ್‌ ಕಪೂರ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಮುಖ್ಯಸ್ಥ ಅಮಿತೇಶ್‌ ಝಾ, ಸಿಎಫ್‌ಒ ರಾಹುಲ್‌ ಬೋಥ್ರಾ, ಎಚ್‌ಆರ್‌ ಮುಖ್ಯಸ್ಥ ಗಿರೀಶ್‌ ಮೆನನ್‌, ಸಿಟಿಒ ಮಧುಸೂದನ್‌ ರಾವ್‌ ಹಾಗೂ ಇತರರು 1,600 ಕೋಟಿ ರೂ. ಮೊತ್ತದ ಷೇರುಗಳನ್ನು ಸ್ವೀಕರಿಸಿದ್ದರು.

ಸ್ವಿಗ್ಗಿಯ ಬದ್ಧವೈರಿ ಜೊಮ್ಯಾಟೋ ಕೂಡ 2021ರಲ್ಲಿ ತನ್ನ ಉದ್ಯೋಗಿಗಳಿಗೆ ಆಸ್ತಿ ಸೃಷ್ಟಿಸಿತ್ತು. ಆ ವೇಳೆ ಕಂಪನಿ ಉದ್ಯೋಗಿಗಳಿಗೆ 7,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು.

ಐಪಿಒದಲ್ಲಿ ಷೇರು ಹಂಚಿಕೆ ದರ 390 ರೂ.ಗೆ ಹೋಲಿಸಿದರೆ ಬುಧವಾರ ಎನ್‌ಎಸ್‌ಇನಲ್ಲಿ ಸ್ವಿಗ್ಗಿ ಷೇರುಗಳು ಶೇ. 7.69 ಪ್ರೀಮಿಯಂ ದರದಲ್ಲಿ ಲಿಸ್ಟ್‌ ಆಗಿದ್ದವು. ಎನ್‌ಎಸ್‌ಇನಲ್ಲಿ 420 ರೂ.ನಲ್ಲಿ ಲಿಸ್ಟ್‌ ಆಗಿದ್ದರೆ, ಬಿಎಸ್‌ಇನಲ್ಲಿ ಶೇ. 5.6ರಷ್ಟು ಪ್ರೀಮಿಯಂನೊಂದಿಗೆ 412 ರೂ.ನಲ್ಲಿ ಲಿಸ್ಟ್‌ ಆಗಿತ್ತು.
ಆದರೆ, ಲಿಸ್ಟ್‌ ಆದ ಬಳಿಕವೂ ಷೇರು ಒಂದೇ ಸಮನೆ ಏರಿಕೆ ಕಂಡಿದೆ. ಒಂದು ಹಂತದಲ್ಲಂತೂ ಷೇರು ಶೇ. 19ಕ್ಕಿಂತ ಹೆಚ್ಚು ಏರಿಕೆ ಕಂಡು 465.80 ರೂ.ಗೆ ತಲುಪಿತ್ತು.

ಬಳಿಕ ದಿನದಂತ್ಯಕ್ಕೆ ಷೇರು 66 ರೂ. ಅಥವಾ ಶೇ. 16.92ರಷ್ಟು ಗಳಿಕೆಯೊಂದಿಗೆ 456ರಲ್ಲಿ ವಹಿವಾಟು ಮುಗಿಸಿತು.
ಇದರಿಂದ ಐಪಿಒ ಹೂಡಿಕೆದಾರರು, ಇಎಸ್‌ಒಪಿ ಅಡಿಯಲ್ಲಿ ಕಂಪನಿಯಿಂದ ಷೇರು ಪಡೆದವರು ಭರ್ಜರಿ ಲಾಭ ಗಳಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಸ್ಪರ್ಧಿಗಳ ಹರಸಾಹಸ

ಕನ್ನಡದ ಬಿಗ್​ಬಾಸ್​ ಸೀಸನ್​ 11ರಲ್ಲಿ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಸಖತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ...

ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಕನ್ಯಾಕುಮಾರಿ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮನ್ನಾರ್ ಗಲ್ಫ್...

ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹ : ಪಂಚಮಸಾಲಿಗರ ಹೋರಾಟ ತೀವ್ರ!

ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಸುವರ್ಣಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ವಿಪಕ್ಷ ನಾಯಕ ಆರ್, ಅಶೋಕ್ ನೇತೃತ್ವದಲ್ಲಿ...

ಆಸ್ತಿ ತೆರಿಗೆ ಕಟ್ಟಲು ನಿರಾಕರಣೆ : ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು

ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ...